ಟಾಯ್ಲೆಟ್ ಎಷ್ಟೇ ತೊಳೆದರೂ ಕೊಳಕು ಹೋಗಲ್ವಾ? ಹಾಗಾದರೆ ನಿಮ್ಮ ಟಾಯ್ಲೆಟ್ ಕೂಡಾ ಮಿರ ಮಿರ ಮಿಂಚಲು ಈ ಸುಲಭ ಟಿಪ್ಸ್ ಫಾಲೋ ಮಾಡಿ!

ಯಾರಾದರೂ ಸಡನ್ ಆಗಿ ಮನೆಗೆ ಬಂದಾಗ ಟಾಯ್ಲೆಟ್ ಗೆ ಹೋಗಬೇಕೆಂದರೆ, ಒಮ್ಮೆ ನಮ್ಮ ಮನಸ್ಸು ಟಾಯ್ಲೆಟ್ ಕ್ಲೀನಾಗಿದೆಯಾ ಅಂತ ಚಡಪಡಿಸುವುದು ಖಂಡಿತ. ಹೀಗಾಗಿ ಈ ಮುಜುಗರ ತಪ್ಪಿಸಲು ಇಲ್ಲಿದೆ ಕೆಲವು ಸುಲಭ ಟಿಪ್ಸ್. ಇದನ್ನು ಫಾಲೋ ಮಾಡಿದರೆ ಯಾವುದೇ ಅಂಜಿಕೆ ನಿಮ್ಮ ಮನಸ್ಸಿನಿಂದ ದೂರ ಹೋಗುತ್ತದೆ.

ಳಕಾಗಿರುವ ಟಾಯ್ಲೆಟ್ ಗೆ ಈ ಟಿಪ್ಸ್ ಫಾಲೋ ಮಾಡಿ, ಟಾಯ್ಲೆಟ್ ಅನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ವಾಸನೆ, ಅಲ್ಲಲ್ಲಿ ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ದಿನ ಕ್ಲೀನ್ ಮಾಡಿದರೂ ಇದೇ ಸಮಸ್ಯೆ, ಸುಲಭದಲ್ಲಿ ನಿಮ್ಮ ಟಾಯ್ಲೆಟ್ ಕ್ಲೀನ್ ಮಾಡಲು ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.

ವಿನೇಗರ್ ಅಡುಗೆಯಿಂದ ಹಿಡಿದು, ಕ್ಲೀನಿಂಗ್ ವರೆಗೂ ಉಪಯೋಗಿಸುತ್ತೇವೆ. ಟಾಯ್ಲೆಟ್ ನಲ್ಲಿ ಉಪ್ಪು ನೀರಿನ ಸಮಸ್ಯೆಯಿಂದ ಅಲ್ಲಲ್ಲಿ ಕಲೆಗಳು ಮೂಡಿರುತ್ತದೆ. ಇದನ್ನು ಸುಲಭದಲ್ಲಿ ನಿವಾರಿಸಿಕೊಳ್ಳಲು ಟಾಯ್ಲೆಟ್ ಪೇಪರ್ ಅನ್ನು ವಿನೇಗರ್ ನಲ್ಲಿ ನೆನೆಸಿಡಿ. ನಂತರ ಈ ಪೇಪರ್ ಅನ್ನು ಕಲೆ ಇರುವ ಜಾಗದಲ್ಲಿ ರಾತ್ರಿಯಿಡೀ ಇಟ್ಟು ಬಿಡಿ. ಬೆಳಿಗ್ಗೆ ಕ್ಲೀನ್ ಮಾಡಿ. ಕಲೆ ನಿವಾರಣೆಯಾಗುತ್ತದೆ.

ಕೊಕೊ ಕೋಲಾವನ್ನು ನಿಮ್ಮ ಕಮೋಡ್ ನ ಬೌಲ್ ಗೆ ಹಾಕಿ ಒಂದು ಬ್ರೆಷ್ ನ ಸಹಾಯದಿಂದ ಸ್ವಲ್ಪ ತಿಕ್ಕಿ 1 ಗಂಟೆಗಳ ಕಾಲ ಹಾಗೇಯೇ ಬಿಡಿ. ನಂತರ ಮತ್ತೊಮ್ಮೆ ಬ್ರೆಷ್ ನಿಂದ ಚೆನ್ನಾಗಿ ತಿಕ್ಕಿ ಪ್ಲಷ್ ಮಾಡಿ. ಇದರಿಂದ ಅಲ್ಲಲ್ಲಿ ಕಲೆ ಕಟ್ಟಿಕೊಂಡಿರುವುದು ಹೋಗುತ್ತದೆ.

ಇನ್ನು ಕಮೋಡ್ ನ ಬೌಲ್ ನ ಸುತ್ತ ಒಂದು ರೀತಿ ಹಳದಿ ಬಣ್ಣದ ರಿಂಗ್ ರೀತಿ ಕಟ್ಟಿಕೊಳ್ಳುತ್ತದೆ. ಇದು ಎಷ್ಟೇ ಕ್ಲೀನ್ ಮಾಡಿದರೂ ಹೋಗಲ್ಲ. ಉಜ್ಜಿ ಉಜ್ಜಿ ಕೈ ನೋವಾಗುತ್ತೆ ವಿನಃ ಈ ಕಲೆ ಹೋಗೋದೇ ಇಲ್ಲ. ಇದಕ್ಕೊಂದು ಸುಲಭ ಪರಿಹಾರ ಇದೆ. ಈ ಕಲೆ ಹೋಗಲೆಂದೇ, ಮಾರುಕಟ್ಟೆಯಲ್ಲಿ ಒಂದು ವಸ್ತು ಲಭ್ಯವಿದೆ. ಅದುವೇ ಫ್ಯೂಮಿಕ್ ಸ್ಟೋನ್. ಪ್ಯುಮಿಕ್ ಸ್ಟೋನ್ ಇದಕ್ಕೆಲ್ಲ ಉತ್ತಮವಾದ ಪರಿಹಾರವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಪ್ಯುಮಿಕ್ ಸ್ಟೋನ್ ಅನ್ನು ಸ್ವಲ್ಪ ಬಿಸಿ ನೀರಿನಲ್ಲಿ ನೆನೆಸಿಕೊಂಡು ನಂತರ ಬೌಲ್ ಸುತ್ತ ಇರುವ ರಿಂಗ್ ಅನ್ನು ಈ ಸ್ಟೋನ್ ನ ಸಹಾಯದಿಂದ ನಿಧಾನಕ್ಕೆ ತಿಕ್ಕಿ ನಂತರ ಪ್ಲಷ್ ಮಾಡಿ.

Leave A Reply

Your email address will not be published.