ಕಾಂತಾರ-2ಗೆ ಫಿಕ್ಸಾಯ್ತು ಶೂಟಿಂಗ್ ಡೇಟ್! 2024 ರಲ್ಲಿ ತೆರೆಯ ಮೇಲೆ ಮತ್ತೆ ಅಬ್ಬರಿಸಲಿದೆ ತುಳನಾಡ ದೈವ! ಸಂಪೂರ್ಣ ಮಾಹಿತಿ ಬಿಚ್ಚಿಟ್ರು ನಿರ್ಮಾಪಕ ವಿಜಯ್ ಕಿರಗುಂದೂರು.

ಭಾರತೀಯ ಚಿತ್ರರಂಗದಲ್ಲೇ ಸಕ್ಕತ್ ಸೌಂಡ್ ಮಾಡಿದ, ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಚಿತ್ರ ಎಲ್ಲರ ಮನ ಗೆದ್ದು ಮೈ ನವಿರೇಳಿಸಿತ್ತು. ಅಲ್ಲದೆ ಕಾಂತಾರ-2 ಬರುತ್ತದೆಯಾ? ಎಂದು ಅಭಿಮಾನಿಗೆಲ್ಲರೂ ಕಾತುರದಿಂದ ಕಾಯುತ್ತೀದ್ದು ಇದರ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ರಿಷಬ್ ಈ ಬಗ್ಗೆ ಇನ್ನೂ ಯೋಚಿಸಿಲ್ಲ, ಮುಂದೆ ನೋಡೋಣ ಎಂದಿದ್ದರು. ಇದೀಗ ನಿರ್ಮಾಪಕ ವಿಜಯ್ ಕಿರಗುಂದೂರು ಕಾಂತಾರ-2 ಬಗ್ಗೆ ಸುಳಿವು ನೀಡಿ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ.

 

ಕಿರಗುಂದೂರು ಅವರು ಕಾಂತಾರ -2 ಸಿನಿಮಾ ಮಾಡುವ ಕುರಿತಾಗಿ ಮಾತನಾಡಿದ್ದಲ್ಲದೇ, ಸಿನಿಮಾ ಶೂಟಿಂಗ್ ಮತ್ತು ರಿಲೀಸ್ ದಿನಾಂಕವನ್ನೂ ಘೋಷಿಸಿ ಬಿಟ್ಟಿದ್ದಾರೆ. ಜೊತೆಗೆ ಈಗಾಗಲೇ ರಿಷಬ್ ಮತ್ತು ಟೀಮ್ ಕಥೆ ಮಾಡುವುದರಲ್ಲಿ ತೊಡಗಿದೆ ಎನ್ನುವ ವಿಷಯವನ್ನೂ ಬಹಿರಂಗ ಪಡಿಸಿದ್ದಾರೆ. ಚಿತ್ರೀಕರಣದ ಸ‍್ಥಳ ಹುಡುಕಲು ಕಾಡು ಮೇಡು ಅಲೆಯುತ್ತಿರುವುದಾಗಿಯೂ ತಿಳಿಸಿದ್ದಾರೆ.

ಹಲವು ಘೋಷಣೆಗಳ ಮೂಲಕ ಕುತೂಹಲ ಮೂಡಿಸಿರುವ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ ಕಿರಗಂದೂರು ಕಾಂತಾರ -2 ಕಥೆ ಏನು, ಯಾರೆಲ್ಲ ಇರುತ್ತಾರೆ, ಯಾವ ಸ್ಥಳದಲ್ಲಿ ಶೂಟ್ ಮಾಡುತ್ತಾರೆ, ಅಚ್ಚರಿ ಎನ್ನುವಂತಹ ಕಲಾವಿದರು ಇರುತ್ತಾರಾ ಈ ಕುರಿತು ಅವರು ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಆದರೆ, ಕಾಂತಾರ 2 ಸೆಟ್ಟೇರುವ ಮತ್ತು ಚಿತ್ರೀಕರಣ ಹಾಗೂ ಬಿಡುಗಡೆ ದಿನಾಂಕವನ್ನೂ ಈಗಲೇ ಬಹಿರಂಗಗೊಳಿಸಿದ್ದಾರೆ.

ವರ್ಷ ಜೂನ್ ನಿಂದ ಚಿತ್ರೀಕರಣ ಶುರುವಾಗಲಿದೆ. ಏಪ್ರಿಲ್ ಅಥವಾ ಮೇ 2024ರಂದು ಕಾಂತಾರ 2 ಚಿತ್ರ ತೆರೆಗೆ ಬರಲಿದೆಯಂತೆ. ಪಕ್ಕಾ ಪ್ಲ್ಯಾನ್ ಜೊತೆಯೇ ಈ ಬಾರಿ ಚಿತ್ರೀಕರಣಕ್ಕೆ ಇಳಿಯಲಿದೆ ಚಿತ್ರತಂಡ. ಕಾಂತಾರ ಸಿನಿಮಾ ಶೂಟ್ ಮಾಡುವಾಗ ಹಲವು ತೊಂದರೆಗಳನ್ನು ಅವರು ಎದುರಿಸಬೇಕಾಯಿತು. ಹಾಗಾಗಿ ಬಜೆಟ್ ಕೂಡ ಹೆಚ್ಚಾಯಿತು. ಈ ಬಾರಿ ಎಲ್ಲ ಮುನ್ನೆಚ್ಚರಿಕೆಗಳನ್ನು ತಗೆದುಕೊಂಡು ಶೂಟಿಂಗ್ ಗೆ ಇಳಿಯುವುದಾಗಿ ನಿರ್ಮಾಪಕರ ವಿಜಯ್ ಕಿರಗುಂದೂರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Leave A Reply

Your email address will not be published.