ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಎನ್​ಐಎ ಚಾರ್ಜ್​ಶೀಟ್ ನಲ್ಲಿ ಸ್ಪೋಟಕ ಅಂಶ ಬಯಲು

ಕರಾವಳಿಯ ಜನರನ್ನು ಬೆಚ್ಚಿ ಬೀಳಿಸಿದ್ದ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣದ ಕುರಿತಂತೆ ಮಾಹಿತಿಯೊಂದು ಹೊರಬಿದ್ದಿದೆ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆ ಪ್ರಕರಣದ ಕುರಿತಂತೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಒಟ್ಟು 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ (Charge Sheet) ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್​ಶೀಟ್​​ನಲ್ಲಿ​​ ಹಲವು ಅಂಶಗಳು ಉಲ್ಲೇಖ ಮಾಡಲಾಗಿದ್ದು. ಗ್ಯಾಂಗ್ ಒಂದು ಪ್ರವೀಣ್ ನೆಟ್ಟಾರು ಸೇರಿ ನಾಲ್ವರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ. 240 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡ ಒಟ್ಟು 1,500 ಪುಟಗಳ ಚಾರ್ಜ್​ಶೀಟ್ ಅನ್ನು NIA ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಕುರಿತಾಗಿ ಈವರೆಗೆ 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಪಿಎಫ್ಐ, ಮಸೂದ್ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಮಸೂದ್ ಅಂತ್ಯಕ್ರಿಯೆ ಜಾಗದಲ್ಲಿ ಮೃತದೇಹದ ಎದುರು ಶಪಥ ಮಾಡಲಾಗಿದ್ದು, ಹಿಂದು ಸಂಘಟನೆ, ಬಿಜೆಪಿಯಲ್ಲಿ ಗುರುತಿಸಿಕೊಂಡವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಲಾಗಿತ್ತು. ಅದೇ ರೀತಿ ಪಿಎಫ್ಐ‌ ಮಸೂದ್ ಕೊಲೆಯನ್ನು ತನ್ನ ಮಿಷನ್​ಗೆ ಬಳಸಿಕೊಂಡಿದೆ ಎನ್ನಲಾಗಿದೆ.ಪ್ರವೀಣ್ ನೆಟ್ಟಾರು ಮಾತ್ರವಲ್ಲದೇ ಮತ್ತೊಬ್ಬ ಸಂಘಟನೆಯ ವ್ಯಕ್ತಿಯನ್ನು ಸಹಿತ ಟಾರ್ಗೆಟ್ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವ್ಯಕ್ತಿ ಮೇಲೆ ದಾಳಿ ಮಾಡುವ ನಿಮಿತ್ತ ಸರ್ವಿಸ್ ಇಲ್ಲವೇ ಕಿಲ್ಲರ್ ಟೀಮ್ ಎಂಬ ಹೆಸರಿನ ಸದ್ಯಸ್ಯರ ತಂಡ ಕೂಡ ಅಣಿಯಾಗಿದ್ದವು ಎನ್ನಲಾಗಿದೆ. ಎರಡು ತಂಡದಲ್ಲಿ ಇಬ್ಬರ ಚಲನವಲನಗಳ ಸುತ್ತ ಗಮನ ವಹಿಸಲು ಸೂಚನೆ ನೀಡಲಾಗಿತ್ತು. ನಾಲ್ವರಲ್ಲಿ ಒಬ್ಬನನ್ನು ಕೊಲ್ಲಲು ಪಿಎಫ್ಐ ಹೇಳಿದ್ದು, ಹೀಗಾಗಿ, ಮೊದಲ ವ್ಯಕ್ತಿ ಸಿಗದೇ ಇದ್ದರೆ ಪ್ರವೀಣ್ ನೆಟ್ಟಾರು ಅವರನ್ನು ಎರಡನೇ ಟಾರ್ಗೆಟ್ ಎಂದು ಯೋಜನೆ ಹಾಕಲಾಗಿತ್ತು ಎಂಬ ಮಾಹಿತಿಯನ್ನು ಮಾಧ್ಯಮವೊಂದು ಪ್ರಕಟಿಸಿದೆ.

Leave A Reply

Your email address will not be published.