ಈರುಳ್ಳಿ ರಸದಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಇಂದಿನ ಚಳಿಗಾಲಕ್ಕೆ ಅಂತೂ ಕೇಳುವುದೇ ಬೇಡ. ನೆಗಡಿ, ಜ್ವರ ಹೀಗೆ ಒಂದಲ್ಲ ಒಂದಲ್ಲ ತಪ್ಪಿದ್ದೆ ಇಲ್ಲ ಎಂಬಂತಾಗಿದೆ.
ಆದ್ರೆ, ಇದಕ್ಕೆಲ್ಲ ದವಾಖಾನೆಗೆ ತೆರಳಿ ಇಂಗ್ಲಿಷ್ ಮದ್ದುಗಳನ್ನು ಖರೀದಿಸುತ್ತಾರೆ. ಇದ್ರಿಂದ ಒಮ್ಮೆಗೇನೋ ಸಮಸ್ಯೆ ಬಗೆ ಹರಿಸಬಹುದು. ಆದ್ರೆ ಇದರಿಂದ ಆರೋಗ್ಯಕ್ಕೆ ಸೈಡ್ ಎಫೆಕ್ಟ್ ಅಂತೂ ಪಕ್ಕ. ಹಾಗಾಗಿ ಮನೆಮದ್ದುಗಳ ಮೂಲಕ ಶೀತ ಹಾಗೂ ಕಫದ ಸಮಸ್ಯೆಯನ್ನು ನಿವಾರಿಸುವುದು ಉತ್ತಮ.
ಹಾಗಾಗಿ, ಶೀತ, ಕಫ ಸಮಸ್ಯೆಗೆ ಮನೆಯಲ್ಲೇ ತಯಾರಿಸುವ ಮನೆ ಮದ್ದುಗಳನ್ನು ತಿಳಿಸಿಕೊಡುತ್ತೇವೆ ನೋಡಿ.. ಹೌದು. ಇಂತಹ ಸಮಸ್ಯೆ ನಿವಾರಿಸುವಲ್ಲಿ ಈರುಳ್ಳಿ ರಸ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಈರುಳ್ಳಿ ರಸ ವೈರಲ್ ಗಳ ವಿರುದ್ಧ ಹೋರಾಡಿ ನೆಗಡಿಯಿಂದ ಮುಕ್ತಿ ಕೊಡುತ್ತದೆ. ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ ರಸ ಹಿಂಡಿ. ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಲು ಕೊಡಿ. ಮಕ್ಕಳಿಗಾದರೆ ಒಂದು ಚಮಚ ರಸ ಸಾಕು. ದಿನಕ್ಕೆ ಎರಡು ಬಾರಿ ಇದನ್ನು ಕೊಡಬಹುದು. ಇದನ್ನು ಕೊಟ್ಟ ತಕ್ಷಣ ಕೆಲವು ಮಕ್ಕಳು ವಾಂತಿ ಮಾಡಿಕೊಳ್ಳುತ್ತಾರೆ. ಆದರೆ, ಇದಕ್ಕೆ ಭಯಪಡಬೇಕಿಲ್ಲ. ಯಾಕಂದ್ರೆ, ಕಫ ವಾಂತಿಯ ರೂಪದಲ್ಲಿ ಹೊರಹೋಗುತ್ತದಷ್ಟೇ.
ಶೀತದಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಈರುಳ್ಳಿಯ ಸ್ಟೀಮ್ ತೆಗೆದುಕೊಳ್ಳಿ. ಇದು ಎದೆಯಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಕಫವನ್ನು ಕರಗಿಸುತ್ತದೆ. ಹಾಗೂ ನಿಮ್ಮ ಉಸಿರಾಟದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗೆಯೇ ಈರುಳ್ಳಿ ಸಿರಪ್ ಅನ್ನು ಇದೇ ವಿಧಾನದಲ್ಲಿ ತಯಾರಿಸಬಹುದು. ಜೇನುತುಪ್ಪ ಬೆರೆಸಿದ ಈರುಳ್ಳಿ ರಸವನ್ನು ನಾಲ್ಕು ಗಂಟೆ ಅಂತರದಲ್ಲಿ ಸೇವಿಸುತ್ತಾ ಬನ್ನಿ. ಒಮ್ಮೆ ತಯಾರಿಸಿದ ಈ ಸಿರಪ್ ಎರಡು ಬಾರಿ ಕುಡಿಯುವ ವೇಳೆ ಖಾಲಿಯಾಗುವಷ್ಟಿರಲಿ. ಈ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕೊಂಡುಕೊಳ್ಳಲಿ…