Kantara : ದೊಡ್ಡ ಮಟ್ಟದಲ್ಲಿ ಯಶಸ್ಸು ಕೊಟ್ಟ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ‘ಕಾಂತಾರ’ ಸಿನಿಮಾ ತಂಡ

Share the Article

ಕಾಂತಾರ ಮೈಯೆಲ್ಲಾ‌ ರೋಮಾಂಚನ ಉಂಟು ಮಾಡಿದ ಸಿನಿಮಾ. ಕರಾವಳಿಯ ತುಳು ನಾಡ ಜನರ ದೈವದ ಕುರಿತಾದ ಈ ಸಿನಿಮಾ ವಿಶ್ವದೆಲ್ಲೆಡೆ ಭರ್ಜರಿ ಸದ್ದು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಈ ಸಿನಿಮಾ ಆಸ್ಕರ್ ಅವಾರ್ಡ್ ಗೆ ಕೂಡಾ ಹೋಗಿದೆ. ಈ ಸಿನಿಮಾದ ಅದ್ಭುತ ಯಶಸ್ಸಿನ ನಂತರ ಚಿತ್ರತಂಡವು ದೈವಕ್ಕೆ ಕೋಲ ನೀಡಿ ತಮ್ಮ‌ ಹರಕೆ ತೀರಿಸಿದೆ.

ಇತ್ತೀಚೆಗೆ ಕಾಂತಾರ ಸಿನಿಮಾ ತಂಡ ಮಂಗಳೂರು ಭಾಗದಲ್ಲಿ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿತ್ತು. ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ, ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರತಂಡವು ಈ ಕೋಲದಲ್ಲಿ ಭಾಗವಹಿಸಿತ್ತು.

ಹೊಂಬಾಳೆ ಫಿಲಂಸ್ ಈ ಕೋಲದ ವೀಡಿಯೋವನ್ನು ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದೆ. ವರಾಹ ರೂಪಂ ಹಾಡು ಬಳಸಿ ಕೋಲದ ವಿಡಿಯೋ ಎಡಿಟ್ ಮಾಡಲಾಗಿದೆ.

“ನೀವು ಪ್ರಕೃತಿಗೆ ಶರಣಾಗಿ ಮತ್ತು ಜೀವನದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯವನ್ನು ನಿಮಗೆ ನೀಡಿದ ದೇವರನ್ನು ಆರಾಧಿಸಿ. ‘ಕಾಂತಾರ’ ತಂಡವು ದೈವವನ್ನು ನೈಜ ರೂಪದಲ್ಲಿ ವೀಕ್ಷಿಸಿತು, ದೈವದ ಆಶೀರ್ವಾದವನ್ನು ಪಡೆಯಿತು” ಎಂದು ಹೊಂಬಾಳೆ ಫಿಲ್ಮ್ಸ್ಂ ಬರೆದುಕೊಂಡಿದೆ.

Leave A Reply