ನಿಮಗೆ ಸ್ಪ್ಲಿಟ್‌ ಹೇರ್‌ ಪ್ಲಾಬ್ಲಂ ಇದೆಯಾ ? ಈ ರೀತಿ ಸಮಸ್ಯೆ ಬಗೆಹರಿಸಿ !

ಸೀಳು ಕೂದಲಿನ ಸಮಸ್ಯೆ ಪ್ರತಿಯೊಬ್ಬ ಮಹಿಳೆಯನ್ನು ಕಾಡುವ ಪ್ರಮುಖ ಕೂದಲಿನ ಸಮಸ್ಯೆಗಳಲ್ಲಿ ಒಂದು. ಪೋಷಕಾಂಶಗಳ ಕೊರತೆ, ಮಾಲಿನ್ಯದಿಂದ ಕೂದಲಿನ ತುದಿ ಅತಿ ಬೇಗನೆ ಸೀಳಾಗುವುದು. ಈ ಸೀಳು ತುದಿ ಕೂದಲಿನ ಬೆಳವಣಿಗೆಗೆ ಅಡ್ಡಿ ಮಾಡುತ್ತದೆ ಎಂಬ ವಿಚಾರ ಹೊಸತೇನಲ್ಲ.ಇದರಿಂದಾಗಿ ಕೂದಲಿನ ಸೀಳುವಿಕೆಯನ್ನು ತಡೆಗಟ್ಟಲು ಕೆಲವು ಮುಂಜಾಗ್ರತ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

ಕೂದಲನ್ನು ಆಗಾಗ ಕಟ್ ಮಾಡಿ:- ಸೀಳು ಕೂದಲನ್ನು ನಿವಾರಣೆ ಮಾಡಲು ಕೂದಲನ್ನು ಟ್ರಿಮ್‌ ಮಾಡುವುದು ಅಥವಾ ತುದಿಯನ್ನು ಕತ್ತರಿಸುವುದು ತ್ವರಿತ ಮಾರ್ಗವಾಗಿದೆ. ನಿಯಮಿತ ಮಧ್ಯಂತರದಲ್ಲಿ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಹಳೆಯ ಕೂದಲನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಕೂದಲು ಆರೋಗ್ಯಕರವಾಗಿ ಉಳಿಯಲು ಸಹಾಯ ಮಾಡುತ್ತದೆ.

ಬಿಸಿ ನೀರಿನಲ್ಲಿ ಕೂದಲ ಸ್ನಾನ ಬೇಡ:- ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಲು ಜನರು ಇಷ್ಟಪಡುತ್ತಾರೆ. ಆದರೆ, ಕೂದಲಿಗೆ ಯಾವತ್ತೂ ಬಿಸಿ ನೀರನ್ನು ತಾಗಿಸಬಾರದು. ತುಂಬಾ ಬಿಸಿಯಾದ ನೀರಿನಿಂದ ಕೂದಲನ್ನು ವಾಷ್‌ ಮಾಡುವುದರಿಂದ ನೆತ್ತಿಯನ್ನು ಒಣಗಿಸುತ್ತದೆ ಮತ್ತು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ. ಇದು ಒಡೆಯುವಿಕೆಗೂ ಕಾರಣವಾಗುತ್ತದೆ. ಯಾವಾಗಲೂ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಕೂದಲಿನ ತುದಿ ಎರಡು ಕವಲಾಗುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ.

ಆಯಿಲ್ ಮಸಾಜ್:- ಚರ್ಮದ ಆರೈಕೆಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುತ್ತಿರೋ ಅದೇ ರೀತಿ ಕೂದಲಿನ ಆರೈಕೆಯನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ವಾರಕೊಮ್ಮೆಯಾದರೂ ಕೂದಲಿಗೆ ಆಯಿಲ್ ಹಾಕಿ ಮಸಾಜ್ ಮಾಡುವುದರಿಂದ ಕೂದಲು ಕವಲೊಡೆಯುವುದು ತಪ್ಪುತ್ತದೆ. ಜೊತೆಗೆ ಇದರಿಂದಾಗಿ ಕೂದಲಿನ ಅಂದವು ಫಳ ಫಳನೆ ಮಿರುಗುತ್ತದೆ.

ಕೂದಲನ್ನು ಮೃದುವಾಗಿ ಬಾಚಿ:- ಸಾಮಾನ್ಯವಾಗಿ ಹೆಚ್ಚಿವರು ಕೂದಲನ್ನು ಬಾಚುವಾಗ ಗಮನ ಕೊಡುವುದೇ ಇಲ್ಲ. ಕೈಗೆ ಸಿಕ್ಕಿದ ಬಾಚಣಿಕೆ ಬಳಸಿ ತಲೆ ಬಾಚುತ್ತಾರೆ. ಕೂದಲು ಬಾಚುವ ಮುನ್ನ ಸೂಕ್ತ ಬಾಣಿಕೆಯನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಬಾಚುವಾಗ ಕೂದಲು ಹಾಳಾಗುವುದು. ಕೂದಲ ಸಿಕ್ಕು ಬಿಡಿಸಲು ಬೇರೆ ಬಾಚಣಿಕೆ ಬಳಸಬೇಕು, ಹೇರ್‌ ಸ್ಟೈಲ್ ಮಾಡಲು ಬೇರೆ ಬಾಚಣಿಕೆ ಬಳಸಬೇಕು. ಸಿಕ್ಕು ಬಿಡಿಸಲು ದೊಡ್ಡ ಹಲ್ಲಿನ ಬಾಚಣಿಕೆ ಬಳಸಿ. ಎಣ್ಣೆ ಹಚ್ಚುವ ಮುನ್ನ ಕೂದಲನ್ನು ಬಾಚಿ ನಂತರ ಎಣ್ಣೆ ಹಚ್ಚಬೇಕು. ಇನ್ನು ಒದ್ದೆ ಕೂದಲಿನಲ್ಲಿ ತಲೆ ಬಾಚಬಾರದು. ಒದ್ದೆ ಕೂದಲಿನಲ್ಲಿ ತಲೆ ಬಾಚಿದರೆ ಕೂದಲಿನ ತುದಿ ಕವಲೊಡೆಯುವುದು ಮಾತ್ರವಲ್ಲದೆ, ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು.

ಒದ್ದೆ ಕೂದಲನ್ನು ಹಾಗೇ ಬಿಡಬೇಡಿ:- ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಹಾಗೇ ಬಾಚಿ ಕಟ್ಟಬೇಡಿ. ಇದರಿಂದ ಕೂದಲಿಗೆ ಹೆಚ್ಚು ಹಾನಿಯಾಗುತ್ತದೆ. ಹೀಗಾಗಿ ಮೃದು ಟವಲ್ ಅಥವಾ ಹೇರ್ ಡ್ರೈಯರ್‍ನ ಬಳಸಿ ಕೂದಲನ್ನು ಒಣಗಿಸಿರಿ. ರಾತ್ರಿ ತಲೆಸ್ನಾನ ಮಾಡುವ ಅಭ್ಯಾಸವಿದ್ದರೆ ಒದ್ದೆ ಕೂದಲಿನಲ್ಲಿ ಮಲಗಬೇಡಿ. ಇದರಿಂದ ಸ್ಪ್ಲಿಟ್ ಕೂದಲು ಹೆಚ್ಚಾಗಬಹುದು.

Leave A Reply

Your email address will not be published.