OnePlus, Oppo ಸ್ಮಾರ್ಟ್‌ಫೋನ್ ಹೊಂದಿರುವವರಿಗೆ ಗುಡ್‌ನ್ಯೂಸ್ | ಈ ಆಪ್ ಇನ್ನು ಮುಂದೆ ನಿಮಗಾಗಿಯೇ !
ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ಈ ಸಾಧನದ ಮೋಡಿಗೆ ಜನತೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು, ಮೊದಲು ಕೇವಲ ಲ್ಯಾಂಡ್ ಫೋನ್, ಇಲ್ಲವೇ ಬೇಸಿಕ್ ಸೆಟ್ ಮಾತ್ರ ಬಳಕೆಯಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದ್ದು, ವಿಭಿನ್ನ ವೈಶಿಷ್ಟ್ಯದ ಮೂಲಕ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. (Smartphone) ಈ ಮೊಬೈಲ್ಗಳನ್ನು ಬಳಸಲು ನೆಟ್ವರ್ಕ್ (Network) ಅತ್ಯವಶ್ಯಕ. ಹಾಗಾಗಿ, ಈ ನಿಟ್ಟಿನಲ್ಲಿ ಅನೇಕ ಬ್ರಾಡ್ಬ್ಯಾಂಡ್ ಕಂಪನಿಗಳು(Broadband) ಇಂಟರ್ನೆಟ್ ಸರ್ವೀಸ್ (Internet Service) ನೀಡುತ್ತಿವೆ.
ಇತ್ತೀಚೆಗೆ ಸ್ಮಾರ್ಟ್‌ಫೋನ್ ಬಳಕೆ ಮಾಡುವ ಹೆಚ್ಚಿನವರು ಕಾಲ್ ರೆಕಾರ್ಡಿಂಗ್ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಫೀಚರ್ ಬಳಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಕಾಲ್ ರೇಕಾರ್ಡ್ ಮಾಡುವ ಅಗತ್ಯತೆ ಇರುತ್ತದೆ. ಹೀಗಾಗಿ, ಪ್ರಮುಖ ಮೊಬೈಲ್ ಕಂಪನಿಗಳು ಇನ್‌ಬಿಲ್ಟ್ ಕಾಲ್ ರೆಕಾರ್ಡಿಂಗ್ ಸೌಲಭ್ಯ ಕಲ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಒಪ್ಪೋ ಸಂಸ್ಥೆಯು ಓಡೈಯಲರ್ (ODialer app) ಆಪ್ ಪರಿಚಯಿಸಿದ್ದು ಗ್ರಾಹಕರಿಗೆ ನೆರವಾಗುತ್ತಿವೆ.
ಒಪ್ಪೋ ಮೊಬೈಲ್ ಸಂಸ್ಥೆಯು ಓಡೈಯಲರ್ (ODialer app) ಆಪ್ ಪರಿಚಯಿಸಿದೆ.ಈ ನಿಟ್ಟಿನಲ್ಲಿ ಒನ್‌ಪ್ಲಸ್, ಒಪ್ಪೋ, ರಿಯಲ್‌ಮಿ ಬಳಕೆದಾರರು ಪ್ರತ್ಯೇಕ ಕಾಲ್ ರೆಕಾರ್ಡಿಂಗ್ ಆಪ್ ಇನ್‌ಸ್ಟಾಲ್ ಮಾಡುವ ಅವಶ್ಯಕತೆ ಎದುರಾಗದು.ಇದರ ಜೊತೆಗೆ ಈಗಾಗಲೇ ಬಳಕೆಗೆ ಲಭ್ಯವಿರುವ ಗೂಗಲ್ ಫೋನ್ ಆಪ್ (Google Phone app) ನ ಅವಶ್ಯಕತೆ ಉಂಟಾಗದು. ಒಪ್ಪೋ ODialer ಆಪ್ ಅಭಿವೃದ್ಧಿಪಡಿಸಿರುವ ಹಿನ್ನೆಲೆ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿದೆ.
ಒಪ್ಪೋದ ನೂತನ ODialer ಕಾಲ್ ರೆಕಾರ್ಡಿಂಗ್ ಆಪ್ ಫೀಚರ್ಸ್
ಈ ಆಪ್‌ನಲ್ಲಿ ಕರೆಯಲ್ಲಿ ಮಾತನಾಡುವ ವ್ಯಕ್ತಿಗೆ ಮಾಹಿತಿ/ ಸೂಚನೆ ನೀಡದೆ ಕರೆಗಳನ್ನು ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ಬಳಕೆದಾರರು ಇತ್ತೀಚಿನ ಕರೆಗಳನ್ನು ಕೂಡ ನೋಡಬಹುದು. ಇದರ ಜೊತೆಗೆ ಬಳಕೆದಾರರ ಕರೆಗಳನ್ನು ರೆಕಾರ್ಡ್ ಮಾಡುವುದಲ್ಲದೆ ಸ್ಪೀಡ್ ಡಯಲ್ ಜೊತೆಗೆ ತ್ವರಿತವಾಗಿ ಫೋನ್ ಕರೆ ಮಾಡಲು ಅನುವು ಮಾಡಿಕೊಡುತ್ತದೆ. ಬಳಕೆದಾರರ ಕಾಂಟ್ಯಾಕ್ಟ್‌ಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಲು ಆಪ್ ಬಳಕೆದಾರರಿಗೆ ಅನುಮತಿಸುತ್ತದೆ. ODialer ಆಪ್ ಇತ್ತೀಚಿನ ಆಂಡ್ರಾಯ್ಡ್ 12 (Android 12) ಇಲ್ಲವೇ ಅದಕ್ಕಿಂತ ಮುಂದಿನ ಆಪ್‌ರೇಟಿಂಗ್ ಸಿಸ್ಟಮ್ ಗೆ ಕೋರಿಕೆ ಸಲ್ಲಿಸಲಾಗುತ್ತದೆ. ಇನ್ನು ಈ ಅಪ್ಲಿಕೇಶನ್ ಸರಳ ಆಪರೇಟಿಂಗ್ ಆಯ್ಕೆಗಳನ್ನು ಪಡೆದಿದ್ದು, ಬಳಕೆದಾರರಿಗೆ ಥರ್ಡ್ ಪಾರ್ಟಿ ಕಾಲ್ ರೆಕಾರ್ಡಿಂಗ್ ಆಪ್‌ಗಳ ಬಳಕೆಯನ್ನೂ ಕಡಿಮೆ ಮಾಡುತ್ತದೆ.
ಮ್ಯೂಸಿಕ್ ಎಡಿಟರ್ ಅಪ್ಲಿಕೇಶನ್ ಹಾಡುಗಳ ಎಡಿಟ್‌ಗೆ ಬಳಸಬಹುದಾಗಿದೆ. ಈ ಆ್ಯಪ್ ಮೂಲಕ ಹಾಡುಗಳನ್ನು ಕಟ್ ಮಾಡಬಹುದಾಗಿದ್ದು ರಿಂಗ್‌ಟ್ಯೂನ್ ಸೇರಿಸಬಹುದು. ಹಾಡುಗಳನ್ನು ಎಡಿಟ್ ಮಾಡುವ ಹಾಗೂ ಇನ್ನಿತರೆ ಎಡಿಟಿಂಗ್ ಸೌಲಭ್ಯಗಳು ದೊರೆಯಲಿದೆ. ಇದಲ್ಲದೆ ಈ ಆಪ್‌ನಲ್ಲಿ ಬಳಕೆದಾರರು ಆಡಿಯೊ ಕಂಪೋಸ್, ಟ್ರಿಮ್ ಆಡಿಯೊ, ಮರ್ಜ್ ಆಡಿಯೊ, ಫೈಲ್ ಸೇರಿಸುವುದು ಸೌಲಭ್ಯಗಳನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ವಾಯಿಸ್ ಎಡಿಟಿಂಗ್ ಆಪ್ ವಿಭಿನ್ನ ವಿಶೇಷತೆ ಮೂಲಕ ಗ್ರಾಹಕರ ಚಿತ್ತ ಸೆಳೆಯಲು ಸಿದ್ಧವಾಗುತ್ತಿದೆ. ಒಟ್ಟು 100 ಭಿನ್ನ ಮಾದರಿ ಫಾರ್ಮೇಟ್‌ನಲ್ಲಿ ರೆಕಾರ್ಡಿಂಗ್ ಅವಕಾಶ ಕಲ್ಪಿಸುತ್ತದೆ. ವಾಯಿಸ್ ರೆಕಾರ್ಡಿಂಗ್ ಫೈಲ್‌ಗಳನ್ನು ಮೊನೊ ಅಥವಾ ಸ್ಟೀರಿಯೊ ಫಾರ್ಮೇಟ್‌ನಲ್ಲಿ ರೆಕಾರ್ಡ್ ಮಾಡಬಹುದು. ಇದರೊಂದಿಗೆ ನಿಮ್ಮ ರೆಕಾರ್ಡಿಂಗ್‌ಗೆ ಹಿನ್ನಲೆ ಮ್ಯೂಸಿಕ್ ಸಹ ಸೇರಿಸಬಹುದಾದ ಅವಕಾಶ ಕಲ್ಪಿಸಲಾಗಿದ್ದು ಇದಕ್ಕಾಗಿ ಮಿಕ್ಸ್ ಮತ್ತು ಮರ್ಜ್ ಆಯ್ಕೆಗಳ ಜೊತೆಗೆ ಕಾಲ್ ರೆಕಾರ್ಡಿಂಗ್ ಆಯ್ಕೆ ಕೂಡ ನೀಡಲಾಗಿದೆ.
ಗೂಗಲ್ ಫೋನ್ ಆಪ್ ಅತ್ಯುತ್ತಮ ಆಗಿದ್ದು, ಆದರೆ ಇದು ಕರೆ ಮಾಡಿರುವವರಿಗೆ ತಿಳಿಯದಂತೆ ಕರೆ ರೆಕಾರ್ಡ್ ಮಾಡಲು ಅವಕಾಶವಿರಲಿಲ್ಲ. ಇದು ಗೂಗಲ್ ಫೋನ್ ಆಪ್‌ನ ಒಂದು ಪ್ರಮುಖ ಅನಾನುಕೂಲ ಎಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಒಪ್ಪೋ ಸಂಸ್ಥೆಯ ODialer ಆಪ್ ಒಪ್ಪೋ ಗ್ರಾಹಕರಿಗೆ ಉತ್ತಮ ಫೀಚರ್ ಒದಗಿಸಿ ಕೊಡುತ್ತಿದೆ. ಇದಲ್ಲದೆ ODialer ಆಪ್ ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 5000+ ಡೌನ್‌ಲೋಡ್ ಕಂಡಿದ್ದು, 3.9 ರೇಟಿಂಗ್ ಅನ್ನು ಕೂಡ ಪಡೆದುಕೊಂಡಿದೆ.