Reliance Jio : ಜಿಯೋದ ಈ ಪ್ಲ್ಯಾನ್ ಹಾಕಿದರೆ ಅಮೆಜಾನ್, ನೆಟ್ ಫ್ಲಿಕ್ಸ್ ಫ್ರೀ!

ಜಿಯೋ ಮುಂದಿನ ದಿನಗಳಲ್ಲಿ ದೇಶವನ್ನು ಒಂದು ಡಿಜಿಟಲೈಸ್​ ಮಾಡುವಲ್ಲಿ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ತನ್ನ ಟೆಲಿಕಾಂನಲ್ಲಿ ಹಲವಾರು ಗ್ರಾಹಕರನ್ನು ಹೊಂದಿದೆ. ಮುಖ್ಯವಾಗಿ ಜಿಯೋ ಬಳಿ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ಹಾಟ್‌ಸ್ಟಾರ್ ಪ್ಯಾಕೇಜ್‌ಗಳೊಂದಿಗೆ ಡೇಟಾವನ್ನು ನೀಡುವ ಕಡಿಮೆ ಬೆಲೆ ಯೋಜನೆಗಳಿವೆ. ಪ್ರಿಪೇಯ್ಡ್ ಯೋಜನೆಗಳಿಗೆ ಹೋಲಿಸಿಕೊಂಡರೆ ಪೋಸ್ಟ್‌ಪೇಯ್ಡ್ ಚಂದಾದಾರರಿಗೆ ಅತ್ಯುತ್ತಮ ಕೊಡುಗೆಗಳನ್ನು ಜಿಯೋ ಒದಗಿಸುತ್ತಿದೆ. ಈ ಪ್ರಯೋಜನಗಳು ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿವೆ.

ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳ ವಿವರಗಳು ಇಲ್ಲಿವೆ :

  • 399ರೂ. ಜಿಯೋ ಪೋಸ್ಟ್ ಪೇಯ್ಡ್ ಯೋಜನೆ:

ಈ ಯೋಜನೆಯಲ್ಲಿ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಉಚಿತವಾಗಿ ಸಿಗುತ್ತದೆ. ಈ ಯೋಜನೆಯು 75GB ಡೇಟಾದೊಂದಿಗೆ 200GB ಗರಿಷ್ಠ ಡೇಟಾ ರೋಲ್ ಓವರ್ ನೀಡುತ್ತದೆ. 75GB ಡೇಟಾ ಮಿತಿ ದಾಟಿದ ನಂತರ ಬಳಕೆದಾರರು 10 ರೂಪಾಯಿ GB ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ. ಅಲ್ಲದೆ ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ.

  • 599 ರೂ. ಜಿಯೋ ಪೋಸ್ಟ್ ಪೇಯ್ಡ್ ಯೋಜನೆ:

ಬಿಲ್ಲಿಂಗ್ ಸೈಕಲ್‌ನಲ್ಲಿ ಗರಿಷ್ಠ 100GB ಡೇಟಾವನ್ನು ಮತ್ತು 200GB ಯ ಗರಿಷ್ಠ ಡೇಟಾ ರೋಲ್‌ಓವರ್ ಅನ್ನು ನೀಡುತ್ತದೆ. ನೀಡಿರುವ ಮಿತಿಯು ಮುಗಿದ ನಂತರ ಬಳಕೆದಾರರಿಗೆ ಪ್ರತಿ GB ಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಜೊತೆಗೆ JioPostpaid ಸಂಪರ್ಕವನ್ನು ಬಳಸಿಕೊಂಡು ಹೆಚ್ಚುವರಿ ಕುಟುಂಬದ ಸದಸ್ಯರೊಂದಿಗೆ ಅಂದರೆ ಒಬ್ಬರೊಂದಿಗೆ ಯೋಜನೆಯನ್ನು ಹಂಚಿಕೊಳ್ಳಬಹುದು. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.

  • 799 ರೂ. ಜಿಯೋ ಪೋಸ್ಟ್ ಪೇಯ್ಡ್ ಯೋಜನೆ: ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 150GB ಡೇಟಾವನ್ನು ಒದಗಿಸುತ್ತದೆ ಮತ್ತು 200GB ಡೇಟಾ ರೋಲ್‌ಓವರ್ ಅನ್ನು ಸಹ ಒದಗಿಸುತ್ತದೆ. ಯೋಜನೆಯ ಪ್ರಯೋಜನಗಳನ್ನು ಕುಟುಂಬ ಯೋಜನೆಯ ಅಡಿಯಲ್ಲಿ 2 ಹೆಚ್ಚುವರಿ ಪೋಸ್ಟ್‌ಪೇಯ್ಡ್ ಸಂಪರ್ಕಗಳೊಂದಿಗೆ ಹಂಚಿಕೊಳ್ಳಬಹುದು. ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ಒದಗಿಸುತ್ತದೆ.
  • 999 ರೂ. ಜಿಯೋ ಪೋಸ್ಟ್ ಪೇಯ್ಡ್ ಯೋಜನೆ: ಬಿಲ್ಲಿಂಗ್ ಸೈಕಲ್‌ಗೆ ಗರಿಷ್ಠ 200GB ನೀಡುತ್ತದೆ ಮತ್ತು ಕುಟುಂಬ ಯೋಜನೆಯಡಿಯಲ್ಲಿ 3 ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ನೀಡುತ್ತದೆ. ಗರಿಷ್ಠ ಡೇಟಾ ರೋಲ್‌ಓವರ್ 500GB ಆಗಿದೆ.ಈ ಯೋಜನೆ ಕೂಡ ನೆಟ್​​ಫ್ಲಿಕ್ಸ್, ಅಮೆಜಾನ್ ಪ್ರೈಂ ಸ್ಟ್ರೀಮಿಂಗ್ ಸೇವೆಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ.

ಈ ಮೇಲಿನ ರಿಚಾರ್ಜ್ ಯೋಜನೆಯಲ್ಲಿ ಜಿಯೋ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ+ಹಾಟ್‌ಸ್ಟಾರ್ ಪ್ಯಾಕೇಜ್‌ಗಳೊಂದಿಗೆ ಡೇಟಾವನ್ನು ಸಹ ಪಡೆದುಕೊಳ್ಳಬಹುದಾಗಿದೆ.

Leave A Reply

Your email address will not be published.