ಸಿದ್ದರಾಮಯ್ಯನವರಿಗೆ ಬಂತು ಇನ್ನೊಂದು ಹೊಸ ಹೆಸ್ರು! ಈ ಹಿಂದೆ ಸಿದ್ರಾಮುಲ್ಲಾ ಖಾನ್ ಎಂದಿದ್ದ ನಾಮ ಶಾಸ್ತ್ರಜ್ಞ ಸಿಟಿ ರವಿಯಿಂದಲೇ ಆಯ್ತು ಹೊಸ ನಾಮಕರಣ

ಮತ್ತೆ ಸಿಟಿ ರವಿ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿದ್ದಾರೆ. ಇವತ್ತು ಸಿದ್ದರಾಮಯ್ಯನವರಿಗೆ ಹೆಸರಿಡುವ ಶಾಸ್ತ್ರ. ಅದನ್ನು ನಡೆಸಿಕೊಟ್ಟದ್ದು ನಾಮಕರಣ ಶಾಸ್ತ್ರಜ್ಞ ಶ್ರೀ ಶ್ರೀ ಸಿಟಿ ರವಿಯವರು. ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು ಬಿಜೆಪಿ ಹಾಗೂ ಬಲಪಂಥೀಯರಿಂದ ಹೊಗಳಿಕೆಗೆ ಮತ್ತು ಕಾಂಗ್ರೆಸ್ ಹಾಗೂ ಎಡಪಂಥೀಯರಿಂದ ಟೀಕೆಗೆ ಒಳಗಾಗಿದ್ದ ಸಿ.ಟಿ ರವಿ ಈಗ ಸಿದ್ದುಗೆ ಮತ್ತೊಂದು ಹೊಚ್ಚ ಹೊಸ ನಾಮಕರಣ ಮಾಡಿದ್ದಾರೆ.

ಸಿದ್ದರಾಮಯ್ಯನವರಿಗೆ ನಿಜಕ್ಕೂ ತಮ್ಮ ಒರಿಜಿನಲ್ ಹೆಸರೇ ಮರೆತುಹೋಗಿದೆಯಂತೆ. ಕಾರಣ ಸಿದ್ದರಾಮಯ್ಯ, ಶಾರ್ಟ್ ಆಗಿ ಸಿದ್ದು, ಸ್ವೀಟ್ ಆಗಿ ಸಿದ್ರಾಮು ಅಂತ ಎಲ್ರೂ ಕರೀತಾರೆ. ಸಿದ್ದರಾಮಯ್ಯನ ಒರಟು ಮಾತು ಮತ್ತು ಹವಾ ಭಾವ ನೋಡಿದ ಜನ ಅವರನ್ನು ಟಗರು ಅಂದ್ರು. ಆ ಹೆಸರು ಕೂಡಾ ಜನಮಾನಸದ ನೆನಪಿನಲ್ಲಿ ಉಳ್ಕೊಳ್ತು. ಹಾವೇರಿಯಲ್ಲಿ ಅವನೊಬ್ಬ, ಸಿದ್ದು ಭಾಷಣ ಕೇಳಲು ಮುಂದಿನ ಪಂಕ್ತಿಯಲ್ಲಿ ಕೂತವ ಉತ್ಸಾಹದಿಂದ ” ಹೌದು ಹುಲ್ಯಾ ” ಅಂದುಬಿಟ್ಟ. ಹೌದು ಹುಲಿಯಾ ಡೈಲಾಗು ಜಗತ್ಪ್ರಸಿದ್ಧವಾಯಿತು. ಹುಲಿಯಾ ಅಂತಲೇ ಸಿದ್ದರಾಮಯ್ಯನನ್ನು ಕರೆಯಲು ಶುರುಮಾಡಿದರು ಜನ. ಈಗ ಸಿದ್ದರಾಮಯ್ಯನವರ ಹೆಸರಿನ ಪಟ್ಟಿಗೆ ಹೊಸ ಹೆಸರು ಕೂಡಿಕೆ ಆಗಿದೆ.

ಇಂದು ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಪ್ರಧಾನ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಈಗ ಸಿದ್ದರಾಮಯ್ಯಗೆ ಹೊಸ ನಾಮಕರಣ ಮಾಡಿದ್ದು, ಸಿದ್ದಣ್ಣನಿಗೆ ‘ ಸುಳ್ಳು ರಾಮಯ್ಯ ‘ ಎಂದು ಕರೆದಿದ್ದಾರೆ.’ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸುಳ್ಳು ರಾಮಯ್ಯ ಅನ್ನೋದು ಸೂಕ್ತ ಪದವಾಗುತ್ತೆ. ಬಾಯಿ ಬಿಟ್ಟರೆ ಪತಪತ ಉದುರೋದು ಸುಳ್ಳು. ಜನ ಇಟ್ಟಿದ್ದು ಸಿದ್ರಾಮುಲ್ಲಾ ಖಾನ್ ಅಂತ. ನಾನು ಇಟ್ಟಿರುವ ಹೆಸರು ಸುಳ್ಳುರಾಮಯ್ಯ ಎಂದು’ ಎಂದಿದ್ದಾರೆ ಸೀಟಿ.

ಇತ್ತೀಚಿಗೆ ಸಿದ್ದರಾಮಯ್ಯ ಅವರು ಮಾತನಾಡುತ್ತಾ ಇರೋದು ನೋಡಿದರೆ ಅವರ ಮಾನಸಿಕ ಆರೋಗ್ಯದ ಬಗ್ಗೆ ಸಂಶಯ ಶುರುವಾಗಿದೆ. ಸಾವರ್ಕರ್, ಹಿಟ್ಲರ್‌ನಿಂದ ಪ್ರಭಾವಿತರಾದವರು ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇಂದಿರಾಗಾಂಧಿ ಕಾಲದಲ್ಲಿ ಸಾವರ್ಕರ್ ಹೆಸರಿನಲ್ಲಿ ಅಂಚೆ ಚೀಟಿ ತಂದಿದ್ದಾರೆ. ಹಿಟ್ಲರ್ ಹೆಸರಿನಲ್ಲಿ ಅವರು ಅಂಚೆ ಚೀಟಿ ತಂದಿದ್ದರೆ, ಸಿದ್ದರಾಮಯ್ಯ ದೇಶಭಕ್ತಿ ಸಂಘಟನೆಗಳನ್ನು ದೂರೋದು, ಇಸ್ಲಾಂ ರಾಷ್ಟ್ರ ಮಾಡಬೇಕು ಎಂದು ಬಯಸುವ ಎಸ್‌ಡಿಪಿಐ ಸಂಘಟನೆಗಳನ್ನು ಆಲಂಗಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ ಎಂದು ಸೀಟಿ ರವಿ ಕಿಡಿ ಹಾರಿಸಿದ್ದಾರೆ.

ನಮ್ಮ ಮೈಸೂರು ಸಂಸ್ಥಾನ ಮೀಸಲಾತಿ ಕೊಟ್ಟು ಅಭಿವೃದ್ಧಿ ಮಾಡಲು ಯೋಜನೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ರನ್ನು ಸಿದ್ದರಾಮಯ್ಯ ನೆನಪಿಸಿಕೊಳ್ಳೋದಿಲ್ಲ. ಅವರು ಕನ್ನಡದ ಅಡಳಿತ ಭಾಷೆಯ ಬದಲಿಗೆ ಪರ್ಷಿಯನ್ ಭಾಷೆಯನ್ನ ಹೇರಿದ ಟಿಪ್ಪುವನ್ನು ನೆನಪಿಸಿಕೊಳ್ಳುತ್ತಾರೆ. ಇದೆಲ್ಲವೂ ನೋಡಿದಾಗ ಏನು ಅನ್ನಿಸುತ್ತದೆ ಎನ್ನುವುದನ್ನು ನಿಮ್ಮ ನಿರ್ಮಾನಕ್ಕೆ ಬಿಟ್ಟಿದ್ದೇನೆ. ಜಿನ್ನಾ ಏನಾದ್ರೂ ಬದುಕಿದ್ರೆ ಸಿದ್ದರಾಮಯ್ಯ ಅವರನ್ನು ನೋಡಿ ‘ಯಾರೋ ನನಗೆ ಕಟ್ಟರ್ ಕಾಂಪಿಟೇಟರ್ ಇದ್ದಾನೆ’ ಎಂದು ಜಿನ್ನಾಗೆ ಅನಿಸುತ್ತಿತ್ತು. ಜಿನ್ನಾನನ್ನು ಮೀರಿಸುವ ರೀತಿ ನಡುವಳಿಕೆ ಇದ್ದೇ ಸಿದ್ದರಾಮಯ್ಯ ಅವರದ್ದು. ಅವರ ನಡುವಳಿಕೆ ಜಿನ್ನಾ ಮಾನಸಿಕತೆಯ ನಡುವಳಿಕೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿ ಹೊಸ ಬಾಂಬ್ ಸಿಡಿಸಿದ್ದಾರೆ.

Leave A Reply

Your email address will not be published.