ನೀವೂ ಸಹ ದಿನನಿತ್ಯ ಹಣ್ಣುಗಳನ್ನು ಸೇವಿಸುತ್ತೀರಾ! ಹಾಗಾದರೆ ನಿಮಗೊಂದು ಶಾಕಿಂಗ್ ಮಾಹಿತಿ ಇಲ್ಲಿದೆ

ಹಣ್ಣುಗಳಲ್ಲಿ ಹಲವಾರು ವಿಧಗಳಿವೆ. ಬೇರೆ ಬೇರೆ ಕಾಲದಲ್ಲಿ ಕಾಲಕ್ಕೆ ತಕ್ಕ ಹಾಗೆ ಹಣ್ಣುಗಳು ದೊರೆಯುತ್ತವೆ. ಅವುಗಳಲ್ಲಿ ಕೆಲವು ಹಣ್ಣುಗಳು ನಮ್ಮ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ಒಂದೊಂದು ಹಣ್ಣು ಒಂದೊಂದು ಗುಣಗಳನ್ನು ಹೊಂದಿದ್ದು ನಮ್ಮ ದೇಹಕ್ಕೆ ವಿಟಮಿನ್ ಪೂರೈಕೆ ಮಾಡುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು. ಟೈಪ್‌ ೨ ಮಧುಮೇಹ, ತೂಕ ಹೆಚ್ಚಳ, ಬೊಜ್ಜು, ಪೌಷ್ಟಿಕಾಂಶದ ಕೊರತೆ, ಕರುಳಿನ ಸಮಸ್ಯೆಗಳು ಏರ್ಪಡಬಹುದು.

 

ಹಣ್ಣುಗಳಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ದೊರೆಯುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ಇರಬಹುದಾದ ಹಲವು ಪೌಷ್ಟಿಕಾಂಶಗಳ ಕೊರತೆ ನಿವಾರಣೆಯಾಗುತ್ತದೆ. ಆದರೆ, ಹಣ್ಣುಗಳ ಅಧಿಕ ಸೇವನೆಯಿಂದಲೂ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಮಸ್ಯೆ ಉಂಟಾಗಬಹುದು.

ಬೊಜ್ಜು, ಮಧುಮೇಹ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಕ್ಕರೆಯನ್ನು ಅತ್ಯಂತ ಹಾನಿಕಾರಕ ಆಹಾರ ಪದಾರ್ಥವನ್ನಾಗಿ ಪರಿಗಣಿಸಲಾಗಿದೆ. ಆದರೂ ಸಾಕಷ್ಟು ಜನ ಪ್ರತಿದಿನ ಬಿಳಿ ಮತ್ತು ರಿಫೈನ್ಡ್‌ ಸಕ್ಕರೆಯನ್ನು ಆಹಾರದಲ್ಲಿ ಬಳಕೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಆದರೆ ಇಂತಹ ವಿಷಕಾರಕ ಸಿಹಿಯನ್ನು ತಪ್ಪಿಸಲು ವೈದ್ಯರು ಹಣ್ಣು ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೂ ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಇದು ಅಪಾಯಕಾರಿಯಾಗಲಿದೆ.

ಹಣ್ಣುಗಳು ಎಲ್ಲವೂ ಒಂದೇ ರೀತಿ ಇರುವುದಿಲ್ಲ. ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ ಕಡಿಮೆ ಇರುತ್ತದೆ, ಇನ್ನು ಕೆಲವು ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಿದ್ದು, ಕ್ಯಾಲರಿ ಅಧಿಕವಾಗಿರುತ್ತದೆ. ಇಂತಹ ಹಣ್ಣುಗಳು ಮುಖ್ಯವಾಗಿ ಮಧುಮೇಹಿಗಳಿಗೆ ಉತ್ತಮವಲ್ಲ. ಕ್ಯಾಲರಿ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿದರೆ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ.

ಸೇಬು ಮತ್ತು ಬೆರಿ ರೀತಿಯ ಹಣ್ಣುಗಳಲ್ಲಿ ನಾರಿನಂಶ ಹಾಗೂ ವಿಟಮಿನ್‌ ಸಿ ದೊರೆಯುತ್ತದೆ. ಹಾಗೂ ಹೈಡ್ರೇಟ್‌ ಆಗಿರಲು ಸಾಧ್ಯವಾಗುತ್ತದೆ. ಆದರೆ, ಆರೋಗ್ಯಕ್ಕೆ ಉತ್ತಮವೆಂದು ಹೆಚ್ಚು ಸೇವನೆ ಮಾಡುವುದರಿಂದ ಹಲವು ರೀತಿಯ ಪೋಷಕಾಂಶಗಳ ಕೊರತೆಯೂ ಉಂಟಾಗುತ್ತದೆ. ಜೊತೆಗೆ ಕೆಲವು ರೋಗಗಳಿಗೂ ಕಾರಣವಾಗಬಹುದು.

ತೂಕ ಇಳಿಕೆಗೆ ಸಹಕಾರಿ ಎಂದು ಮೂರು ಹೊತ್ತು ಸಿಕ್ಕ ಸಿಕ್ಕ ಹಣ್ಣು ತಿನ್ನುತ್ತಾರೆ ಆದರೆ, ಇಷ್ಟೊಂದು ಪ್ರಮಾಣದ ಹಣ್ಣುಗಳ ಸೇವನೆಯಿಂದ ಕ್ರಮೇಣ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇ ಉಂಟಾಗುವ ಸಾಧ್ಯತೆಯೇ ಅಧಿಕ.

ಹಣ್ಣುಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದರಿಂದ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ, ರಕ್ತದಲ್ಲಿ ಅಧಿಕ ಸಕ್ಕರೆ ಮಟ್ಟ, ತೂಕ ಹೆಚ್ಚುವುದು, ಬೊಜ್ಜು, ಟೈಪ್‌ 2 ಮಧುಮೇಹ, ಪೋಷಕಾಂಶಗಳ ಕೊರತೆ, ಪಚನಕ್ರಿಯೆಯಲ್ಲಿ ಸಮಸ್ಯೆ ಉಂಟಾಗುವುದು, ಗ್ಯಾಸ್ಟ್ರಿಕ್‌ ಹಾಗೂ ಬ್ಲೋಟಿಂಗ್‌, ಇರಿಟೇಬಲ್‌ ಬಾವೆಲ್‌ ಸಿಂಡ್ರೋಮ್‌ ಅಥವಾ ಕರುಳಿನ ಸಮಸ್ಯೆಗಳು.

ಆಹಾರ ತಜ್ಞರ ಪ್ರಕಾರ, ದಿನದಲ್ಲಿ ಹಣ್ಣುಗಳ ಸೇವನೆ ಮಿತ ಪ್ರಮಾಣದಲ್ಲಿ ಇರಬೇಕು. ವಯಸ್ಕರು ಐದು ಬಗೆಯ ಹಣ್ಣು ಮತ್ತು ತರಕಾರಿಗಳನ್ನು 80 ಗ್ರಾಂ ನಷ್ಟು ದಿನಕ್ಕೆ ಐದು ಬಾರಿ ಸೇವನೆ ಮಾಡಬಹುದು. ಮಕ್ಕಳ ಪ್ರಮಾಣ ಇನ್ನೂ ಕಡಿಮೆ. ಹಣ್ಣುಗಳೊಂದಿಗೆ ತರಕಾರಿ , ಧಾನ್ಯ, ಬೀನ್ಸ್‌, ಸಸ್ಯಾಧಾರಿತ ಪ್ರೊಟೀನ್‌ , ಸೊಪ್ಪುಗಳನ್ನು, ಕಾಳುಗಳು ಸೇವಿಸುವುದು ಸಹ ಅಗತ್ಯ ಆಗಿದೆ.

ಹೌದು ಆಹಾರ ತಜ್ಞರ ಪ್ರಕಾರ ನಮ್ಮ ದೇಹಕ್ಕೆ ಬೇಕಾದಷ್ಟೇ ಪೌಷ್ಟಿಕತೆಯನ್ನು ಸ್ವೀಕರಿಸುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಸೇವನೆ ಆರೋಗ್ಯವನ್ನು ಹದಗೆಡಿಸಬಹುದು ಎಂದು ತಿಳಿಸಿದ್ದಾರೆ. ಹಣ್ಣುಗಳು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ನಾವು ಹಣ್ಣುಗಳನ್ನು ಮಿತವಾಗಿ ಸೇವಿಸುವುದು ಉತ್ತಮ.

Leave A Reply

Your email address will not be published.