ಕಡಿಮೆ ಟಿಕೆಟ್ ದರದಲ್ಲಿ ವಿಮಾನಯಾನ ಮಾಡಬೇಕೆ! ಕೇವಲ 1,705ರೂಗೆ ಏರ್ ಇಂಡಿಯಾದಲ್ಲಿ ಇಂದೇ ಟಿಕೆಟ್ ಕಾಯ್ದಿರಿಸಿ, ಆಗಸದಲ್ಲಿ ಹಾರುತ್ತಾ ಆನಂದಿಸಿ|

ವಿಮಾನದಲ್ಲಿ ಹೋಗಬೇಕೆಂಬ ಆಸೆಯೇ ನಿಮಗೆ? ಆದರೆ ಅದರ ಟಿಕೇಟ್ ದರ ನಿಮ್ಮ ಕೈಗೆಟುಕುತ್ತಿಲ್ಲವೆ? ಕಡಿಮೆ ದುಡ್ಡಿಗೆ ವಿಮಾನ ಪ್ರಯಾಣ ನಿಮ್ಮದಾಗಬೇಕೇ? ನಿಮಗೊಂದು ಸುವರ್ಣಾವಕಾಶ ಇಲ್ಲಿದೆ ನೋಡಿ. ಹಾಗಿದ್ದರೆ ಇಂದೇ ಏರ್ ಇಂಡಿಯಾ ವಿಮಾನ ಪ್ರಯಾಣದ ಟಿಕೆಟ್ ಖರೀದಿಸಿ, ಆನಂದಿಸಿ.

 

ದೇಶೀಯ ವಿಮಾನಯಾನ ಕಂಪನಿಯು ‘ಫ್ಲೈ ಏರ್ ಇಂಡಿಯಾ ಸೇಲ್’ ಅಂಗವಾಗಿ ರಿಯಾಯಿತಿ ದರದಲ್ಲಿ (Discount Offer) ಟಿಕೆಟ್ ಸೌಲಭ್ಯವನ್ನು ಘೋಷಿಸಿದ್ದು, ಫೆಬ್ರವರಿ 1ರಿಂದ ಸೆಪ್ಟೆಂಬರ್ 30ರ ವರೆಗೆ ಪ್ರಯಾಣಿಸಲು ಅವಕಾಶವಿದೆ. ಆದರೆ, ಇಂದ ಅಂದರೆ ಜನವರಿ 23ರೇದು ಟಿಕೆಟ್ ಕಾಯ್ದಿರಿಸಬೇಕು. ಸೀಮಿತ ಆಸನಗಳಿಗೆ ಮಾತ್ರ ರಿಯಾಯಿತಿ ದರದ ಕೊಡುಗೆ ಲಭ್ಯವಿರಲಿದೆ.

ಈ ವಿಚಾರವಾಗಿ ಏರ್ ಇಂಡಿಯಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಜನವರಿ 23ರ ಬೆಳಗ್ಗೆಯಿಂದ ರಾತ್ರಿವರೆಗೆ ಬುಕಿಂಗ್ ಮಾಡಬಹುದು ಎಂದು ಮಾಹಿತಿ ನೀಡಿದೆ. ಯಾವ ನಗರಗಳಿಗೆಲ್ಲ ರಿಯಾಯಿತಿ ದರದ ಸೌಲಭ್ಯವಿದೆ ಎಂಬುದನ್ನೂ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಒಂದು ಬಾರಿಯ ಪ್ರಯಾಣಕ್ಕೆ ಮಾತ್ರ ಈ ಕೊಡುಗೆ ಅನ್ವಯವಾಗಲಿದೆ. ವಿಮಾನಯಾನ ಕ್ಷೇತ್ರವು ಕೋವಿಡ್ ಸಂಕಷ್ಟದಿಂದ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲೇ ಏರ್ ಇಂಡಿಯಾ ವಿಶೇಷ ರಿಯಾಯಿತಿ ದರದ ಕೊಡುಗೆ ಘೋಷಿಸಿದೆ.

ದಿಮಾಪುರದಿಂದ ಗುವಾಹಟಿಗೆ 1,783 ರೂ, ದೆಹಲಿಯಿಂದ ಮುಂಬೈಗೆ 5,075 ರೂ, ಚೆನ್ನೈಯಿಂದ ದೆಹಲಿಗೆ 5,895 ರೂ, ಬೆಂಗಳೂರಿನಿಂದ ಮುಂಬೈಗೆ 2,319 ರೂ, ದೆಹಲಿಯಿಂದ ಉದಯಪುರಕ್ಕೆ 3,680 ರೂ, ದೆಹಲಿಯಿಂದ ಗೋವಾಕ್ಕೆ 5,656 ರೂ, ದೆಹಲಿಯಿಂದ ಪೋರ್ಟ್ ಬಿಹಾರಕ್ಕೆ 8,690 ರೂ, ದೆಹಲಿಯಿಂದ ಶ್ರೀನಗರಕ್ಕೆ 3,730 ರೂ, ಅಹಮದಾಬಾದ್​ನಿಂದ ಮುಂಬೈಗೆ 1,806 ರೂ, ಗೋವಾದಿಂದ ಮುಂಬೈಗೆ 2,830 ರೂ.ನಲ್ಲಿ ಪ್ರಯಾಣಿಸಬಹುದು ಎಂದು ಏರ್ ಇಂಡಿಯಾ ಪ್ರಕಟಣೆ ತಿಳಿಸಿದೆ.

ಬುಕಿಂಗ್ ಮಾಡುವುದು ಹೇಗೆ ಗೊತ್ತಾ? ವಿಮಾನಯಾನ ಕಂಪನಿಯ ಅಧಿಕೃತ ಏಜೆಂಟ್​ಗಳು, ಆನ್​​ಲೈನ್ ತಾಣಗಳ ಮೂಲಕವೂ ಕಾಯ್ದಿರಿಸಬಹುದಾಗಿದೆ. ಈ ರಿಯಾಯಿತಿ ದರದ ಕೊಡುಗೆಯು ದೇಶೀಯ ಎಕಾನಮಿ ದರ್ಜೆಯ ಪ್ರಯಾಣಕ್ಕೆ ಮಾತ್ರ ಅನ್ವಯವಾಗಲಿದೆ. 1,705 ರೂ.ನಿಂದ ರಿಯಾಯಿತಿ ದರದ ಟಿಕೆಟ್ ಲಭ್ಯವಾಗಿದೆ. ದೇಶೀಯ 49 ನಿಲ್ದಾಣಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ದೊರೆಯಲಿದೆ.

Leave A Reply

Your email address will not be published.