ಅತಿ ಶೀಘ್ರದಲ್ಲಿ ವೀಕೆಂಡ್ ವಿತ್ ರಮೇಶ್ !! ಈ ಬಾರಿಯ ಸಾಧಕರ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ??
ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿ ಜೀ ಕನ್ನಡ ಮನರಂಜನೆಯ ಸರಮಾಲೆಯನ್ನೇ ವೀಕ್ಷಕರಿಗೆ ನೀಡುತ್ತಾ ಹದಿಹರೆಯದವರಿಂದ ಹಿಡಿದು ವಯಸ್ಸಾದವರ ರ ವರೆಗೂ ಎಲ್ಲರೂ ನೆಚ್ಚಿಕೊಂಡು ಮೆಚ್ಚಿಕೊಂಡು ನೋಡುವ ಅದ್ದೂರಿ ಕಾರ್ಯಕ್ರಮ ಪ್ರಸಾರ ಮಾಡುತ್ತ ಝೀ ಕನ್ನಡ ವಾಹಿನಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮಾತಿನಲ್ಲೇ ಮೋಡಿ ಮಾಡುವ ನಿರೂಪಕಿ ಅನುಶ್ರೀ , ಮಾಸ್ಟರ್ ಆನಂದ್ ಜೋಡಿಯ ಕಮಾಲ್ ಸರಿಗಮಪ ಚಾಂಪಿಯನ್ ಷಿಪ್ ನೋಡುಗರ ಕಣ್ಣಿಗೆ ಹಬ್ಬ ಕಿವಿಗೆ ಇಂಪಿನ ಸವಿಯ ನಡುವೆ ಮನರಂಜನೆಯ ಉಣಬಡಿಸುವ ‘ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್’ ಮೂಲಕ ಕಾಮಿಡಿ ಕಿಲಾಡಿಗಳು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದು ಗೊತ್ತಿರುವ ವಿಚಾರವೇ. ಈ ಹಿಂದೆ ಜೀ ಕನ್ನಡದಲ್ಲಿ ಎಲ್ಲರ ನೆಚ್ಚಿನ ಶೋ ಎಂದು ಗುರುತಿಸಿಕೊಂಡಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೊಮ್ಮೆ ಜನರನ್ನು ರಂಜಿಸಲು ಅತಿ ಶೀಘ್ರದಲ್ಲಿಯೆ ಬರಲಿದೆ ಎನ್ನಲಾಗುತ್ತಿದೆ.
ಸದ್ಯದಲ್ಲೇ ಕಾಮಿಡಿ ಕಿಲಾಡಿಗಳು ಸೀಸನ್ 4 ಮುಕ್ತಾಯವಾಗಲಿದ್ದು , ಅದು ಮುಗಿದ ನಂತರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಲಿದೆ ಎನ್ನಲಾಗುತ್ತಿದೆ. ರಮೇಶ್ ಅರವಿಂದ್ ಅವರ ಸಾರಥ್ಯದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಸಾಧನೆಗೈದ ಮಹನೀಯರ ಸ್ಪೂರ್ತಿದಾಯಕ ನಿಜ ಜೀವನದ ಕೈಗನ್ನಡಿಯಂತೆ ತೋರಿಸುವ ಮೂಲಕ ಉಳಿದವರು ಕೂಡ ಆದರ್ಶ ವ್ಯಕ್ತಿ ಆಗಲು ಪ್ರೇರೇಪಿಸುವ ಕಾರ್ಯಕ್ರಮವಾಗಿ ವೀಕೆಂಡ್ ವಿತ್ ರಮೇಶ್ ಜನರ ಮನದಲ್ಲಿ ಸ್ಥಾನ ಪಡೆದಿದೆ.
ಮೊದಲ ಸೀಸನ್ ಆಗಸ್ಟ್ 2 , 2014 ರಂದು ಪ್ರಸಾರವಾಗಿದ್ದು, ಎಲ್ಲರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಮೊದಲ ಆಹ್ವಾನಿತರಾಗಿದ್ದರು. ಈಗಾಗಲೇ 4 ವೀಕೆಂಡ್ ವಿತ್ ರಮೇಶ್ ಸೀಸನ್‍ಗಳು ಮುಗಿದಿದ್ದು, ಇನ್ನೂ ಮತ್ತೊಮ್ಮೆ ಶುರುವಾಗುವ ಸೀಸನ್ ಐದನೇ ಸೀಸನ್ ಆಗಿರಲಿದೆ. 2014 ಆಗಸ್ಟ್ 2 ರಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಿದ್ದು, ಈವರೆಗೆ 104 ಎಪಿಸೋಡ್ ಗಳಾಗಿವೆ ಎನ್ನಲಾಗಿದೆ. ಈ ಕಾರ್ಯಕ್ರಮದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ಮೂಲಕ ಜನಪ್ರಿಯತೆಗಳಿಸಿ ತೆರೆಮರೆಯಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಮಹನೀಯರನ್ನು ಗುರುತಿಸುವ ಮಹತ್ಕಾರ್ಯವನ್ನು ಝೀ ಕನ್ನಡ ವಾಹಿನಿ ನಡೆಸಿಕೊಂಡು ಬರುತ್ತಿದೆ.
ಸದ್ಯ ಬೆಂಗಳೂರಿನ ಚಿಕ್ಕಲಸಂದ್ರ ಪ್ರದೇಶದಲ್ಲಿರುವ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಣದ ಕಾರ್ಯ ನಡೆಯುತ್ತಿವೆ ಎನ್ನಲಾಗಿದೆ. ಈಗ ಪ್ರಸಾರಗೊಂಡ 4 ಸೀಸನ್‍ಗಳಲ್ಲಿ ಹಲವಾರು ಸಾಧಕರು ತುಳಿದು ಬಂದ ಹಾದಿಯ ಬಗ್ಗೆ ಕಷ್ಟಗಳ ನಡುವೆಯೂ ಛಲ ಬಿಡದೇ ಯಶಸ್ಸು ಗಳಿಸಿದ ವಿಧಾನದ ಬಗ್ಗೆ ತಮ್ಮ ಅನುಭವ, ಅಭಿಪ್ರಾಯಗಳ ಬಗ್ಗೆ ಸಾಧಕರು ವೀಕ್ಷಕರ ಮುಂದೆ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ. ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೂಡ ಜನರಲ್ಲಿ ಅನೇಕ ನಿರೀಕ್ಷೆಯ ಜೊತೆ ಕೂತೂಹಲ ಮೂಡಿಸಿರುವುದಂತು ಸುಳ್ಳಲ್ಲ.