ಈ ಡಿವೈಸ್ ಗಳು ನಿಮ್ಮನ್ನು ಹುಬ್ಬೇರಿಸುವುದಂತೂ ಖಂಡಿತ!!!

ಜನಪ್ರಿಯ ಇ-ಕಾಮರ್ಸ್​ ಕಂಪೆನಿಯಾಗಿರುವ ಅಮೆಜಾನ್​ ಪ್ರತಿಬಾರಿ ವಿವಿಧ ಆಫರ್ ಗಳ‌ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿನ ಗ್ಯಾಡ್ಜೆಟ್‌ ಗ್ರಾಹಕರನ್ನು ಸೆಳೆಯಲಿದೆ. ಹೌದು, ಅಮೆಜಾನ್‌ ತಾಣದಲ್ಲಿ ಕೆಲವು ಕುತೂಹಲಕಾರಿ ಗ್ಯಾಡ್ಜೆಟ್‌ ಉತ್ಪನ್ನಗಳು ಲಭ್ಯವಿದ್ದು, ಅತಿಕಡಿಮೆ ಬೆಲೆಗೆ ಗ್ರಾಹಕರ ಕೈಸೇರಲಿದೆ. ಸದ್ಯ ಈ ಡಿವೈಸ್ ಗಳು ನಿಮ್ಮನ್ನ ಹುಬ್ಬೇರಿಸುವುದಂತೂ ಖಂಡಿತ!!. ಹಾಗಾದ್ರೆ ಯಾವುದು ಅಂತಹ ಅದ್ಭುತ ಗ್ಯಾಡ್ಜೆಟ್‌ ಉತ್ಪನ್ನಗಳು ಎಂದು ನೋಡೋಣ.

 

ಪೋರ್ಟೆಬಲ್‌ ಯುಎಸ್‌ಬಿ LED :

QOCXRRIN IN-876 ಪೋರ್ಟೆಬಲ್‌ ಯುಎಸ್‌ಬಿ LED ಡಿವೈಸ್‌ ರಚನೆ ನೋಡೋದಿಕ್ಕೆ ಮಿನಿ ಟ್ಯೂಬ್‌ಲೈಟ್‌ ತರಹ ಇದೆ. ಆದರೆ ಹೆಚ್ಚಿನ ಬೆಳಕನ್ನು ನೀಡುತ್ತದೆ. ಇದು ಒಂಬತ್ತು ಮೀಟರ್ ವಾಯರ್‌ ಸೌಲಭ್ಯವನ್ನು ಪಡೆದಿದ್ದು, ಅಮೆಜಾನ್‌ ತಾಣದಲ್ಲಿ ಈ ಡಿವೈಸ್‌ ನ ಬೆಲೆ ಕೇವಲ 99ರೂ. ಆಗಿದೆ. ಇನ್ನೂ, ಈ ಲೈಟ್ ಅನ್ನು ರೂಮ್‌, ಕಾರಿನ ಒಳಗೆ, ಸಣ್ಣ ಅಂಗಡಿಗಳಲ್ಲಿ ಸೇರಿದಂತೆ ಇನ್ನೂ, ಕೆಲವು ಸಂದರ್ಭಗಳಲ್ಲಿ ಬಳಸಬಹುದಾಗಿದೆ.

USB LED ಬುಕ್ ಲೈಟ್ :

ಅಮೆಜಾನ್ ನಲ್ಲಿ ಮಿನಿ ಪೋರ್ಟಬಲ್ USB LED ಬುಕ್ ಲೈಟ್ ಡಿವೈಸ್‌ ಖರೀದಿಗೆ ಲಭ್ಯವಾಗಲಿದೆ. ಇದು ತುಂಬಾನೆ ಹಗುರವಾಗಿದ್ದು, ಗಾತ್ರದಲ್ಲಿ ಸಣ್ಣ ಇರೋದ್ರಿಂದ ಬಳಕೆಗೆ ಸುಲಭ. ಹಾಗೇ ಅಮೆಜಾನ್ ತಾಣದಲ್ಲಿ ಈ ಡಿವೈಸ್‌ ಬೆಲೆ ಕೇವಲ 89ರೂ. ಆಗಿದೆ.

ಎಲೆಕ್ಟ್ರಿಕ್ ಏರ್ ಕಂಪ್ರೆಸರ್ :

ಈ ಎಲೆಕ್ಟ್ರಿಕ್ ಏರ್ ಕಂಪ್ರೆಸರ್ ಸಾಧನ ಕಾರಿನ ಟೈರ್‌ಗಳಿಗೆ ಗಾಳಿ ತುಂಬಿಸಲು ಸಹಕಾರಿಯಾಗಿದೆ. ಇದರಿಂದ ಕಾರ್ ಟೈರ್‌ಗಳನ್ನು 8 ಬಾರಿ ಟಾಪ್ ಅಪ್ ಮಾಡಬಹುದು. ಅಲ್ಲದೆ, ಈ ಸಾಧನವನ್ನು ಜೊತೆಗೆ ಕೊಂಡೊಯ್ಯಬಹುದು. ಹಾಗೇ ಇದು ತುರ್ತು ಸಂದರ್ಭಗಳಲ್ಲಿ ತುಂಬಾ ಸಹಕಾರಿಯಾಗಿದೆ. ಶಿಯೋಮಿ ಸಂಸ್ಥೆಯ ಈ ಸಾಧನ ಅಂತರ್ನಿರ್ಮಿತ 2000 mAh ಲಿಥಿಯಂ ಬ್ಯಾಟರಿಯೊಂದಿಗೆ ಬರುತ್ತದೆ.

ಕಾರ್ ವ್ಯಾಕ್ಯೂಮ್ ಕ್ಲೀನರ್ :

ಬರ್ಗ್‌ಮನ್ ಸ್ಟನ್ನರ್ ಕಾರ್ ವ್ಯಾಕ್ಯೂಮ್ ಕ್ಲೀನರ್ 5kpa+ ಹೀರಿಕೊಳ್ಳುವ ಸಾಮರ್ಥ್ಯದೊಂದಿಗೆ 150W ಮೋಟಾರ್‌ ಜೊತೆಗೆ ಬರಲಿದ್ದು, ಇದು ಸ್ಟೇನ್‌ಲೆಸ್ ಸ್ಟೀಲ್ HEPA ಫಿಲ್ಟರ್ ಅನ್ನು ಕೂಡ ಒಳಗೊಂಡಿದೆ. ಹಾಗೇ ಈ ಸಾಧನ 75db ಶಬ್ದ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ಸದ್ಯ ಈ ಡಿವೈಸ್ ಅಮೆಜಾನ್ ನಲ್ಲಿ ಲಭ್ಯವಾಗಲಿದೆ.

pTron ಬುಲೆಟ್‌ ಪ್ರೊ 36w ಚಾರ್ಜರ್ :

ಅಮೆಜಾನ್ ಪ್ಲಾಟ್ ಫಾರ್ಮ್ ನಲ್ಲಿ ಬೆಸ್ಟ್‌ ಸೆಲ್ಲರ್ ಪಟ್ಟಿಯಲ್ಲಿರುವ ವಸ್ತುಗಳಲ್ಲಿ ಇದು ಕೂಡ ಒಂದು. pTron ಬುಲೆಟ್‌ ಪ್ರೊ 36w ಫಾಸ್ಟ್‌ ಚಾರ್ಜರ್, ಮೂರು ಪೋರ್ಟ್‌ ಆಯ್ಕೆಗಳನ್ನು ಹೊಂದಿದೆ. ಈ ಸಾಧನವನ್ನು ಕಾರಿನಲ್ಲಿ ಬಳಕೆ ಮಾಡಬಹುದು. ಅಲ್ಲದೆ, ಇದು ಎಲ್ಲಾ ಫೋನ್‌ ಹಾಗೂ ಟ್ಯಾಬ್‌ ಡಿವೈಸ್‌ಗಳಿಗೆ ಸಪೋರ್ಟ್‌ ಮಾಡುತ್ತದೆ. ಸದ್ಯ ಈ ಡಿವೈಸ್ ನ ಬೆಲೆ 299 ಆಗಿದ್ದು, ಅಮೆಜಾನ್ ನಲ್ಲಿ ಖರೀದಿ ಮಾಡಬಹುದು.

ಮಿನಿ ಕಾರ್ ಡ್ಯಾಶ್ ಕ್ಯಾಮೆರಾ (DDPAI) :

ಈ DDPAI ಮಿನಿ ಕಾರ್ ಡ್ಯಾಶ್ ಕ್ಯಾಮೆರಾ ಪೂರ್ಣ ಪ್ರಮಾಣದ ಹೆಚ್‌ಡಿ ರೆಕಾರ್ಡಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಹಾಗೂ G ಸಂವೇದಕ, Wi-Fi, ಪಾರ್ಕಿಂಗ್ ಮೋಡ್ ಮತ್ತು 128 GB SD ಕಾರ್ಡ್ ಬೆಂಬಲದೊಂದಿಗೆ ಬರಲಿದ್ದು, ಈ ಸಾಧನ 140 ಡಿಗ್ರಿ ಫೀಲ್ಡ್ ಆಫ್ ವ್ಯೂ ನೀಡುತ್ತದೆ. ಸದ್ಯ ಅಮೆಜಾನ್ ನಲ್ಲಿ ಈ ಡಿವೈಸ್ ಲಭ್ಯವಾಗಲಿದೆ.

Leave A Reply

Your email address will not be published.