55 inch TV offer: ಕೇವಲ 1400 ರೂಪಾಯಿಗೆ , 55 ಇಂಚಿನ ಸ್ಮಾರ್ಟ್ ಟಿವಿ ಮನೆಗೆ ತನ್ನಿ!! ಸೂಪರ್ ಡೂಪರ್ ಆಫರ್!!
ನೀವೇನಾದರೂ ಹೊಸ ಟಿವಿ ಖರೀದಿ ಮಾಡುವ ಯೋಜನೆ ಹಾಕಿದ್ದರೆ ಈ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು. ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡು ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಖರೀದಿ ಮಾಡುವ ಯೋಜನೆ ಜಾರಿಗೆ ತರಲು ಹಣಕಾಸಿನ ಸಮಸ್ಯೆ ಉಂಟಾಗಿ ಕನಸಾಗಿ ಉಳಿದಿದ್ದರೆ, ಕೈಗೆ ಎಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್ ಟಿವಿ ಆಫರ್ ಮೂಲಕ ನಿಮ್ಮದಾಗಿಸಿಕೊಳ್ಳಬಹುದು. ಭರ್ಜರಿ ಆಫರ್ಸ್ನೊಂದಿಗೆ ಸ್ಮಾರ್ಟ್ಟಿವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ನಿಮಗಾಗಿ ಒಂದು ಸೂಪರ್ ಡೀಲ್ ಲಭ್ಯವಿದೆ.
ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ, ಸ್ಮಾರ್ಟ್ ಟಿವಿಯ ಮೇಲೆ ಬಂಪರ್ ಆಫರ್ ನೀಡುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಗಣರಾಜ್ಯೋತ್ಸವ ಸಮಾರಂಭದ ನಡುವೆ ನಿಮಗಾಗಿ ಆಫರ್ ಗಳು ಎದುರು ನೋಡುತ್ತಿವೆ. ಮತ್ತೇಕೆ ತಡ!!! ಮಿಸ್ ಮಾಡದೇ ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಯನ್ನು ಭರ್ಜರಿ ಡಿಸ್ಕೌಂಟ್ ಜೊತೆಗೆ ಖರೀದಿಸಿ ಮನೆಗೆ ತರಲು ಇದುವೆ ಸುವರ್ಣ ಅವಕಾಶ.ಇಕಾಮರ್ಸ್ ಕಂಪೆನಿಗಳು ಇತ್ತೀಚೆಗೆ ರಿಪಬ್ಲಿಕ್ ಡೇ ಪ್ರಯುಕ್ತ ಎಲೆಕ್ಟ್ರಾನಿಕ್ಸ್ ಸಾಧನಗಳ ಮೇಲೆ ವಿಶೇಷ ಕೊಡುಗೆಯನ್ನು ನೀಡಲಿದ್ದು ಸದ್ಯ ಮಾರುಕಟ್ಟೆಯಲ್ಲಿ 55 ಇಂಚಿನ ಸ್ಮಾರ್ಟ್ಟಿವಿ ಮೇಲೆ ಭರ್ಜರಿ ಆಫರ್ ಗಳನ್ನೂ ನೀಡುತ್ತಿದೆ. ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಂಪನಿಯಾಗಿರುವ ಕ್ರೋಮಾ ಇತ್ತೀಚಿನ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಸೇಲ್ ಅನ್ನು ಗ್ರಾಹಕರಿಗೆ ನೀಡುತ್ತಿದ್ದು ಈ ಮಾರಾಟವು ಸೀಮಿತ ಅವಧಿಗಷ್ಟೇ ಮಾನ್ಯವಾಗಿರಲಿದೆ. ಹೀಗಾಗಿ ನೀವು ಈ ಮಾರಾಟದ ಭಾಗವಾಗಿ ಸ್ಮಾರ್ಟ್ ಟಿವಿಗಳಲ್ಲಿ ಗಮನ ಸೆಳೆಯುವ ಡೀಲ್ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಇದರಲ್ಲೂ 55 ಇಂಚಿನ ಟಿವಿ ಮೇಲೆ ಭಾರಿ ರಿಯಾಯಿತಿಯಲ್ಲಿ ಲಭ್ಯವಾಗಲಿದೆ.
ಈ ಸ್ಮಾರ್ಟ್ ಟಿವಿಯ ಫೀಚರ್ಸ್ ಗಮನಿಸಿದರೆ , ಇದು 4K ಡಿಸ್ಪ್ಲೇ, 60 Hz ರಿಫ್ರೆಶ್ ರೇಟ್, 3 ಹೆಚ್ಡಿಎಮ್ಐ ಪೋರ್ಟ್ಗಳು, 2 ಯುಎಸ್ಬಿ ಪೋರ್ಟ್ಗಳು, ವೈಫೈ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, 30 ವ್ಯಾಟ್ ಸ್ಪೀಕರ್ಗಳು, ಡಾಲ್ಬಿ ಆಡಿಯೋ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಟಿವಿಯು ಕ್ರೋಮ್ ಕಾಸ್ಟ್, ಇಂಟೆಲಿಜೆಂಟ್ ಫ್ರೇಮ್ ಸ್ಟೆಬಿಲೈಸೇಶನ್ ಎಂಜಿನ್, ಯುಹೆಚ್ಡಿ ಅಪ್ಸ್ಕೇಲಿಂಗ್ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಹಾಟ್ ಸ್ಟಾರ್ ಡಿಸ್ನಿಯಂತಹ ಅಪ್ಲಿಕೇಶನ್ಗಳನ್ನು ಕೂಡ ಒಳಗೊಂಡಿವೆ. ಬಜೆಟ್ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಬಯಸುವವರಿಗೆ ಈ ಸೇಲ್ ಅತ್ಯುತ್ತಮ ಎಂದರೂ ತಪ್ಪಾಗಲಾರದು.
ಏಸರ್ ಐ ಸೀರಿಸ್ 4ಕೆ ಅಲ್ಟ್ರಾ ಹೆಚ್ಡಿ ಎಲ್ಇಡಿ ಆಂಡ್ರಾಯ್ಡ್ ಟಿವಿಯ ಮೂಲ ಬೆಲೆ ರೂ. 47,990 ಆಗಿದ್ದು, ಈಗ ಆಫರ್ನಲ್ಲಿ ಸ್ಮಾರ್ಟ್ಟಿವಿ ಮೇಲೆ 18 ಸಾವಿರ ರೂಪಾಯಿವರೆಗೆ ಡಿಸ್ಕೌಂಟ್ ದೊರೆಯಲಿದ್ದು, ಕೇವಲ 29,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇದಿಷ್ಟೇ ಅಲ್ಲ ಕಣ್ರೀ!!! ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ನ ಗ್ರಾಹಕರು ಹೆಚ್ಚುವರಿ ರಿಯಾಯಿತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 2500 ರೂಪಾಯಿವರೆಗೆ ರಿಯಾಯಿತಿ ನಿಮ್ಮದಾಗಿಸಿಕೊಳ್ಳಬಹುದು. ಹೀಗಾಗಿ, 2500 ರೂ. ರಿಯಾಯಿತಿ ಸೇರಿಕೊಂಡರೆ ಈ ಸ್ಮಾರ್ಟ್ ಟಿವಿ ಬೆಲೆ ಕೇವಲ ರೂ. 27,500 ಆಗಲಿದ್ದು, ಈ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ಟಿವಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ.
ಇದರ ಜೊತೆಗೆ ಈ ಸ್ಮಾರ್ಟ್ ಟಿವಿ ಕಡಿಮೆ ವೆಚ್ಚದ ಇಎಮ್ಐ ಆಯ್ಕೆಯನ್ನು ಕೂಡ ಒಳಗೊಂಡಿದ್ದು ಮಾಸಿಕ ಇಎಮ್ಐ ರೂ. 1412 ರಿಂದ ಪ್ರಾರಂಭವಾಗಲಿದ್ದು ಇದು 24 ತಿಂಗಳ ಅವಧಿಗೆ ಅನ್ವಯವಾಗುತ್ತದೆ. ನೀವು ಆಯ್ಕೆ ಮಾಡುವ ಅವಧಿಯನ್ನು ಅವಲಂಬಿತವಾಗಿ ನಿಮ್ಮ ಇಎಮ್ಐ ಮೊತ್ತವು ಬದಲಾಗುತ್ತದೆ. ಕೈಗೆ ಎಟಕುವ ದರದಲ್ಲಿ ಬಂಪರ್ ಕೊಡುಗೆಯ ಜೊತೆಗೆ ನಿಮ್ಮ ನೆಚ್ಚಿನ ಸ್ಮಾರ್ಟ್ ಟಿವಿ ಖರೀದಿ ಮಾಡಬಹುದು.