Kisan Credit Card: ಬಜೆಟ್‌ಗೂ ಮೊದಲೇ ರೈತರಿಗೆ ದೊರಕಿದೊಂದು ಸಿಹಿ ಸುದ್ದಿ
ರೈತರು ಈ ಬಾರಿಯ ಬಜೆಟ್‌ನಲ್ಲಿ ಭಾರೀ ಉಡುಗೊರೆಯ ನಿರೀಕ್ಷೆಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಹಾಗಾಗಿ ಕೇಂದ್ರ ಸರಕಾರ ಈಗ ಶುಭ ಸುದ್ದಿಯನ್ನು ನೀಡಿದೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಸರಕಾರದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸುವಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸರ್ಕಾರ ಸೂಚನೆ ನೀಡಿದೆ. ಇದು ಬಜೆಟ್‌ಗೂ ಮುನ್ನ ಸರಕಾರ ನೀಡಿದ ಗುಡ್‌ನ್ಯೂಸ್ ಆಗಿದೆ.
ಬ್ಯಾಂಕಿಂಗ್ ಕಾರ್ಯದರ್ಶಿ ವಿವೇಕ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬ್ಯಾಂಕಿಂಗ್ ವಲಯದ ಒಂದು ದಿನದ ಪರಿಶೀಲನಾ ಸಭೆಯಲ್ಲಿ, ಕೃಷಿ ಮೂಲಸೌಕರ್ಯಗಳ ಪ್ರಗತಿ ಸಭೆಯಲ್ಲಿ ನಿಧಿ (ಎಐಎಫ್) ಯೋಜನೆಯನ್ನು ಸಹ ಪರಿಶೀಲಿಸಲಾಯಿತು. ಈ ವೇಳೆ ದೇಶದ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಳ ಸಂಪೂರ್ಣ ಮಾಹಿತಿಯನ್ನು ಕಾಲಮಿತಿಯಲ್ಲಿ ಡಿಜಿಟಲೀಕರಣಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಲಹೆ ನೀಡಲಾಯಿತು. ಜೊತೆಗೆ ಪಿಎಂ ಕಿಸಾನ್ ಡೇಟಾಬೇಸ್‌ನ ಸಹಾಯದಿಂದ ದೇಶದ ಪ್ರತಿ ರೈತರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಒದಗಿಸುವಂತೆಯೂ ನಿರ್ದೇಶಿಸಲಾಯಿತು.
ಈ ಸಭೆಯಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY), ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY), ಅಟಲ್ ಪಿಂಚಣಿ ಯೋಜನೆ (APY), ಪ್ರಧಾನ ಮಂತ್ರಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಗತಿ ಮುದ್ರಾ ಮತ್ತು ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PMSVANidhi), ಮತ್ತು ಕೃಷಿ ಸಾಲ ಇತ್ಯಾದಿಗಳ ಬಗ್ಗೆ ಕೂಡಾ ಚರ್ಚೆ ಜೊತೆಗೆ ಪರಿಶೀಲನೆ ಕೂಡಾ ಮಾಡಲಾಗಿದೆ.