ಸ್ಯಾಂಡಲ್‌ವುಡ್ ನಟ ನವೀನ್ ಕೃಷ್ಣ ಅಕ್ಕ ನೀತಾ ಪವರ್ ನಾಪತ್ತೆ; ಸಾಮಾಜಿಕ ಜಾಲತಾಣದಲ್ಲಿ ಮನವಿ

Share the Article

ಸ್ಯಾಂಡಲ್ ವುಡ್ ನಟ, ನಿರ್ದೇಶಕ ನವೀನ್ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಮನವಿಯೊಂದನ್ನು ಮಾಡಿದ್ದಾರೆ. ಅದೇನೆಂದರೆ ಅವರ ಅಕ್ಕ ನೀತಾ ಪವರ್ ನಾವತ್ತೆಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನೀತಾ ಕಾಣಿಸುತ್ತಿಲ್ಲ ಎಂದು ನಟ ನವೀನ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ಸಹೋದರಿಯ ಫೋಟೋ ಮತ್ತು ಹೆಚ್ಚಿನ ಮಾಹಿತಿಯನ್ನು ನವೀನ್ ಕೃಷ್ಣ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ. ಫೋಟೋ ಜೊತೆಗೆ ‘ಕಂಡರೆ ಕೂಡಲೇ ತಿಳಿಸಿ ನಮ್ಮ ಅಕ್ಕ’ ಎಂದು ಹೇಳಿದ್ದಾರೆ.

ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17 ರಂದು ಮಧ್ಯಾಹ್ನ 2:57ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ದಯವಿಟ್ಟು ಕಂಡರೆ ತಿಳಿಸಿ ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಒಂದಿಷ್ಟು ಫೋನ್ ನಂಬರ್‌ಗಳನ್ನು ನೀಡಿದ್ದಾರೆ.

Leave A Reply