ಬರಲಿದೆ ‘ಇಂಡಿಯನ್‌ 2’ ಸಿನಿಮಾ | ಕಮಲ್‌ ಹಾಸನ್‌ ಗೆ ಈ ಬಾರಿ ಇವರೇ ನಾಯಕಿ

ಕಮಲ್ ಹಾಸನ್ ವಿಕ್ರಮ್ ಸಿನಿಮಾದ ಭರ್ಜರಿ ಯಶಸ್ಸಿನ ಅಲೆಯಲ್ಲಿ ಮಿಂದೇಳುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರ ಕಮಲ್ ಅವರ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಲಿಸ್ಟ್ ನಲ್ಲಿ ಸೇರ್ಪಡೆಗೊಂಡಿದೆ. ಸದ್ಯ ಕಮಲ್ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದು ರಾಕುಲ್ ಪ್ರೀತ್‌ ಸಿಂಗ್‌ (Rakul Preet Singh) ನಾಯಕಿಯಾಗಿ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಮಿಳಿನ `ವಿಕ್ರಮ್’ ಚಿತ್ರ ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದ್ದು, ಈ ಚಿತ್ರದ ಗೆಲುವಿನ ಬಳಿಕ ಕಮಲ್ ಹಾಸನ್, ತಮ್ಮ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ .

 

ಎಸ್. ಶಂಕರ್ ನಿರ್ದೇಶನದ ಇಂಡಿಯನ್ 2ನಲ್ಲಿ ಕಮಲ್ ಹಾಸನ್ ಬಿಝಿ ಯಾಗಿ ಬಿಟ್ಟಿದ್ದಾರೆ. ಬಹು ನಿರೀಕ್ಷಿತ ಚಿತ್ರಕ್ಕೆ ನಟಿ ಯಾರು ಎಂಬ ಬಗ್ಗೆ ದೊಡ್ದ ಮಟ್ಟದಲ್ಲಿ ಚರ್ಚೆ ನಡೆಯುತ್ತಿತ್ತು. ಸದ್ಯ ಎಲ್ಲರ ಕುತೂಹಲಕ್ಕೆ ತೆರೆ ಬಿದ್ದಿದ್ದು ನಟ ಕಮಲ್‌ ಹಾಸನ್ ರವರಿಗೆ ನಾಯಕಿಯಾಗಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಸಾಥ್ ನೀಡಿದ್ದಾರೆ. ಈ ಸಿನಿಮಾ 1996ರಲ್ಲಿ ಬಂದ ಭಾರತೀಯುಡು ಚಿತ್ರದ ಮುಂದುವರಿದ ಭಾಗವೆನ್ನಲಾಗಿದೆ. ಶಂಕರ್ ನಿರ್ದೇಶನದ ಈ ಸಿನಿಮಾದಲ್ಲಿ ಕನ್ನಡದ ಹೀರೋ ಸುದೀಪ್ ಹಾಗೂ ಮತ್ತೋರ್ವ ನಾಯಕ ಸಿದ್ಧಾರ್ಥ್ ರವರು ಕೂಡ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಿನಿಮಾದಲ್ಲಿ ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಸಮುದ್ರಖನಿ, ಬಾಬಿ ಸಿಂಹ ಮುಂತಾದ ದೊಡ್ಡ ತಾರಾಬಳಗವಿದೆ ಎನ್ನಲಾಗಿದೆ.

ಕಮಲ್ ಹಾಸನ್ ರವರ ಜೊತೆಗೆ ನಾಯಕಿಯಾಗಿ ನಟಿಸುತ್ತಿರುವ ರಾಕುಲ್ ಪ್ರೀತ್ ಸಿಂಗ್ ಈ ಕುರಿತು ತಮ್ಮ ಸಂತೋಷವನ್ನೂ ವ್ಯಕ್ತಪಡಿಸಿದ್ದಾರೆ. `ಇಂಡಿಯನ್ 2’ನಲ್ಲಿ ನಟಿಸಲು ಎದುರು ನೋಡುತ್ತಿರುವ ಬಗ್ಗೆ ಹಾಗೂ ನಾನು ತುಂಬಾ ಲಕ್ಕಿ ಕಮಲ್ ಹಾಸನ್ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂದು ಸಿನಿಮಾದಲ್ಲಿ ನಟಿಸುವ ಬಗ್ಗೆ ಅಧಿಕೃತವಾಗಿ ಆಂಗ್ಲ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.