KVSನಲ್ಲಿ ಟೀಚರ್ ಉದ್ಯೋಗ | ನೇರ ಸಂದರ್ಶನಕ್ಕೆ ಆಹ್ವನ, ಹೆಚ್ಚಿನ ವಿವರ ಇಲ್ಲಿದೆ

ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಎಂಇಜಿ ಮತ್ತು ಸೆಂಟರ್‌ಗೆ ಗುತ್ತಿಗೆ ಆಧಾರದ ಮೇಲೆ ಶಿಕ್ಷಕರ ಆಯ್ಕೆ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ.

ಪಿಜಿಟಿ ಶಿಕ್ಷಕ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ ಜತೆಗೆ ಬಿ,ಇಡಿ, ಎಂ.ಇಡಿ ಶಿಕ್ಷಣ ಪಡೆದಿರಬೇಕು. ಟಿಜಿಟಿ ಶಿಕ್ಷಕ ಹುದ್ದೆಗಳಿಗೆ ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದಿರಬೇಕು. ಕಾರ್ಯಾನುಭವಿ ಶಿಕ್ಷಕರು ಸಹ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ.ಇಡಿ, ಎಂ.ಇಡಿ ಪಾಸ್ ಪ್ರಮಾಣ ಪತ್ರಗಳನ್ನು ಸಂದರ್ಶನ ವೇಳೆ ಹಾಜರುಪಡಿಸಬೇಕು.ನ

ನೇರ ಸಂದರ್ಶನದ ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ MEG ಮತ್ತು ಸೆಂಟರ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು ಮತ್ತು ಪ್ರಮಾಣ ಪತ್ರಗಳ ಮೂಲ ಮತ್ತು ಫೋಟೋಕಾಪಿಗಳು ಮತ್ತು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರದೊಂದಿಗೆ ಹಾಜರಾಗಬೇಕು. ಎಲ್ಲಾ ಹುದ್ದೆಗಳ ನೋಂದಣಿಯನ್ನು ಅದೇ ದಿನ ಬೆಳಿಗ್ಗೆ 08-00 ರಿಂದ 10-00 ರವರೆಗೆ ನಡೆಸಲಾಗುತ್ತದೆ.

18 ರಿಂದ 65 ವರ್ಷದೊಳಗಿನ ಅಭ್ಯರ್ಥಿಗಳು ಈ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳ ಸೇವೆಗಳನ್ನು ಅವರು ನೀಡಿದ ಆದ್ಯತೆಗೆ ಅನುಗುಣವಾಗಿ ಮತ್ತು ಅಗತ್ಯವಿರುವಾಗ ಕೇಂದ್ರೀಯ ವಿದ್ಯಾಲಯದ ಶಾಲೆಗಳಿಗೆ ವೃತ್ತಿಗೆ ತೆಗೆದುಕೊಳ್ಳಲಾಗುತ್ತದೆ.

ಸಂದರ್ಶನ ಸ್ಥಳ : ಕೆ ವಿ ಎಂಈಜಿ ಮತ್ತು ಕೇಂದ್ರ ಬೆಂಗಳೂರು-560042.

ವಿದ್ಯಾರ್ಹತೆ ಮತ್ತು ಇತರೆ ವಿವರಗಳಿಗಾಗಿ ಕೆವಿಎಸ್‌ ಶಿಕ್ಷಕರ ಹುದ್ದೆಯಲ್ಲಿ ಆಸಕ್ತಿಯುಳ್ಳವರು ವೆಬ್‌ಸೈಟ್‌ www.megcentre.kvs.ac.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

Leave A Reply

Your email address will not be published.