ಕಣ್ಣಾಮುಚ್ಚಾಲೆ ಆಟ ಆಡಲು ರೆಡಿಯಾದ ಗಂಡ ಹೆಂಡತಿ | ಉಸಿರು ಗಟ್ಟಿ ಗಂಡ ಸಾವು !

ಹಿರಿಯರ ಅನುಭವ ಪ್ರಕಾರ ಯಾವಾಗಲು ಗಾಳಿ, ನೀರು, ಬೆಂಕಿ ಜೊತೆಗೆ ಸ್ವಲ್ಪ ಹುಷಾರಾಗಿ ಇರಬೇಕು ಅನ್ನುತ್ತಾರೆ. ಯಾಕೆಂದರೆ ಅನಾಹುತ ತಪ್ಪಿದ್ದಲ್ಲ. ಒಂದು ಕ್ಷಣ ಮೈ ಮರೆತರೆ ಪ್ರಾಣಪಕ್ಷಿಯೇ ಹಾರಿ ಹೋಗಬಹುದು. ಹಾಗೆಯೇ ಇಲ್ಲೊಂದು ದಂಪತಿ ಕಣ್ಣಾ ಮುಚ್ಚಾಲೆ ಆಟ ಆಡಲು ಹೋಗಿ ಗಂಡ ಜೀವ ಕಳೆದುಕೊಂಡಿದ್ದಾನೆ.

 

ಸದ್ಯ ಈ ಘಟನೆ ಅಮೇರಿಕಾದಲ್ಲಿ ನಡೆದಿದ್ದು ದಂಪತಿ ಇಬ್ಬರೂ ವೈನ್ ಕುಡಿದ ಬಳಿಕ ಸಾರಾ ಬೂನ್ ಮತ್ತು ಆಕೆಯ ಗಂಡ ಕಣ್ಣಾ ಮುಚ್ಚಾಲೆ ಆಟ ಆಡಲು ಮುಂದಾಗುತ್ತಾರೆ. ಈ ವೇಳೆ ಗಂಡ ಅಡಗಿಕುಳಿತುಕೊಳ್ಳಲು ಸೂಟ್‌ಕೇಸ್ ಒಳಗೆ ಕುಳಿತುಕೊಳ್ಳುತ್ತಾನೆ . ಆದ್ರೆ ಸೂಟ್‌ಕೇಸ್ ಒಳಗಿದ್ದ ಗಂಡನಿಗೆ ಉಸಿರುಗಟ್ಟಲು ಶುರುವಾಗುತ್ತದೆ. ಆತ ಉಸಿರಾಡಲು ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆದರೆ ಸಾರಾ ಮಾತ್ರ ಆತ ಹೊರಕ್ಕೆ ಬರುತ್ತಾನೆ ಅಂದುಕೊಂಡು ಸುಮ್ಮನಾಗಿ ಹೊರಟು ಹೋಗುತ್ತಾಳೆ. ಇತ್ತ ಗಂಡ ಅಲ್ಲೇ ಉಸಿರುಗಟ್ಟಿ ಸಾವನ್ನಪ್ಪುತ್ತಾನೆ.

ಕೇವಲ ಕಣ್ಣಾ ಮುಚ್ಚಾಳೆ ಆಟದಿಂದ ಆತನೊಬ್ಬ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಇಂತಹ ಹಲವಾರು ಘಟನೆ ಕೇಳಿರಬಹುದು ಮತ್ತು ನೋಡಿರಬಹುದು ಇನ್ನಾದರೂ ನಾವು ಜಾಗೃತರಾಗಿರಬೇಕು.

Leave A Reply

Your email address will not be published.