90 Years Ago Bicycle Price: 90 ವರ್ಷಗಳ ಹಿಂದೆ ಭಾರತದಲ್ಲಿ ಸೈಕಲ್ ಬೆಲೆ ಎಷ್ಟಿದ್ದಿರಬಹುದು ಗೊತ್ತಾ ? – Viral information
This was the price of this bicycle in India 90 years ago: ಸೈಕಲ್ ಒಂದು ಕಾಲದ ನಮ್ಮ ಅತ್ಯಂತ ಇಷ್ಟದ, ಇನ್ನಿಲ್ಲದ ಬಯಕೆಯ ವಸ್ತು. ಇವತ್ತಿಗೂ ಕೂಡಾ ನಾವು ಹುಡುಗರು ಮೊತ್ತ ಮೊದಲಿಗೆ ಹೆಚ್ಚು ಆಕರ್ಷಿತರಾಗಿ ಬಿಡುವ ಚೀಸು ಎಂದರೆ ಅದು- ಇದೇ ಬೈಸಿಕಲ್ಲು. ಕಾಲಾನಂತರ ಹುಡುಗರು ಬೈಕ್ ನ ಮೇಲೆ ಆಕರ್ಷಿತರಾಗಿ ಬಿಡಬಹುದು. ಆದರೆ ಬಾಲ್ಯದ ಹುಡುಗಾಟದ ದಿನಗಳಲ್ಲಿ ಕೊಂಡ ಅಥವಾ ಆಸೆಪಟ್ಟ ಸೈಕಲ್ ನ ಮೋಹಕ್ಕೆ ಅದ್ಯಾವುದೂ ಸಮನಾಗಲಾರದು. ಇಂತಹ ಸೈಕಲ್ ಬೆಲೆ ಸುಮಾರು 90 ವರ್ಷಗಳ ಹಿಂದೆ ಎಷ್ಟಿದ್ದಿರಬಹುದು ಗೊತ್ತಾ ? ಅವತ್ತಿಗೆ ಒಬ್ಬರು ಕೊಂಡ ಸೈಕಲ್ ಒಂದರ ಬೆಲೆ ಅದರ ಬಿಲ್ ಸಮೇತ ಈಗ ವೈರಲ್ ಆಗಿದೆ.
ಸದ್ಯ ಹೊಸ ಸೈಕಲ್ ಹತ್ತಬೇಕಾದರೆ ಕನಿಷ್ಠ ಐದರಿಂದ ಹತ್ತು ಸಾವಿರ ರೂಪಾಯಿ ಖರ್ಚು ಮಾಡಬೇಕಾಗಿದೆ. ಆದರೆ ಆವತ್ತು ಇದ್ದ ಸೈಕಲ್ ಬೆಲೆ ಕೇಳಿದ್ರೆ ಇಷ್ಟು ಕಡಿಮೆಯಾ ಎಂದು ನೀವು ಮೂಗಿನ ಮೇಲೆ ಬೆರಳು ಇಡದೇ ಹೋದರೂ ಆಶ್ಚರ್ಯ ಹುಬ್ಬು ಏರಿ ಕುಳಿತು ಬಿಡೋದು ಪಕ್ಕಾ. ಸಾಮಾಜಿಕ ಜಾಲತಾಣಗಳಲ್ಲಿ 90 ವರ್ಷಗಳ ಹಳೆಯ ಬಿಲ್ ವೈರಲ್ (Old Bill Viral) ಆಗುತ್ತಿದ್ದು, ಅದರಲ್ಲಿ ಸೈಕಲ್ ಬೆಲೆ 18 ರೂ. ಎಂದು ಬಿಲ್ ಬರೆಯಲಾಗಿದೆ. 90 ವರ್ಷಗಳ ಹಿಂದೆ ಕೊಂಡ ಆ ಸೈಕಲ್ ಇವತ್ತಿಗೆ ಅದೆಲ್ಲಿ ಗುಜರಿಗೆ ಹೋಗಿ ಅಲ್ಲಿಂದ ಅದೆಷ್ಟು ಬಾರಿ ಕಬ್ಬಿಣದ ರೂಪದಲ್ಲಿ ರಿಸೈಕಲ್ ಆಗಿ ಹೋಗಿದೆಯೇ ಗೊತ್ತಿಲ್ಲ: ಆದ್ರೆ ಅವತ್ತಿನ ಬಿಲ್ ಮಾತ್ರ ಇವತ್ತಿಗೂ ಮುದುರದೆ ಭದ್ರ ಆಗಿದೆ. ಯಾರೋ ಒಬ್ಬರು ಅವತ್ತಿನ ಬಿಲ್ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸೈಕಲ್ ಓಡುವ ಸ್ಪೀಡಿಗಿಂತ ವೇಗವಾಗಿ ಈ ಸುದ್ದಿ ವೈರಲ್ ರೂಪ ಪಡೆದುಕೊಳ್ಳುತ್ತಿದೆ. ಈ ಬಿಲ್ ಕಲ್ಕತ್ತಾದ ಸೈಕಲ್ ಅಂಗಡಿಯದ್ದು, ಅದರ ಹೆಸರು ‘ಕುಮುದ್ ಸೈಕಲ್ ವರ್ಕ್ಸ್’ (Kumud Cycle Works) ಅನ್ನು ಕಾಣಬಹುದು. ಅಲ್ಲಿರುವ ಹಳೆ ಬೆಲೆ ಕಂಡು ಜನರು ನಿಬ್ಬೆರಗಾಗಿದ್ದಾರೆ.
ಏನಂತಿದೆ?
ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ : ” ಒಂದು ಕಾಲದಲ್ಲಿ ಸೈಕಲ್ (Cycle) ನನ್ನ ಅಜ್ಜನ ಕನಸಾಗಿತ್ತು. ಸೈಕಲ್ ಚಕ್ರದಂತೆ ಕಾಲಚಕ್ರ ಹೇಗೆ ತಿರುಗಿದೆ ! ” ಈ ಚಿತ್ರಕ್ಕೆ ಹಲವರು ತಮ್ಮ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಆ ಸಮಯದಲ್ಲಿ ಒಂದು ಸೈಕಲ್ ಬೆಲೆ (Bicycle Price) ತುಂಬಾ ಇತ್ತು. ಆದಾಯವೂ ಕಡಿಮೆ ಇತ್ತು.
1934ರಲ್ಲಿ ಮಾರಾಟವಾದ ಸೈಕಲ್‌ಗಳ ಬೆಲೆಯನ್ನು ನೋಡಿ, ಅಲ್ಲಿ ಹಿರಿಯರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಜನರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. 1977ರಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದಾಗ ತಾವು 325 ರೂ.ಗೆ ಸೈಕಲ್ ಖರೀದಿಸಿದ್ದಾಗಿ ಬಳಕೆದಾರರೊಬ್ಬರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಇನ್ನೊಬ್ಬರು ಬರೆದಿದ್ದಾರೆ – ದೇಶವು ಈಗ ಎಷ್ಟು ಬದಲಾಗಿದೆ. ಇಂದಿನ ದಿನಗಳಲ್ಲಿ ಸೈಕಲ್ ಬಿಡಿ, 18 ರೂಪಾಯಿಗೆ ಅದರ ಸೀಟು ಕೂಡ ಸಿಗುತ್ತಿಲ್ಲ. ಎಂದಿದ್ದಾರೆ.