ಬಿಗ್‌ ಬಾಸ್‌ ಮನೆಗೆ ಜೋಡಿಯಾಗಿ ಹೋದ ಜಶ್ವಂತ್‌ ನಂದು ಈಗ ಬ್ರೇಕಪ್‌ | ಈ ಸುದ್ದಿ ಖಚಿತ ಅಂದ್ರು ನಂದು

Share the Article

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್‌ 1 ರಲ್ಲಿ ಜೋಡಿಯಾಗಿ ಎಂಟ್ರಿ ಕೊಟ್ಟ ಸ್ಪರ್ಧಿಗಳೆಂದರೆ, ಅದು ಜಶ್ವಂತ್‌ ಮತ್ತು ನಂದು. ಹೌದು, ಮೊದಲಿಗೆ ಬಹಳಷ್ಟು ಚೆನ್ನಾಗಿಯೇ ಇದ್ದ ಈ ಜೋಡಿ ಮಧ್ಯೆ ನಂತರ ಬಿರುಕು ಕಾಣಿಸಿತ್ತು. ಅದು ಕೂಡಾ ಅಂತಿಥ ಬಿರುಕಲ್ಲ. ನಂಬಿಕೆಯ ಬಿರುಕು. ಜಶ್ವಂತ್‌ ಯಾವಾಗ ಸಾನ್ಯಾ ಅಯ್ಯರ್‌ ಜೊತೆ ಸ್ನೇಹ ಬೆಳೆಯಿತೋ ನಂದು ಒಬ್ಬಂಟಿಯಾಗಿ ಬಿಟ್ಟಳು. ಜಶ್ವಂತ್‌ ಸಾನ್ಯಾ ಜೊತೆಯಾಗಿ ಮಾತನಾಡುತ್ತಾ ಇರುವಾಗ ನಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ಇದರ ಬಗ್ಗೆ ಸುದೀಪ್‌ ಕೂಡಾ ವೀಕೆಂಡ್‌ ಒಂದರಲ್ಲಿ ಹೇಳಿದ್ದರು ಕೂಡಾ. ನಂದು ಅವರ ಪೊಸೆಸಿವ್‌ನೆಸ್‌ ಬಹುಶಃ ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಮೇಲೆ ಕೂಡಾ ಇತ್ತು ಅನ್ಸುತ್ತೆ, ಅಥವಾ ಜಶ್ವಂತ್‌ ಗೆ ನಂದು ಅವರಿಂದಾಗಿ ನಾನು ಬಿಗ್‌ಬಾಸ್‌ ಗೆಲ್ಲಲು ಸಾಧ್ಯವಾಗಲಿಲ್ಲವೋ ಎಂಬ ಭಾವನೆ ಮನೆ ಮಾಡಿತ್ತೋ ? ಅಥವಾ ಮನೆ ಮಂದಿಯ ಒತ್ತಡವೋ? ಅದೇನೇ ಇರಲಿ. ಈಗ ಜೋಡಿ ಜೊತೆಯಾಗಿ ಕಾಣಿಸುತ್ತಿಲ್ಲ. ಈ ವಿಷಯವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆನೇ ನಡೆದಿತ್ತು. ಈಗ ಈ ಚರ್ಚೆ ವಿಷಯ ನಂದು ಕಿವಿಗೆ ಬಿದ್ದಿದೆ. ಈಗ ಜಶ್ವಂತ್‌ ನಂದು ಜೋಡಿಯಲ್ಲಿ ನಂದು ಕಡೆಯಿಂದ ಬಿಗ್‌ ಅಪ್ಡೇಟ್‌ ಬಂದಿದೆ. ಅದೇನು ಬನ್ನಿ ತಿಳಿಯೋಣ.

ಇದೀಗ ನಂದಿನಿ ಅಧಿಕೃತವಾಗಿ ಬ್ರೇಕಪ್ ಸುದ್ದಿ ಬಹಿರಂಗ ಪಡಿಸಿದ್ದಾರೆ. ಜಶ್ವಂತ್ ಮತ್ತು ತಾನು ಜೊತೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಂದಿನಿ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ. ‘ನಾನು ಮತ್ತು ಜಶ್ವಂತ್ ಒಟ್ಟಿಗೆ ಇದ್ದೆವು. ಇಬ್ಬರೂ ಒಟ್ಟಿಗೆ ಹಿಸ್ಟರಿ ಸೃಷ್ಟಿಸಿದೆವು. ಇಬ್ಬರೂ ಸಂತೋಷದ ಕ್ಷಣ ಕಳೆದೆವು. ರಿಲೇಷನ್ ಶಿಪ್‌ನಲ್ಲಿ ಇರಲು ನನಗೆ ಇಷ್ಟವಿರಲಿಲ್ಲ. ಆದರೆ ಟೈಂ ತಗೊಂಡು ಬಳಿಕ ಒಪ್ಪಿಕೊಂಡೆ. ಈಗ ಬಿಟ್ಟಿಕೊಡಲು ಇಷ್ಟವಿರಲಿಲ್ಲ. ಆದರೂ ಬಿಟ್ಟು ಕೊಟ್ಟೆ’ ಎಂದು ಹೇಳಿದ್ದಾರೆ.

‘ಆರಂಭದಲ್ಲಿ ನಾನು ಅವನ ಖುಷಿಯಾಗಿದ್ದೆ. ಆದರೆ ಅದು ತುಂಬಾ ಕಡಿಮೆ ಆವಧಿಗೆ ಮಾತ್ರ ಆಗಿತ್ತು. ಅವನ ಆ ಖುಷಿ ಹೋದ ಬಳಿಕ ಸಮಯ ಕೇಳಿದ. ನಾನು ಬಿಟ್ಟುಕೊಟ್ಟೆ. ತುಂಬಾ ಕಷ್ಟವಾಗಿತ್ತು ಆದರೆ ಇದೇ ಸತ್ಯ ಎಂದು ಹೇಳಿದ್ದಾರೆ. ಅವನ ಖುಷಿ ಕೂಡ ತುಂಬಾ ಮುಖ್ಯ. ನಾನು ಯಾವಾಗಲೂ ಅವನ ಖುಷಿ ಆಗಲು ಸಾಧ್ಯವಿಲ್ಲ’ ಎಂದು ನಂದಿನಿ ಬರೆದುಕೊಂಡಿದ್ದಾರೆ. ನನಗೆ ಈ ಬಗ್ಗೆ ಬೇಸರ ಇಲ್ಲ ಎಂದು ಹೇಳಿದ್ದಾರೆ.

‘ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಬ್ರೇಕಪ್ ಬಗ್ಗೆ ಇದ್ದ ಅನುಮಾನಗಳಿಗೆ ಬ್ರೇಕ್ ಹಾಕಿದ್ದಾರೆ.

ಈ ಬ್ರೇಕಪ್‌ ಸುದ್ದಿ ನಿಜ ಎಂದು ಬಹಿರಂಗವಾಗುತ್ತಿದ್ದಂತೆ, ನೆಟ್ಟಿಗರು ಪರ ವಿರೋಧವಾಗಿ ಕಮೆಂಟ್‌ ಮಾಡುತ್ತಿದ್ದಾರೆ. ಎಲ್ಲರೂ ಬಿಗ್‌ಬಾಸ್‌ ಮನೆಯಿಂದ ಜೋಡಿಯಾಗಿ ಹೊರ ಬರುತ್ತಾರೆ. ಆದರೆ ನೀವು ಬೇರೆ ಬೇರೆ ಆಗಿ ಬಂದಿದ್ದೀರಿ ಎಂದು ಕಮೆಂಟ್‌ ಮಾಡುತ್ತಾ ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ಈ ನೋವು ನಂದು ಅವರನ್ನು ಜಾಸ್ತಿ ದಿನ ಕಾಡದಿರಲಿ. ಇದು ನಮ್ಮ ಹಾರೈಕೆ.

Leave A Reply