ಈ ಒಂದು ಸಣ್ಣ ಸಾಧನ ಅಳವಡಿಸಿ ನಿಮ್ಮ ಕರೆಂಟ್‌ ಬಿಲ್‌ ಕಡಿಮೆ ಮಾಡಿಕೊಳ್ಳಿ | ಸರಳ ಉಪಾಯ

ದೈನಂದಿನ ಜೀವನದ ಪ್ರತಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಣದುಬ್ಬರ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲವೂ  ದುಬಾರಿಯೇ. ಮನೆಯ ವಿದ್ಯುತ್ ಬಿಲ್ ಕೂಡ  ಇದಕ್ಕೆ ಭಿನ್ನವಾಗಿಲ್ಲ. ಆದರೆ, ಇದಕ್ಕೆ ಉತ್ತಮ ಪರಿಹಾರ ನಾವು ಹೇಳ್ತೀವಿ ಕೇಳಿ!!.

ಇಂದು ಯಾವುದೇ ವಸ್ತುವನ್ನು ಖರೀದಿ ಮಾಡಲು ಹೊರಟರು ಕೂಡ  ಬೆಲೆ ಏರಿಕೆಯ ಬಿಸಿ ನಿಮ್ಮನ್ನು ತಟ್ಟದೇ ಇರದು. ಬದಲಾಗುತ್ತಿರುವ ಈ ಕಾಲಮಾನದಲ್ಲಿ ಎಲ್ಲವೂ ದುಬಾರಿಯೇ. ಬೆಲೆ ಏರಿಕೆಯ ಬಿಸಿಯಿಂದ ಖರ್ಚು ಹೆಚ್ಚಾಗುತ್ತಿದ್ದು, ಉಳಿತಾಯ ಕಡಿಮೆ ಆಗಿ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಆದರೆ, ನೀವು ಕೆಲವು ವಿಚಾರಗಳ ಬಗ್ಗೆ ವಿಶೇಷ ಗಮನಹರಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು  ಕಡಿಮೆ ಮಾಡಬಹುದು.

ಇನ್ನು ಕೆಲವೇ ದಿನಗಳಲ್ಲಿ ಬೇಸಿಗೆಯ ಬೇಗೆ ಜನರನ್ನು ಬೆಂಡಾಗಿಸುತ್ತದೆ. ಇದರ ಜೊತೆಗೆ ಪವರ್ ಕಟ್ ಸಮಸ್ಯೆ ಕೂಡ ದೊಡ್ದ ತಲೆನೋವಾಗಿ ಪರಿಣಮಿಸುತ್ತದೆ. ವಿದ್ಯುತ್ ಬಿಲ್‌ ಜಾಸ್ತಿ ಬರುತ್ತಿದೆ ಎನ್ನುವ ಚಿಂತೆ ನಿಮಗಿದ್ದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈ ಒಂದು ಸಾಧನವನ್ನು ಮನೆಗೆ ತರುವ ಮೂಲಕ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಇದನ್ನು  ಸರಿಯಾಗಿ ಬಳಸಿಕೊಂಡರೆ ಸಂಪೂರ್ಣ ಬಿಲ್ ಮನ್ನಾ ಆದರೂ ಅಚ್ಚರಿಯಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆಯ ಬಿಸಿಯಿಂದ ತತ್ತರಿಸಿರುವ ಜನತೆಗೆ ಈ ಋತುವಿನಲ್ಲಿ ಫ್ಯಾನ್, ಎಸಿ, ಕೂಲರ್ಗಳ ಬಳಕೆ ಅನಿವಾರ್ಯ. ಇದಲ್ಲದೆ, ಈ ಬೇಸಿಗೆ ಕಾಲದಲ್ಲಿ ಪವರ್ ಕಟ್  ಕೂಡ ಆಗಾಗ್ಗೆ ತಲೆದೋರುತ್ತದೆ. ಇಂತಹ ಸಂದರ್ಭದಲ್ಲಿ ಅನುಕೂಲವಾಗಲೆಂದು ಇನ್ವರ್ಟರ್ಗಳು ಮತ್ತು ಜನರೇಟರ್ಗಳನ್ನು ಖರೀದಿ ಮಾಡಲಾಗುತ್ತದೆ. ಆದರೆ, ಜನರೇಟರ್‌ಗಳು ಹೆಚ್ಚು ತೈಲವನ್ನು ಬಳಸಿದರೆ, ಇನ್ವರ್ಟರ್‌ಗಳಲ್ಲಿ ಚಾರ್ಜಿಂಗ್ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಒಟ್ಟಾರೆಯಾಗಿ ಬೇಸಿಗೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ಹೆಚ್ಚು ಬಳಸಿದಂತೆ  ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತ ಹೋಗುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ಹಲವು ಬಗೆಯ ಪವರ್ ಸ್ಟೇಷನ್ಗಳು ಲಭ್ಯವಿದ್ದು, ಇವುಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವು ಚಾರ್ಜ್ ಕಡಿಮೆ ಸಮಯದಲ್ಲೇ ಚಾರ್ಜ್ ಆಗಿ ಬಿಡುತ್ತವೆ. ಮಾತ್ರವಲ್ಲದೆ, ಇವುಗಳನ್ನು ಸುಲಭವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬಹುದಾಗಿದೆ. ಇವುಗಳಲ್ಲಿ ಎಂಜಾಯ್‌ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ಎಂಬ ಸಾಧನ ಕೂಡ ಒಂದಾಗಿದೆ. ಈ ಸಾಧನದ ಬಳಕೆಯಿಂದ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ನೀವು ಅರ್ಧದಷ್ಟು ಕಡಿತ ಮಾಡಿಕೊಳ್ಳಬಹುದು.

ಎಂಜಾಯ್‌ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ವೈಶಿಷ್ಟ್ಯ:
ಎಂಜಾಯ್‌ಕೂಲ್ 1,200 W 11-in-1 ಪವರ್ ಸ್ಟೇಷನ್ ಎರಡು 1,200 W AC ಔಟ್‌ಲೆಟ್‌ಗಳು, 120 W 12 V ಕಾರ್ ಚಾರ್ಜರ್, 65 W USB-C, 18 W USB-A ಮತ್ತು ಎರಡು 5 V USB-A ಪೋರ್ಟ್‌ಗಳನ್ನು ಹೊಂದಿದೆ. ಎಂಜಾಯ್‌ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ಅನೇಕ ಪೋರ್ಟಬಲ್ ವಿದ್ಯುತ್ ಮೂಲಗಳನ್ನು ಹೊಂದಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು ನಿಮ್ಮ ಮನೆಗೆ ವಿಶ್ವಾಸಾರ್ಹ ಶಕ್ತಿಯ ಮೂಲ ಮಾತ್ರವಲ್ಲದೇ ನೀವು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಇಲ್ಲವೇ ಪ್ರಯಾಣಿಸುತ್ತಿರಲಿ ಅಗತ್ಯವಿರುವೆಡೆ ವಿದ್ಯುತ್ ಒದಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಎಂಜಾಯ್‌ಕೂಲ್ 1,200 W 11-ಇನ್ -1 ಪವರ್ ಸ್ಟೇಷನ್ ಹೆಚ್ಚಿನ ಸಾಮರ್ಥ್ಯದೊಂದಿಗೆ 1,008 Wh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.ಈ ಪವರ್ ಸ್ಟೇಷನ್ ಬಳಸಿ ಎಸಿ, ಟಿವಿ, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್, ಡ್ರೋನ್ ಮತ್ತು ಪ್ರೊಜೆಕ್ಟರ್‌ನಂತಹ ವಸ್ತುಗಳು ಕಾರ್ಯನಿರ್ವಹಿಸಬಹುದು. ಒಮ್ಮೆ ಫುಲ್ ಚಾರ್ಜ್ ಆದ ಬಳಿಕ ಈ ಪವರ್ ಸ್ಟೇಷನ್ ದಿನವಿಡೀ ವಿದ್ಯುತ್ ಲಭ್ಯವಾಗುತ್ತದೆ. ಈ ಪವರ್ ಸ್ಟೇಷನ್ ಅನ್ನು ನೀವು ಹೊರಾಂಗಣದಲ್ಲಿಯೂ ಚಾರ್ಜ್ ಮಾಡಬಹುದಾಗಿದ್ದು, ವಿನ್ಯಾಸದಲ್ಲಿ ಚಿಕ್ಕದಾಗಿರುವುದರಿಂದ ಇದನ್ನು ಸುಲಭವಾಗಿ ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಒಯ್ಯಬಹುದು.

ಸದ್ಯ, ಯುಎಸ್‌ನಲ್ಲಿ ಬಿಡುಗಡೆ ಆಗಿರುವ ಎಂಜಾಯ್‌ಕೂಲ್ 1,200 W 11-in-1 ಪವರ್ ಸ್ಟೇಷನ್ ಬೆಲೆ $690 (56,120)ಆಗಿದ್ದು,  ಈ ವರ್ಷದ ಮಾರ್ಚ್‌ನಲ್ಲಿ ಇದರ ಮೊದಲ ಮಾರಾಟ ಆರಂಭವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. ಈ  ಸಾಧನದಲ್ಲಿ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯಿದ್ದು  ಇದು ಅಧಿಕ ಚಾರ್ಜ್, ಅಧಿಕ ತಾಪಮಾನ ಮತ್ತು ಅತಿಯಾದ ವೋಲ್ಟೇಜ್‌ನಂತಹ ವಿಷಯಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದರ ತೂಕ ಕೂಡ ಕೇವಲ 11 ಕೆ.ಜಿ. ಆಗಿದ್ದು, ಈ ಪವರ್ ಸ್ಟೇಷನ್ ಎಲ್ಇಡಿ ಬೆಳಕನ್ನು ಪಡೆಯುತ್ತದೆ ಮತ್ತು ಬ್ಯಾಟರಿ ಕಡಿಮೆಯಾದಾಗ SOS ಸಂಕೇತವನ್ನು ಪ್ರದರ್ಶಿಸುತ್ತದೆ.

Leave A Reply

Your email address will not be published.