ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್‌ಗೆ ಹೆಚ್ಚುವರಿ ಹಣ ನೀಡಬೇಡಿ – HPCL ಸ್ಪಷ್ಟನೆ
ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಏರಿಕೆಯ ಬಿಸಿ ಜನರನ್ನು ತಟ್ಟುತಲೆ ಇರುತ್ತದೆ. ಈ ನಡುವೆ ಗ್ಯಾಸ್ ಸಿಲಿಂಡರ್ ಅಡಿಗೆ ಹಾಗೂ ಗೃಹಪಯೋಗಿ ಸಾಧನವಾಗಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಹೀಗಿರುವಾಗ ಒಮ್ಮೆ ಗ್ಯಾಸ್ ಸಿಲಿಂಡರ್ ಖಾಲಿ ಯಾಗಿಬಿಟ್ಟರೆ ಮನೆಯ ಗೃಹಿಣಿಯ ಅವಸ್ಥೆ ಕೇಳೋದೇ ಬೇಡ!!! ಹೀಗಾಗಿ, ಗ್ಯಾಸ್ ಸಿಲಿಂಡರ್ ಮುಗಿಯುವ ಮುನ್ನವೇ ಸಿಲಿಂಡರ್ ಬುಕ್ ಮಾಡೋದು ಸಹಜ. ಹಾಗೆಯೇ ಗ್ಯಾಸ್ ಸಿಲಿಂಡರ್ ಮನೆಗೆ ತರುವ ಸಿಲಿಂಡರ್ ಬಾಯ್ ನ ಜೇಬಿಗೆ 50 ಇಲ್ಲವೇ 100 ರೂಪಾಯಿ ಇಳಿಸುವುದು ವಾಡಿಕೆ.
ಆದರೆ, ಸರ್ಕಾರಿ ವಲಯದ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಡೆಲಿವರಿ ಬಾಯ್ ಗೆ ಒಂದೇ ಒಂದು ರೂಪಾಯಿ ಕೂಡ ನೀಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಎಚ್ಪಿಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಿ.ಕೆ.ನರಸಿಂಹ ಅವರು ಸ್ಪಷ್ಟ ಪಡಿಸಿದ್ದು, ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಖರೀದಿಸುವಾಗ 30 ರೂಪಾಯಿ ಅಥವಾ 50 ರೂಪಾಯಿ ಹೆಚ್ಚುವರಿ ಪಾವತಿಸುವ ಅವಶ್ಯಕತೆ ಇಲ್ಲವೆಂದು ಮಾಹಿತಿ ನೀಡಿದ್ದಾರೆ.
ವಿತರಕರು ಗ್ಯಾಸ್ ಸಿಲಿಂಡರ್’ ಅನ್ನು ಗ್ರಾಹಕರ ಮನೆಗೆ ತಲುಪಿಸಬೇಕಾದ ಕರ್ತವ್ಯ ಹೊಂದಿದ್ದು ಅವರು ಪಾವತಿಸುವ ಬಿಲ್ನಲ್ಲಿ ವೆಚ್ಚವನ್ನು ಭರಿಸಲಾಗುತ್ತದೆ ಎಂದು ತಿಳಿಸಿದ್ದು, ಹೀಗಾಗಿ ಡೆಲಿವರಿ ಬಾಯ್’ಗಳಿಗೆ ಹೆಚ್ಚುವರಿ ಹಣ ನೀಡುವ ಅಗತ್ಯವಿಲ್ಲ ಎಂದುಎಚ್ಪಿಸಿಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸಿ.ಕೆ.ನರಸಿಂಹ ಅವರು ಸ್ಪಷ್ಟಪಡಿಸಿದ್ದಾರೆ.