ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆ ಪರಿಹಾರಕ್ಕೆ ಬಾಳೆಹಣ್ಣು ಖರ್ಜೂರ ದಿ ಬೆಸ್ಟ್‌

ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಸಹಜ. ಆದರೆ , ಕೆಲವೊಮ್ಮೆ ಕೆಲ ಸಮಸ್ಯೆಗಳನ್ನು ಯಾರಲ್ಲೂ ಹಂಚಿಕೊಳ್ಳಲು ಆಗದೇ ಒದ್ದಾಡುವವರು ಕೂಡ ಇದ್ದಾರೆ. ಅದರಲ್ಲಿಯೂ ಪುರುಷರಲ್ಲಿ ಕಂಡು ಬರುವ ಲೈಂಗಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ನೈಸರ್ಗಿಕವಾಗಿ ಪರಿಹರಿಸಿಕೊಳ್ಳುವ ಸುಲಭೋಪಾಯದ ಬಗ್ಗೆ ಯೋಚನೆಯಲ್ಲಿದ್ದರೆ, ಚಿಂತೆ ಬಿಡಿ… ಸರಳ ಮನೆಮದ್ದುಗಳನ್ನೂ ಬಳಸಿ ಪರಿಹಾರ ಕಂಡುಕೊಳ್ಳಲು ನಾವು ಹೇಳುವ ನಿಮಗೆ ಕೆಲ ವಿಧಾನಗಳನ್ನು ಅನುಸರಿಸಿ ಪ್ರಯೋಜನ ನೀವೇ ಕಂಡುಕೊಳ್ಳಿ!!

 

ಹೆಚ್ಚಿನ ಪುರುಷರು ತಾವು ಅನುಸರಿಸುತ್ತಿರುವ, ಕೆಟ್ಟ ಜೀವನಶೈಲಿ, ಅನಾರೋಗ್ಯಕಾರಿ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಮಧ್ಯಪಾನ ಹಾಗೂ ಧೂಮಪಾನ ಮಾಡುವಂತಹ ಚಟಗಳು ಲೈಂಗಿಕತೆಯಲ್ಲಿ ನಿರಾಸಕ್ತಿ ಮೂಡಲು ಕಾರಣವಾಗುತ್ತದೆ. ಇತ್ತೀಚಿನ ಹಲವಾರು ಸಂಶೋಧನೆಗಳ ಅನುಸಾರ, ಬಹಳಷ್ಟು ಮಂದಿ ಪುರುಷರಿಗೆ ಲೈಂಗಿಕ ಶಕ್ತಿ ಕಡಿಮೆಯಾಗುತ್ತಿದೆ ಎಂದು ವರದಿಯೊಂದರ ಮೂಲಕ ತಿಳಿದು ಬಂದಿದೆ. ಅಷ್ಟೇ ಅಲ್ಲದೇ, ಇದರಿಂದಾಗಿ ಗಂಡ-ಹೆಂಡತಿಯ ಇಬ್ಬರ ಕೂಡ ಜೀವನದ ಮೇಲೂ ಕೂಡ ಪರಿಣಾಮ ಬೀರುತ್ತದೆ.ಬಾಳೆಹಣ್ಣು ಕೂಡ ಪುರುಷರ ಬೆಸ್ಟ್ ಫ್ರೆಂಡ್ ಎಂದರೂ ತಪ್ಪಾಗಲಾರದು.ಯಾಕೆ ಅಂತೀರಾ?

ಸಾಮಾನ್ಯವಾಗಿ ಸುಲಭವಾಗಿ ಹೆಚ್ಚಿನವರ ಮನೆಯಂಗಳದಲ್ಲಿ ದೊರೆಯುವ ಬಾಳೆ ಹಣ್ಣಿನಿಂದ ದೊರೆಯುವ ಆರೋಗ್ಯ ಪ್ರಯೋಜನಗಳು ಅನೇಕ. ವರ್ಷವಿಡಿ ದೊರೆಯುವಂತಹ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದಾಗಿದ್ದು, ದಿನಕ್ಕೊಂದು ಬಾಳೆಹಣ್ಣು ತಿಂದರೂ ಸಾಕು, ಆರೋಗ್ಯಕ್ಕೆ ಹಲವಾರು ಬಗೆಯ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಬಾಳೆ ಹಣ್ಣಿನಲ್ಲಿ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳು ಸಿಗುವುದರ ಜೊತೆಗೆ, ವಿಟಮಿನ್ ಎ, ಪೋಸ್ಪರಸ್, ಕಾರ್ಬೋ ಹೈಡ್ರೇಟ್ಸ್ ಮತ್ತು ಕಬ್ಬಿನಾಂಶವು ಅಗಾಧ ಪ್ರಮಾಣದಲ್ಲಿ ಈ ಹಣ್ಣಿನಲ್ಲಿ ಕಂಡು ಬರುತ್ತದೆ.

ನೈಸರ್ಗಿಕವಾಗಿ ಸಿಗುವ ಬಾಳೆಹಣ್ಣಿನಲ್ಲಿ ಬ್ರೋಮೇಲೈನ್ ಎನ್ನುವ ಸಂಯುಕ್ತ ಅಂಶ ಅಗಾಧ ಪ್ರಮಾಣದಲ್ಲಿ ಕಂಡುಬರುವ ಹಿನ್ನೆಲೆ ಇದು ಪುರುಷರ ಲೈಂಗಿಕ ಸಮಸ್ಯೆಗಳನ್ನು ದೂರ ಮಾಡುವುದಲ್ಲದೆ ವೀರ್ಯಾಣುಗಳ ಸಂತತಿಯನ್ನು ಕೂಡ ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ಈ ಪುರುಷರು ಪ್ರತಿದಿನ ಒಂದೆರಡು ಬಾಳೆ ಹಣ್ಣನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು. ಇಲ್ಲವೇ ಹಣ್ಣಿನ ಸ್ಮೂಥಿ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಊಟವಾದ ಬಳಿಕ ಮಧ್ಯಾಹ್ನ ಇಲ್ಲವೇ ರಾತ್ರಿ ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವ ಅಭ್ಯಾಸ ಮಾಡಿಕೊಂಡರೆ ಉತ್ತಮ. ಬಾಳೆಹಣ್ಣಿನ ಸ್ಮೂಥಿ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು.

ಖಾಲಿ ಹೊಟ್ಟೆಗೆ ಎರಡು-ಮೂರು ಖರ್ಜೂರ ತಿಂದರೆ ನಿಮಗೆ ಪ್ರಯೋಜನ ಆಗೋದು ಗ್ಯಾರಂಟಿ!!. ಖರ್ಜೂರಗಳಲ್ಲಿ ಪುರುಷರ ವೀರ್ಯಾಣುಗಳ ಸಂತತಿಯನ್ನು ಹೆಚ್ಚಿಸುವಂತಹ ನೈಸರ್ಗಿಕ ಫ್ಲೇವನಾಯ್ಡ್ ಅಂಶಗಳು ಹೆಚ್ಚಾಗಿ ಕಂಡುಬರುವುದರಿಂದ ಪುರುಷರ ಲೈಂಗಿಕ ಸಮಸ್ಯೆಗಳು ಪರಿಹಾರ ಕಂಡುಕೊಳ್ಳಲು ನೆರವಾಗುತ್ತವೆ. ಪುರುಷರ ಲೈಂಗಿಕ ಸಮಸ್ಯೆಗಳನ್ನು ವೃದ್ಧಿಸುವ ವಿಷಯದಲ್ಲಿ ಖರ್ಜೂರಗಳು ಮಹತ್ತರ ಪಾತ್ರ ವಹಿಸುತ್ತವೆ ಬಹುಮುಖ್ಯವಾಗಿ ಪುರುಷರು ಪ್ರತಿದಿನ ಒಂದೆರಡು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ವೀರ್ಯಾಣುಗಳ ಸಂತತಿ ಹೆಚ್ಚಾಗುವುದು ಮಾತ್ರವಲ್ಲದೆ, ಲೈಂಗಿಕ ಸಮಸ್ಯೆಗಳು ಕೂಡ ದೂರವಾಗುತ್ತವೆ.

ಆದಷ್ಟು ಹಸಿ ಖರ್ಜೂರದ ಹಣ್ಣುಗಳನ್ನು ತಂದಿಟ್ಟುಕೊಂಡು, ಪ್ರತಿದಿನ ಆರೋಗ್ಯಕರವಾಗಿ ಸೇವನೆ ಮಾಡುವುದು ಒಳ್ಳೆಯದು. ನೈಸರ್ಗಿಕ ಸಿಹಿ ಅಂಶಗಳನ್ನು ಒಳಗೊಂಡಿರುವ ಖರ್ಜೂರಗಳನ್ನು ಹಸಿಯಾಗಿ ತಿನ್ನಬಹುದು ಇಲ್ಲವೇ ಒಣಗಿದ ರೂಪದಲ್ಲಿ ಕೂಡ ಸೇವನೆ ಮಾಡಬಹುದಾಗಿದ್ದು, ಅಲ್ಲದೆ ಹಸಿ ಖರ್ಜೂರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಉತ್ತಮ .

1 Comment
  1. MichaelLiemo says

    ventolin india: buy albuterol inhaler – ventolin price canada
    ventolin over the counter

Leave A Reply

Your email address will not be published.