ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ : ಅಧ್ಯಯನದಿಂದ ಶಾಕಿಂಗ್‌ ಮಾಹಿತಿ ಬಹಿರಂಗ

ಅಮೆರಿಕದಲ್ಲಿ ನಡೆದ ಅಧ್ಯಯನದ ಅನುಸಾರ ಅಮೆರಿಕದಲ್ಲಿ ಅಸ್ತಮಾದಿಂದ ಬಳಲುತ್ತಿರುವ ಪ್ರತಿ 8 ಮಕ್ಕಳ ಪೈಕಿ ಒಬ್ಬರಿಗೆ ಅಸ್ತಮಾ ಬರಲು ಅಡುಗೆ ಅನಿಲ ಕಾರಣ ಎನ್ನುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಅಡುಗೆ ಅನಿಲವು ಪರೋಕ್ಷವಾಗಿ ಧೂಮಪಾನ(Second Hand Smoking)ಮಾಡುವುದರಿಂದ ದೇಹದ ಮೇಲೆ ಆಗುವ ಪ್ರಭಾವ ಬೀರುತ್ತದೆ ಎಂದು ತಿಳಿದು ಬಂದಿದೆ. ಹೀಗಾಗಿ, ಇದೀಗ ಅಲ್ಲಿನ ಮನೆಗಳಲ್ಲಿ ಗ್ಯಾಸ್ ಸ್ಟೌವ್ ನಿಷೇಧಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್ ನಲ್ಲಿ ಡಿಸೆಂಬರ್ 2022 ರಲ್ಲಿ ಅಧ್ಯಯನ ವರದಿಯನ್ನು ಪ್ರಕಟಿಸಲಾಗಿದ್ದು, ಈ ಅಧ್ಯಯನದ ಅನುಸಾರ, ಅಮೆರಿಕದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಅಸ್ತಮಾ ಕಾಯಿಲೆಗೆ ಗ್ಯಾಸ್ ಸ್ಟೌವ್ 12.7% ಕಾರಣ ಎನ್ನಲಾಗಿದೆ. ಸರಿ ಸುಮಾರು 6.5 ಮಿಲಿಯನ್ ಅಮೇರಿಕನ್ ಮಕ್ಕಳು ಗ್ಯಾಸ್ ಸ್ಟೌವ್‌ಗಳಿಂದ ಆಸ್ತಮಾ ಎಂಬ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ.35 ಕುಟುಂಬಗಳು ಗ್ಯಾಸ್ ಸ್ಟವ್ ಬಳಸುತ್ತಿದ್ದು, ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿಯಂತಹ ರಾಜ್ಯಗಳಲ್ಲಿ, ಈ ಅನುಪಾತವು ಶೇ.70 ರಷ್ಟಿದೆ.

ಅಡುಗೆ ಅನಿಲವು ಮನೆಗಳಲ್ಲಿ ಮಾಲಿನ್ಯದ ಮಟ್ಟವನ್ನು ಏರಿಸುತ್ತವೆ. ಇವು ನೈಟ್ರೋಜನ್ ಆಕ್ಸೈಡ್‌ಗಳು, ಮೀಥೇನ್, ಕಾರ್ಬನ್ ಡೈಆಕ್ಸೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್‌ನಂತಹ ಅನಿಲಗಳು ಮತ್ತು ಕಣಗಳನ್ನು ಹೊರ ಚೆಲ್ಲುತ್ತವೆ. ಹೀಗಾಗಿ , ಮಕ್ಕಳಲ್ಲಿ ಅಸ್ತಮಾ. ಕಂಡುಬರುತ್ತಿದ್ದು, ಇದರಿಂದ ಸೆಕೆಂಡ್​ ಹ್ಯಾಂಡ್ ಸ್ಮೋಕಿಂಗ್ ಇಲ್ಲವೇ ಪರೋಕ್ಷ ಧೂಮಪಾನದಷ್ಟೇ ಅಪಾಯವನ್ನೂ ತಂದೊಡ್ಡುತ್ತಿದೆ. ಇದರಿಂದಾಗಿ, ಉಸಿರಾಟದ ಕಾಯಿಲೆಗಳು ಕೂಡ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ದೆಹಲಿ ವೈದ್ಯಕೀಯ ಮಂಡಳಿಯ ವೈಜ್ಞಾನಿಕ ಸಮಿತಿಯ ಅಧ್ಯಕ್ಷ ಡಾ.ನರೇಂದ್ರ ಸೈನಿ ಜಾಗರಣ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಆಸ್ತಮಾಕ್ಕೆ ಮುಖ್ಯ ಕಾರಣ ಅಲರ್ಜಿಯಾಗಿದ್ದು , ಈ ಅಲರ್ಜಿ ಪ್ರಕರಣಗಳು ಸಾಮಾನ್ಯವಾಗಿ ಅಮೆರಿಕಾದಲ್ಲಿ ಹೆಚ್ಚು ಕಾಮನ್ ಆಗಿದ್ದು, ಅಡುಗೆ ಮನೆಯಲ್ಲಿ ಬಳಸುವ ಗ್ಯಾಸ್ ನಿಂದ ಅಲ್ಲಿನ ಜನರಿಗೆ ಹೆಚ್ಚು ಅಲರ್ಜಿಯಾಗುವ ಸಂಭವವಿದ್ದು, ಧೂಳಿನ ಹುಳಗಳು ಮತ್ತು ಕೋಲುಗಳನ್ನು ಸುಡುವುದು ಭಾರತದಲ್ಲಿ ಕೂಡ ಹೆಚ್ಚು ಅಲರ್ಜಿಯನ್ನು ಉಂಟುಮಾಡಲು ಕಾರಣವಾಗಬಹುದು.

ಸದ್ಯ, CPSC ಗ್ಯಾಸ್ ಸ್ಟೌವ್‌ಗಳಿಂದ ಆಗುತ್ತಿರುವ ಅಪಾಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳುತ್ತಿದ್ದು, ಗ್ಯಾಸ್ ಸ್ಟೌವ್ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿವೆ. ಇದನ್ನು ನಿಷೇಧಿಸುವುದಲ್ಲದೆ, ಇತರ ಆಯ್ಕೆಗಳು ಸ್ಟೌವ್‌ಗಳಿಂದ ಹೊರಸೂಸುವಿಕೆಗೆ ಮಾನದಂಡಗಳನ್ನು ಹೊಂದಿವೆ.

ಅಮೆರಿಕ ಶಾಸಕರ ಪತ್ರ ಕೆಲವು ಅಮೆರಿಕದ ಶಾಸಕರು ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗದ ಅಧ್ಯಕ್ಷ ಅಲೆಕ್ಸಾಂಡರ್ ಹೋಹೆನ್-ಸಾರಿಚ್ ಅವರಿಗೆ ಈ ಕುರಿತಂತೆ ಪತ್ರ ಬರೆದಿದ್ದಾರೆ. ಅಸ್ತಮಾ ಇರುವ ಮಕ್ಕಳು ಕೆಲ ಸಮಯಗಳ ಕಾಲ ನೈಟ್ರೋಜನ್ ಆಕ್ಸೈಡ್‌ಗಳಿಗೆ ಒಡ್ಡಿಕೊಳ್ಳುವ ಹಿನ್ನೆಲೆ ಅವರ ಸ್ಥಿತಿಯು ಹದಗೆಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಮಕ್ಕಳ ಅಡುಗೆಮನೆಯಲ್ಲಿ ಗಾಳಿಯ ಚಲನೆಯ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಬಡ ಕುಟುಂಬಗಳ ಮಕ್ಕಳಿಗೆ ಅಪಾಯ ಹೆಚ್ಚು ಎಂದು ಪರಿಗಣಿಸಲಾಗುತ್ತಿದೆ. ನೈಟ್ರೋಜನ್ ಆಕ್ಸೈಡ್‌ಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಆಸ್ತಮಾ ಕಾಯಿಲೆ ಇಲ್ಲದ ಮಕ್ಕಳು ಕೂಡ ಅಸ್ತಮಾಕ್ಕೆ ಬಲಿಯಾಗುತ್ತಿರುವ ಪ್ರಕರಣ ದಾಖಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕಾದಲ್ಲಿ ಮಕ್ಕಳಲ್ಲಿ 12.7 ರಷ್ಟು ಅಸ್ತಮಾಕ್ಕೆ ಅಡುಗೆ ಅನಿಲ ಕಾರಣವಾಗಿದ್ದು, ಒಟ್ಟು 6.5 ಮಿಲಿಯನ್ ಅಮೆರಿಕನ್ ಮಕ್ಕಳಲ್ಲಿ ಆಸ್ತಮಾ ಗ್ಯಾಸ್ ಸ್ಟೌವ್‌ಗಳಿಂದ ಕಾಣಿಸಿಕೊಳ್ಳುತ್ತಿದೆ. ಗ್ಯಾಸ್ ಸ್ಟೌವ್‌ನಿಂದ ಹೊರಬರುವ ವಿಷಕಾರಿ ಅನಿಲಗಳು ಮಕ್ಕಳಲ್ಲಿ ಅಸ್ತಮಾ ಕಾಯಿಲೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಅಂತಾರಾಷ್ಟ್ರೀಯ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ದಾಖಲೆ ಅನುಸಾರ, 6.5 ಮಿಲಿಯನ್ ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ ಎಂದಿದೆ. ಅಲ್ಲದೆ, ಇತ್ತೀಚಿನ ಅಧ್ಯಯನವು ಅಮೆರಿಕದ ಮಕ್ಕಳಲ್ಲಿ 13 ಪ್ರತಿಶತದಷ್ಟು ಅಸ್ತಮಾ ಪ್ರಕರಣಗಳು ಗ್ಯಾಸ್ ಸ್ಟೌವ್‌ಗಳಿಂದ ಹೊರಹೊಮ್ಮುವ ವಿಷಕಾರಿ ಹೊಗೆಯಿಂದ ಆಗುತ್ತಿವೆ ಎಂದು ತಿಳಿಸಿದೆ.

ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಅನೇಕ US ನಗರಗಳು ಈಗಾಗಲೇ ಹೊಸ ಕಟ್ಟಡಗಳಲ್ಲಿ ನೈಸರ್ಗಿಕ ಅನಿಲದ ಬಳಕೆಯನ್ನು ನಿರ್ಬಂಧ ಹೇರಿವೆ. ಇದನ್ನು 2019 ರಲ್ಲಿ ಬರ್ಕ್ಲಿ, 2020 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ, 2021 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಿಷೇಧ ಮಾಡಲಾಗಿದೆ. ಆದರೂ ಕೂಡ ಅಲ್ಲಿನ 50 ರಾಜ್ಯಗಳಲ್ಲಿ 20 ರಾಜ್ಯಗಳಲ್ಲಿ ನೈಸರ್ಗಿಕ ಅನಿಲವನ್ನು ನಿಷೇಧಿಸುವ ವಿರುದ್ಧ ಕಾನೂನುಗಳನ್ನು ಕೂಡ ಜಾರಿಗೊಳಿಸಲಾಗಿದೆ.

ಗ್ಯಾಸ್ ಸ್ಟೌವ್ ಉತ್ಪಾದನಾ ಉದ್ಯಮವು ನಿಷೇಧದ ವಿರುದ್ಧ ವಾದಿಸುತ್ತಿದ್ದು, ಅಮೆರಿಕದ ಗೃಹೋಪಯೋಗಿ ತಯಾರಕರ ಸಂಘವು ಈ ನಿಷೇಧವು 40% ಕ್ಕಿಂತ ಹೆಚ್ಚು ಕುಟುಂಬಗಳಿಗೆ ಅಗ್ಗದ ಇಂಧನದ ಆಯ್ಕೆಯನ್ನು ನಿರ್ಮೂಲನೆ ಮಾಡುತ್ತದೆ ಎಂದು ಹೇಳಿದೆ.

ಈ ನಿಷೇಧದಿಂದ ಮಾಲಿನ್ಯದ ಸಮಸ್ಯೆಯನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಲೆ ಏನೇ ಇರಲಿ, ಹೆಚ್ಚಿನ ತಾಪಮಾನದಲ್ಲಿ ಮಾಲಿನ್ಯಕಾರಕ ಅಂಶಗಳು ಅದರಿಂದ ಹೊರಬರುವ ಹಿನ್ನೆಲೆ ಅಮೆರಿಕನ್ ಗ್ಯಾಸ್ ಅಸೋಸಿಯೇಷನ್ ​​ಅನಿಲದಿಂದ ವಿದ್ಯುತ್​ಗೆ ಬದಲಾಯಿಸುವುದು ತುಂಬಾ ದುಬಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಮೆರಿಕದಲ್ಲಿ ಗ್ಯಾಸ್ ಸ್ಟೌವ್ ಬಗ್ಗೆ ಬೈಡನ್ ಸರ್ಕಾರ ಅತಿ ಶೀಘ್ರದಲ್ಲಿ ಮಹತ್ತರ ನಿರ್ಣಯ ಕೈಗೊಳ್ಳಲು ಮುಂದಾಗಿದ್ದು 35 ಪ್ರತಿಶತ ಮನೆಗಳಲ್ಲಿನ ಗ್ಯಾಸ್ ಸ್ಟೌವ್ 50 ವರ್ಷಗಳ ಆರೋಗ್ಯ ಅಧ್ಯಯನದಲ್ಲಿ ತಜ್ಞರನ್ನು ಉಲ್ಲೇಖಿಸಿ ವರದಿ ಮಾಡಿದೆ. ಗ್ಯಾಸ್ ಸ್ಟೌವ್ ನಮ್ಮ ಆರೋಗ್ಯಕ್ಕೆ ದೊಡ್ಡ ಪರಿಣಾಮ ಬೀರುತ್ತದೆ. ಇದರಿಂದಲೇ ಮಕ್ಕಳಲ್ಲಿ ಅಸ್ತಮಾ ಶುರುವಾಗಿದ್ದು ಅನೇಕ ಸಾಕ್ಷಿಗಳು ಲಭ್ಯವಾಗಿವೆ. ಪ್ರಸ್ತುತ, ಅಮೆರಿಕಾದಲ್ಲಿ 35 ಪ್ರತಿಶತ ಮನೆಗಳಲ್ಲಿ ಗ್ಯಾಸ್ ಸ್ಟೌವ್ ಅನ್ನು ಬಳಸಲಾಗುತ್ತಿದೆ ಎನ್ನಲಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ನ್ಯೂಜೆರ್ಸಿಯಂತಹ ಸ್ಥಳಗಳಲ್ಲಿ ಗ್ಯಾಸ್ ಸ್ಟೌವ್‌ಗಳ ಬಳಸುವವರ ಸಂಖ್ಯೆ ಹೆಚ್ಚಿದ್ದು, ಅಲ್ಲಿ 70 ಪ್ರತಿಶತದಷ್ಟು ಮನೆಗಳಲ್ಲಿ ಗ್ಯಾಸ್ ಸ್ಟೌವ್‌ಗಳನ್ನು ಉಪಯೋಗಿಸಲಾಗುತ್ತದೆ.

Leave A Reply

Your email address will not be published.