ನಟಿಯ ಜೊತೆ ಅಸಭ್ಯ ವರ್ತನೆ | ವಿದ್ಯಾರ್ಥಿಯ ಜೊತೆ ಕಾಲೇಜು ಆಡಳಿತ ಮಂಡಳಿ ಮಾಡಿದ್ದೇನು?

ನಟ ಸೂರ್ಯ ಅಭಿನಯದ “ಸೂರರೈ ಪೋಟ್ರು” ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಅದ್ಭುತ ನಟನೆಯ ಮೂಲಕ ಜನಪ್ರಿಯತೆ ಗಳಿಸಿದ ನಟಿ ಅಪರ್ಣಾ ಬಾಲಮುರಳಿ ಎರ್ನಾಕುಲಂನ ಕಾನೂನು ವಿದ್ಯಾರ್ಥಿಯೊಬ್ಬನ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಯ ಬಳಿಕ ಆ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ ಎನ್ನಲಾಗಿದೆ.

 

ಕಾರ್ಯಕ್ರಮದ ವೇದಿಕೆ ಮೇಲೆ ವಿದ್ಯಾರ್ಥಿಯೊಬ್ಬ ಅಪರ್ಣಾ ಬಾಲಮುರಳಿ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ಅಪರ್ಣಾ ಅಸಮಾಧಾನ ಹೊರಹಾಕಿದ್ದರು. ಇದೀಗ ಒಂದು ವಾರಗಳ ಕಾಲ ಕಾಲೇಜಿನಿಂದ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಿರುವ ಆಡಳಿತ ಮಂಡಳಿ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಅಪರ್ಣಾ ಅವರ ಬಳಿ ಕ್ಷಮೆಯಾಚಿಸಿದೆ.

ಜನವರಿ 26 ರಂದು ಬಿಡುಗಡೆಯಾಗಲಿರುವ ‘ತಂಗಂ’ ಚಿತ್ರದ ಪ್ರಚಾರಕ್ಕೆಂದು ಅಪರ್ಣಾ ಅವರು ಎರ್ನಾಕುಲಂನಲ್ಲಿರುವ ಕಾನೂನು ಕಾಲೇಜಿಗೆ ಆಗಮಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಸೆಲ್ಪಿಗಾಗಿ ಅಪರ್ಣಾ ಬಳಿ ಮನವಿ ಮಾಡಿದ್ದು, ಅಪರ್ಣಾ ಎದ್ದು ನಿಂತ ಸಂದರ್ಭ ವಿದ್ಯಾರ್ಥಿ ಅಪರ್ಣಾ ಅವರ ಮೇಲೆ ಕೈ ಹಾಕಲು ಪ್ರಯತ್ನಿಸಿದ್ದು ಹೀಗಾಗಿ ವಿದ್ಯಾರ್ಥಿಯ ಅನುಚಿತ ವರ್ತನೆಗೆ ನಟಿ ಅಪರ್ಣಾ ರವರು ಮುಜುಗರಕ್ಕೀಡಾದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಘಟನೆಯ ಕುರಿತಾಗಿ, ನಟಿ ಅಪರ್ಣಾ ಅಸಮಾಧಾನ ಹೊರ ಹಾಕಿದ್ದು, ಮಹಿಳೆಯ ಅನುಮತಿಯಿಲ್ಲದೆ ಆಕೆಯ ದೇಹವನ್ನು ಸ್ಪರ್ಶಿಸುವ ನಡೆ ಸರಿಯಲ್ಲ ಎಂಬುದು ಕಾನೂನು ಕಾಲೇಜು ವಿದ್ಯಾರ್ಥಿಗೆ ಅರ್ಥವಾಗದಿರುವುದು ತುಂಬಾ ಗಂಭೀರವಾಗಿದೆ ಎಂದು ವಿದ್ಯಾರ್ಥಿಯ ವರ್ತನೆಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

ತನ್ನ ಕೈ ಹಿಡಿದು ನಿಲ್ಲುವಂತೆ ಮಾಡಿದ್ದು ಸರಿಯಲ್ಲ ಜೊತೆಗೆ ವಿದ್ಯಾರ್ಥಿ ನಟಿಯ ಜೊತೆ ಸೆಲ್ಪಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ನಟಿಯನ್ನೂ ಅನುಚಿತವಾಗಿ ಸುತ್ತಲೂ ಕೈ ಹಾಕಿದ್ದು ಸರಿಯಾದ ಕ್ರಮವಲ್ಲ ಎಂದು ನಟಿ ಅಪರ್ಣಾ ಅಸಮಾಧಾನ ವ್ಯಕ್ತಪಡಿಸಿದ್ದು ಮಹಿಳೆ ಜೊತೆ ಈ ರೀತಿ ನಡೆದುಕೊಳ್ಳಬಾರದು. ಈ ಕುರಿತಾಗಿ ತಾನು ಯಾವ ದೂರು ದಾಖಲಿಸಲು ಇಚ್ಛಿಸುವುದಿಲ್ಲ.ಈ ರೀತಿ ನಡೆದುಕೊಳ್ಳಲು ಕೂಡ ಸಮಯವಿಲ್ಲ ಆದರೆ ತನ್ನ ಅಕ್ಷೇಪವೇ ಇದಕ್ಕೆ ಉತ್ತರ ಎನ್ನುವ ಮೂಲಕ ವಿದ್ಯಾರ್ಥಿ ನಟಿಯೊಂದಿಗೆ ನಡೆದುಕೊಂಡ ರೀತಿಗೆ ನಟಿ ಅಪರ್ಣಾ ಆಕ್ರೋಶ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.