ಕಿರಿಕ್‌ ಬೆಡಗಿಯಿಂದ ಕಿಚ್ಚ ಸುದೀಪ್‌ ಮಾತಿಗೆ ಉತ್ತರ | ಏನಂದ್ರು ಗೊತ್ತಾ ಈ ನ್ಯಾಷನಲ್‌ ಕ್ರಶ್‌?

ರಶ್ಮಿಕಾ ಮಂದಣ್ಣ ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಲ್ಲಿದ್ದಾರೆ. ಒಂದು ಸಮಯದಲ್ಲಿ ತಾನು ಏರಿ ಬಂದ ಏಣಿಯನ್ನು ಒದ್ದು ಮಾತನಾಡುತ್ತಿದ್ದ ಈಕೆ ಈಗ ಅದೇ ಇಂಡಸ್ಟ್ರಿಯ ಬಗ್ಗೆ ಗುಣಗಾನ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯ ಜೊತೆಗೆ ಒಂದು ಪ್ರಶ್ನೆಯಾಗಿ ಕಾಣುತ್ತಿದೆ. ತನಗೆ ಬ್ರೇಕ್‌ ಕೊಟ್ಟ ಕನ್ನಡ ಫಿಲ್ಮ್‌ ಇಂಡಸ್ಟ್ರಿಯ ಬಗ್ಗೆ ಎಲ್ಲೂ ಬಾಯಿ ಬಿಡದೆ ಸನ್ನೆ ಮೂಲಕ ಮಾತನಾಡುವ ಈ ಕಿರಿಕ್‌ ಬೆಡಗಿ ಇತ್ತೀಚಿನ ದಿನಗಳಲ್ಲಿ ತಾನು ಮಾಡುತ್ತಿರುವ ಸಿನಿಮಾಗಳ ಜೊತೆ ಜೊತೆಗೆ ಮೀಡಿಯಾ ಮೂಲಕ ನೀಡುವ ಸ್ಟೇಟ್‌ಮೆಂಟ್‌ ನಿಂದ ಬಹಳ ಸುದ್ದಿಯಾಗುತ್ತಿರುವುದು ಸತ್ಯ.

 

ರಶ್ಮಿಕಾ ಅವರ ಟ್ರೋಲಿಂಗ್‌ ಮ್ಯಾಟರ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಈ ಟ್ರೆಂಡ್‌ ಆಗುತ್ತಿರುವ ಕುರಿತು ಕಿಚ್ಚ ಸುದೀಪ್‌ ಒಂದು ಮಾತನ್ನು ಹೇಳಿದ್ದರು, “ಸೆಲೆಬ್ರೆಟಿ ಅಂದಮೇಲೆ ಹಾರ, ಮೊಟ್ಟೆ, ಟೋಮೆಟೋ ಎಲ್ಲಾ ಬೀಳುತ್ತದೆ. ಎಲ್ಲದಕ್ಕೂ ಸಿದ್ದರಿರಬೇಕು. ಮೊಟ್ಟೆ, ಟೋಮೆಟೋ ಬೇಡ ಅಂದ್ರೆ ಸರಿಯಾಗಿ ಮಾತನಾಡಲು ಕಲಿಬೇಕು” ಎಂದಿದ್ದರು. ಈ ಬಗ್ಗೆ ಇದೀಗ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.

ತೆಲುಗು ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್, ವಿಜಯ್ ದೇವರಕೊಂಡ ಜೊತೆಗಿನ ಡೇಟಿಂಗ್ ರೂಮರ್ಸ್, ಸೌತ್ ಸಾಂಗ್ಸ್ ಹಾಗೂ ಬಾಲಿವುಡ್ ಸಾಂಗ್ಸ್ ಬಗ್ಗೆ ತಾವು ಹೇಳಲು ಹೊರಟಿದ್ದು ಏನು? ಕೊನೆಗೆ ಆಗಿದ್ದೇನು? ಎನ್ನುವುದರ ಬಗ್ಗೆಯೂ ಮಾತನಾಡಿದ್ದಾರೆ. ಪದೇ ಪದೇ ಟ್ರೋಲ್ ಆಗುತ್ತಿರುವುದರಿಂದ ನೋವಾಗುತ್ತದೆ. ನಮಗೆ ನೋವಾದರೂ ಪರವಾಗಿಲ್ಲ. ಇದರಿಂದ ನಮ್ಮ ಕುಟುಂಬ ಸದಸ್ಯರಿಗೆ ತೊಂದರೆ ಆಗಬಾರದು ಎಂದಿದ್ದಾರೆ.’

“ಇತ್ತೀಚೆಗೆ ನನ್ನ ನೆಚ್ಚಿನ ನಟನ ಸಂದರ್ಶನ ನೋಡಿದೆ. ನಿಮಗೆ ಹಾರ ಬೀಳುತ್ತದೆ ಎಂದಮೇಲೆ, ಮೊಟ್ಟೆ, ಟಮೋಟೋ, ಕಲ್ಲು ಕೂಡ ಬೀಳಬಹುದು. ನೀವು ಎಲ್ಲರಿಗೂ ಸಿದ್ಧರಿರಬೇಕು ಎಂದರು. ನಾನು ಸಂಪೂರ್ಣವಾಗಿ ಅದನ್ನು ಒಪ್ಪುತ್ತೇನೆ. ಯಾಕಂದ್ರೆ ನಾನು ಪಬ್ಲಿಕ್ ಫಿಗರ್, ಆದರೆ ಆ ಕಲ್ಲು ನನಗೆ ಪೆಟ್ಟು ಮಾಡುತ್ತಿದೆ, ಅದರಿಂದ ನೋವಾಗಿ ರಕ್ತ ಸುರಿಯುತ್ತದೆ ಅಂದ್ರೆ, ಅದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ರಶ್ಮಿಕಾ ಹೇಳಿದ್ದಾರೆ.

ಬಾಲಿವುಡ್‌ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬಾಲಿವುಡ್‌ ರೊಮ್ಯಾಂಟಿಕ್‌ ಸಾಂಗ್ಸ್‌ ಬಗ್ಗೆ ಮಾತನಾಡಿದ್ದು, ಜೊತೆಗೆ ಸೌತ್‌ನಲ್ಲಿ ಬರೀ ಮಾಸ್‌ ಸಾಂಗ್ಸ್‌ ಇದೆ ಎಂದಿದ್ದು ಕೂಡಾ ಸಖತ್‌ ಟ್ರೋಲ್‌ ಆಗಿತ್ತು. ಇದಕ್ಕೂ ನಟಿ ಪ್ರತಿಕ್ರಿಯೆ ನೀಡಿದ್ದು, ನಾನು ಏನೋ ಹೇಳಲು ಹೊರಟಿದ್ದೆ. ಆದರೆ ಬೇರೆನೇ ಆಯಿತು. ಅಸಲಿಗೆ ನಾನು ಹೇಳಲು ಹೊರಟಿದ್ದು, ನನಗೂ ಬಹಳ ರೊಮ್ಯಾಂಟಿಕ್ ಸಾಂಗ್ಸ್ ಸಿಕ್ಕಿದೆ. ಆದರೂ ಬಾಲಿವುಡ್‌ನ 70, 80 ದಶಕದ ಹಾಡುಗಳು ಮನೆಯಲ್ಲಿ ಕೇಳುತ್ತಿದ್ದೆವು, ಎಂದು ಹೇಳಲು ಮುಂದಾಗಿದ್ದೆ. ಅಷ್ಟರಲ್ಲಿ ಇಷ್ಟೆಲ್ಲಾ ಆಯಿತು. ಅದು ಮತ್ತೇನೋ ಸ್ವರೂಪ ಪಡೆದುಕೊಂಡು ಇನ್ನೇನೋ ಆಯಿತು.” ಎಂದಿದ್ದಾರೆ.

ಅದೇನೋ ಹೇಳ್ತಾರಲ್ಲ, ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ, ತನ್ನ ಬುಡಕ್ಕೆ ಬಂದಾಗ ಅಂದರೆ ತನ್ನ ಮಾತಿನಿಂದ ಕುಟುಂಬದವರಿಗೆ ಸಮಸ್ಯೆ ಆಗುತ್ತಿದೆ ಎನ್ನುವಾಗ ತನ್ನ ತಪ್ಪನ್ನು ತಿದ್ದುಕೊಳ್ಳಲು ಮುಂದಾದರೂ ಅಭಿಮಾನಿಗಳು ಮಾತ್ರ ಈ ನಟಿ ನಡೆದುಕೊಂಡ ರೀತಿಯನ್ನು ಮಾತ್ರ ಇನ್ನೂ ಮರೆಯುವಂತೆ ಕಾಣುವುದಿಲ್ಲ.

Leave A Reply

Your email address will not be published.