Voter ID Card: ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದೆ. ಕರ್ನಾಟಕದಲ್ಲಿ ಸರಿ ಸುಮಾರು ಐದೂವರೆ ಕೋಟಿ ಮತದಾರರು ಇದ್ದಾರೆ. ಹಾಗೇ ಈ ಬಾರಿ 7 ಲಕ್ಷಕ್ಕೂ ಅಧಿಕ ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ. ಇವರೆಲ್ಲರೂ ಫಸ್ಟ್‌ ಟೈಂ ವೋಟರ್ಸ್. ಇವರೆಲ್ಲಾ ಮತದಾನ ಮಾಡ್ಬೇಕು ಅಂದ್ರೆ ಅದಕ್ಕಾಗಿ ಅವರು ಗುರುತಿನ ಚೀಟಿ (Identity Card) ಹೊಂದಿರಬೇಕು. ಅಲ್ಲದೆ, ಮತ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಬೇಕು. ಅಂದ್ರೆ ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸೋದು ಹೇಗೆ?
ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದಾ? ಅಥವಾ ಆಫ್ ಲೈನ್‌? ಈ ಎಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ವೋಟರ್ ಐಡಿ ಕಾರ್ಡ್‌ಗೆ ಅರ್ಜಿ ಸಲ್ಲಿಸೋದು ತುಂಬಾ ಸುಲಭ.
ಇದಕ್ಕೆ ನೀವು ಆನ್‌ಲೈನ್‌ನಲ್ಲೂ ರಿಜಿಸ್ಟ್ರೇಶನ್ ಮಾಡಬಹುದು. ಅಥವಾ ನೇರವಾಗಿ ಕಚೇರಿಗೆ ಹೋಗಿ ಕೂಡ ಅರ್ಜಿ ಸಲ್ಲಿಸಬಹುದು. ಎರಡೂ ವಿಧಾನದಲ್ಲೂ ನೀವು ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ.

ವೋಟರ್ ಐಡಿ ಕಾರ್ಡ್‌ ಪಡೆಯಲು ಇರಬೇಕಾದ ಅರ್ಹತೆ, ವಯೋಮಿತಿ ಮತ್ತು ನೀಡಬೇಕಾದ ದಾಖಲೆಗಳು –

  • ಮತದಾರರ ಗುರುತಿನ ಚೀಟಿ ಪಡೆಯಲು ನಿಮಗೆ 18 ವರ್ಷ ತುಂಬಿರಬೇಕು.
  • ನೀವು ಭಾರತದ ಪ್ರಜೆ ಆಗಿರಬೇಕು.
  • ಅಲ್ಲದೆ, ನೀವು ಕರ್ನಾಟಕದಲ್ಲಿ ಮತ ಚಲಾಯಿಸುವ ಕಾರಣ, ನೀವು ಕರ್ನಾಟಕದ ನಿವಾಸಿ ಅನ್ನೋದಕ್ಕೆ ಒಂದು ಖಾಯಂ ಅಡ್ರೆಸ್‌ ಪ್ರೂಫ್ ಬೇಕು.
  • ಜೊತೆಗೆ ನೀವು ಯಾವ ಕ್ಷೇತ್ರದಲ್ಲಿ ಮತ ಹಾಕುತ್ತೀರೋ ಆ ಕ್ಷೇತ್ರದಲ್ಲಿ ನೀವು ವಾಸವಾಗಿದ್ದೀರಿ ಅನ್ನುವುದಕ್ಕೆ ಅಡ್ರೆಸ್ ಪ್ರೂಫ್ ಕೊಡಬೇಕು. ನಿಮ್ಮ ಹೆಸರು ಇರುವ ರೇಷನ್ ಕಾರ್ಡ್, ಪಾಸ್‌ಪೋರ್ಟ್‌, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್ ಅಥವಾ ವಿದ್ಯುತ್ ಬಿಲ್ ಇವುಗಳನ್ನು ಕೊಡಬಹುದು. ಆದ್ರೆ ಬಿಲ್‌ಗಳು ನಿಮ್ಮ ಹೆಸರಲ್ಲಿ ಇರಬೇಕು.
  • ನಿಮಗೆ 18 ವರ್ಷ ದಾಟಿದೆ ಅನ್ನೋದಕ್ಕೆ ಪ್ರೂಫ್ ಕೊಡಬೇಕಾಗುತ್ತದೆ. ಇದಕ್ಕೆ ನಿಮ್ಮ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್‌, ಜನನ ಪ್ರಮಾಣ ಪತ್ರ, ಪಾಸ್‌ ಪೋರ್ಟ್, ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಕೊಡಬಹುದು.
  • ಅರ್ಜಿಯ ಜೊತೆಗೆ ನಿಮ್ಮ ಇತ್ತೀಚಿನ ಒಂದು ಪಾಸ್‌ಪೋರ್ಟ್‌ ಸೈಜ್ ಫೋಟೋ ನೀಡಬೇಕು.

ಇನ್ನೂ, ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ?

ನಿಮ್ಮ ಊರಲ್ಲಿನ ಕರ್ನಾಟಕ ರಾಜ್ಯ ಚುನಾವಣಾ ಕಚೇರಿಗೆ ಹೋಗಿ, ಅಲ್ಲಿ ನಿಮಗೆ ಫಾರ್ಮ್‌ 6 ಕೊಡುತ್ತಾರೆ. ಅದರಲ್ಲಿ ಎಲ್ಲಾ ವಿವರ ಭರ್ತಿ ಮಾಡಬೇಕು. ಹಾಗೂ ನಿಮ್ಮ ಫೋಟೋ ಅಂಟಿಸಬೇಕು. ನಂತರ ಚುನಾವಣಾ ಆಯೋಗದ ಕಚೇರಿಗೆ ಮತ್ತೆ ಹೋಗಿ, ಏಜ್ ಪ್ರೂಫ್, ಅಡ್ರೆಸ್ ಪ್ರೂಫ್ ನೊಂದಿಗೆ ಅರ್ಜಿ ಸಲ್ಲಿಸಿ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು WWW.NVSP.IN ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೀವು ರಿಜಿಸ್ಟ್ರೇಷನ್ ಆಫ್ ನ್ಯೂ ವೋಟರ್ ಎಂಬ ವಿಭಾಗವನ್ನು ಆಯ್ಕೆ ಮಾಡಬೇಕು. ನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಆಗಬೇಕು. ಆಗ ನಿಮಗೆ ಯೂಸರ್ ಐಡಿ ಹಾಗೂ ಪಾಸ್‌ವರ್ಡ್‌ ಸಿಗುತ್ತದೆ. ಆನಂತರ ನೀವು ಮತ್ತೆ ಲಾಗ್ ಇನ್ ಆಗಬೇಕು. ನಂತರ ಈ ವೆಬ್‌ಸೈಟ್‌ನಲ್ಲಿ ಫಾರಂ 6 ಅನ್ನೋ ಆಪ್ಶನ್ ಇರುತ್ತದೆ. ಆ ಫಾರಂ ಡೌನ್ ಲೋಡ್ ಮಾಡಬೇಕು. ನೀವೇನಾದರು ಭಾರತದ ಹೊರಗೆ ಇರುವ ಎನ್‌ಆರ್‌ಐ ವೋಟರ್ ಆಗಿದ್ದರೆ, ಫಾರಂ 6A ಎಂಬ ಅರ್ಜಿಯನ್ನು ಡೌನ್ ಲೋಡ್ ಮಾಡಬೇಕು.

ನಂತರ ಅರ್ಜಿಯಲ್ಲಿ ನಿಮ್ಮ ಹೆಸರು, ವಯಸ್ಸು, ಅಡ್ರೆಸ್ ಇವೆಲ್ಲವನ್ನು ಭರ್ತಿ ಮಾಡಬೇಕು. ಹಾಗೇ ನೀವು ನಿಮ್ಮ ಬಳಿ ಇರುವ ಅಡ್ರೆಸ್ ಪ್ರೂಫ್ ಹಾಗೂ ಏಜ್ ಪ್ರೂಫ್‌ನಲ್ಲಿ ಇರುವ ವಿವರಗಳನ್ನು ಸರಿಯಾಗಿ ಈ ಅರ್ಜಿಯಲ್ಲೂ ಬರೆಯಬೇಕು. ಅರ್ಜಿ ಭರ್ತಿಯಾದ ನಂತರ ಅದನ್ನು ಫೋಟೋ ತೆಗೆದು, ನಿಮ್ಮ ಏಜ್ ಪ್ರೂಫ್, ಅಡ್ರೆಸ್ ಪ್ರೂಫ್ ಹಾಗೂ ಪಾಸ್‌ಪೋರ್ಟ್‌ ಸೈಜಿನ ಫೋಟೋ ಎಲ್ಲವನ್ನೂ ಅಪ್‌ಲೋಡ್ ಮಾಡಬೇಕು.

ಎಲ್ಲಾ ವಿವರಗಳು ಪರಿಶೀಲನೆ ಆದ ಬಳಿಕ ನಿಮ್ಮ ಮನೆ ಅಡ್ರೆಸ್‌ಗೆ ವೋಟರ್ ಐಡಿ ಕಾರ್ಡ್‌ ಬರುತ್ತದೆ. ಇವೆರಡೂ ಅಲ್ಲದೆ, ನೀವು ಸುಲಭವಾಗಿ ಆಪ್ ಮೂಲಕವೂ ವೋಟರ್ ಐಡಿಗೆ ಅರ್ಜಿ ಸಲ್ಲಿಸಬಹುದು. ಹೇಗೆಂದರೆ, ನೀವು Voter Helpline App ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವಾಗ ಗಮನದಲ್ಲಿರಬೇಕಾದ ಅಂಶಗಳು :

  • ವೋಟರ್ ಐಡಿ ಕಾರ್ಡ್‌ಗೆ ಒಂದು ಫಾರಂನಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು.
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಏನಾದರೂ ಸಮಸ್ಯೆ ಆದ್ರೆ ನೇರವಾಗಿ ಚುನಾವಣಾ ಕಚೇರಿಗೆ ಹೋಗಿ ಅಲ್ಲಿ ಅರ್ಜಿ ಹಾಕುವುದು ಒಳಿತು.
  • ನಿಮ್ಮ ವಿಳಾಸ ಬದಲಾವಣೆ ಮಾಡಬೇಕು ಅಥವಾ ಮಾಹಿತಿ ಸೇರಿಸಬೇಕು ಅಥವಾ ನಿಮ್ಮ ಹೆಸರನ್ನು ವೋಟರ್ ಲಿಸ್ಟ್‌ನಿಂದ ತೆಗೆಯಬೇಕು ಅಂತ ಇದ್ದರೆ, ಅದಕ್ಕೆ ಬೇಕಾದ ಎಲ್ಲಾ ಮಾಹಿತಿಗಳೂ WWW.NVSP.IN ನಲ್ಲಿ ಸಿಗುತ್ತದೆ.
Leave A Reply

Your email address will not be published.