ನಿಮಗಿದು ಗೊತ್ತೇ ? ಭಾರತೀಯರ ನೆಚ್ಚಿನ 5G ಮೊಬೈಲ್ ಫೋನ್ ಗಳು ಯಾವುದೆಂದು ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
ಇಂದಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೆ ವಿರಳ ಎಂದರೂ ತಪ್ಪಾಗಲಾರದು. ಅದರಲ್ಲಿಯೂ ಮೊಬೈಲ್ ಎಂಬ ಮಾಯಾವಿ ಹೆಚ್ಚಿನವರ ಪಾಲಿನ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಹೇಳಿ ಕೇಳಿ ಇದು ಡಿಜಿಟಲ್ ಯುಗ… ಮೊಬೈಲ್ ಎಂಬ ಸಾಧನದ ಅನ್ವೇಷಣೆಯ ಬಳಿಕ ಎಲ್ಲೆಡೆ ಬಳಕೆಯ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗಿ, ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುದರಿಂದ ಇಂಟರ್ನೆಟ್ ಬಳಕೆ ಕೂಡ ವೇಗವಾಗಿ ಏರಿಕೆ ಕಾಣುತ್ತಿದೆ.
ಭಾರತದಲ್ಲಿ 5G ಸೇವೆ ಒದಗಿಸುತ್ತಿರುವ ವ್ಯಾಪ್ತಿ ಹೆಚ್ಚಾದಂತೆ ಮೊಬೈಲ್ ಕಂಪೆನಿಗಳು ಕೂಡ 5G ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡಿವೆ ಎಂಬ ಸುದ್ದಿ ಇತ್ತೀಚಿಗಷ್ಟೇ ಕೇಳಿಬರುತ್ತಿತ್ತು. ಇದೀಗ ಬಂದಿರುವ ಹೊಸ ಮಾಹಿತಿ ಅನುಸಾರ, 5G ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಪಾಲು 2022 ರಲ್ಲಿ ಶೇಕಡಾ 45 ಆಗಿತ್ತು. ಆದ್ರೆ 2023ರ ಅಂತ್ಯದ ವೇಳೆಗೆ 5G ಸ್ಮಾರ್ಟ್‌ಫೋನ್ ಮಾರಾಟವು ಶೇಕಡಾ 70 ಕ್ಕೆ ಏರಿಕೆ ಕಂಡು ಬರುವ ಸಾಧ್ಯತೆಗಳಿವೆ ಎಂದು ಸೈಬರ್ ಮೀಡಿಯಾ ರಿಸರ್ಚ್ (CMR) ವರದಿ ಮಾಹಿತಿ ನೀಡಿದೆ. ಇದರ ಜೊತೆಗೆ ಭಾರತೀಯರು ಹೆಚ್ಚು ಇಷ್ಟಪಡುತ್ತಿರುವ 5G ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಯಾವುವು ಎಂಬ ಬಗ್ಗೆ ಕೂಡ ಮಾಹಿತಿಯನ್ನು ಕೂಡ ಬಹಿರಂಗ ಪಡಿಸಿದೆ. ಭಾರತೀಯರ ನೆಚ್ಚಿನ 5G ಫೋನ್ ಬ್ರ್ಯಾಂಡ್‌ಗಳು ಯಾವುದೆಲ್ಲ ಅನ್ನೋ ಬಗ್ಗೆ ನೀವು ಖಂಡಿತ ಯೋಚಿಸುರುತ್ತಿರಾ !!! ಆದ್ರೆ ನಿಮಗೆ ಉತ್ತರ ಸಿಕ್ಕಿಲ್ಲ ಅಂತ ಆದ್ರೆ ಈ ಮಾಹಿತಿ ನೀವು ಓದಲೇಬೇಕು.
ದೇಶಾದ್ಯಂತ 5G ನೆಟ್‌ವರ್ಕ್‌ಗಳ ಲಭ್ಯತೆ ಮತ್ತು ಪ್ರವೇಶವನ್ನು ಅವಲಂಬಿತವಾಗಿರುತ್ತದೆ. ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ನ ವ್ಯಾಪ್ತಿಯು ಶರವೇಗದಲ್ಲಿ ಸಾಗುತ್ತಿದ್ದು, ಭಾರತದಲ್ಲಿ 5G ನೆಟ್‌ವರ್ಕ್ ತರಲು Jio ಮತ್ತು Airtel ಕಂಪನಿಗಳು ಜಿದ್ದಾ ಜಿದ್ದಿನ ಪೈಪೋಟಿ ನೀಡುತ್ತಿವೆ. ದೇಶದಲ್ಲಿ ಈಗಾಗಲೇ 120 ಕ್ಕೂ ಹೆಚ್ಚು ನಗರಗಳಲ್ಲಿ 5G ಸೇವೆಗಳನ್ನು ಆರಂಭವಾಗಿದ್ದು, ಅದರಲ್ಲೂ ಆರಂಭಿಕವಾಗಿ ಏರ್‌ಟೆಲ್ ಮತ್ತು ಜಿಯೋ ಎರಡೂ ಕಂಪೆನಿಗಳು ತಮ್ಮ ಬಳಕೆದಾರರಿಗೆ 5G ಸೇವೆಯನ್ನು ಉಚಿತವಾಗಿ ನೀಡುತ್ತಿರುವ ಹಿನ್ನೆಲೆ 5G ಸ್ಮಾರ್ಟ್‌ಫೋನ್‌ಗಳ ಮಾರಾಟ ವೇಗ ಮತ್ತಷ್ಟು ಹೆಚ್ಚುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.ಸೈಬರ್ ಮೀಡಿಯಾ ರಿಸರ್ಚ್ (CMR) ವರದಿಯು, 5G ಸ್ಮಾರ್ಟ್‌ಫೋನ್‌ಗಳಲ್ಲಿನ ರವಾನೆಯಾಗುವ ಬೆಳವಣಿಗೆಯು ಮೌಲ್ಯದ ವಿಭಾಗದಲ್ಲಿ ಅವುಗಳ ಲಭ್ಯತೆಯನ್ನು ಅವಲಂಬಿತವಾಗಿರುತ್ತದೆ.
2022 ನೇ ವರ್ಷದಲ್ಲಿ 100 ಕ್ಕೂ ಹೆಚ್ಚು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 2022 ರಲ್ಲಿ 5G ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಪಾಲು ಶೇಕಡಾ 45 ಆಗಿದ್ದು, 2023 ರ ಅಂತ್ಯದ ವೇಳೆಗೆ 70% ಪ್ರತಿಶತ 5G ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಲಾಗುತ್ತದೆ. ಸೈಬರ್ ಮೀಡಿಯಾ ರಿಸರ್ಚ್ (CMR) ವರದಿಯ ಅನುಸಾರ , ಭಾರತದ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Samsung, Vivo, Oppo, Xiaomi, Realme ಮತ್ತು Motorola ಬ್ರ್ಯಾಂಡ್‌ಗಳು ಹೆಚ್ಚು 5G ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಇವುಗಳಲ್ಲಿ Samsung, Vivo ಮತ್ತು Oppo ಕಂಪೆನಿಗಳು ದುಬಾರಿ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿದೆ.
10 ಸಾವಿರದಿಂದ 20 ಸಾವಿರ ರೂ. ಬೆಲೆಯ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Xiaomi, Realme ಮತ್ತು Motorola ಕಂಪನಿಗಳ 5G ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಜನರ ನೆಚ್ಚಿನ ಮೊಬೈಲ್ ಆಗಿ ಟ್ರೆಂಡ್ ಸೃಷ್ಟಿ ಮಾಡಿವೆ. ಬಜೆಟ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈ ಕಂಪನಿಗಳು ಒಟ್ಟು ಪಾಲು ಸುಮಾರು 80% ಪ್ರತಿಶತ ಇದ್ದು, ಅತ್ಯುತ್ತಮ ಡೀಲ್‌ಗಳೊಂದಿಗೆ ಅಪ್‌ಗ್ರೇಡ್ ಮಾಡಲು ಅವಕಾಶ ಕಲ್ಪಿಸಿದೆ.
ಭಾರತೀಯ ಟೆಲಿಕಾಂ ಕಂಪೆನಿಗಳ ಆಕ್ರಮಣಕಾರಿ 5G ನೆಟ್‌ವರ್ಕ್ ನಿಯೋಜನೆಯ ಹಿನ್ನೆಲೆ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬದಲಾವಣೆ ಮಾಡಲು ಇಲ್ಲವೇ ಅಪ್‌ಗ್ರೇಡ್ ಮಾಡಲು ಬಯಸಿದಲ್ಲಿ 5G ಸ್ಮಾರ್ಟ್‌ಫೋನ್‌ಗಳತ್ತ ಗಮನ ಹರಿಸುವುದು ಗ್ಯಾರಂಟಿ ಹೊಸ ವರ್ಷದಲ್ಲಿ 5G ಸ್ಮಾರ್ಟ್‌ಫೋನ್ ಸಾಗಣೆಗೆ ಮತ್ತಷ್ಟು ಆವೇಗವನ್ನು ನಾವು ನಿರೀಕ್ಷಿಸುತ್ತೇವೆ.” ಎಂದು ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ (IIG), ಸೈಬರ್ ಮೀಡಿಯಾ ರಿಸರ್ಚ್ (CMR) ವಿಶ್ಲೇಷಕರಾದ ಅವರು ಶಿಪ್ರಾ ಸಿನ್ಹಾ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.