ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನ 2022-2023 : 2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಪ್ರಸ್ತುತ ಯಾವುದೇ ವಿಷಯದಲ್ಲಿ ಪದವಿಪೂರ್ವ ಕೋರ್ಸ್ನಲ್ಲಿ, ಮೊದಲ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳಿಗೆ 2022-23ನೇ ಸಾಲಿನ ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸದ್ಯ ಪ್ರತಿ ವರ್ಷ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ನೆರವಾಗಲು ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಆರ್ಥಿಕ ಪರಿಸ್ಥಿತಿಗಳಿಂದ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವನ್ನು ನೀಡುತ್ತದೆ. ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮದಡಿಯಲ್ಲಿ 5,000 ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಮತ್ತು ಇತರ ವಿವರಗಳು ಈ ಕೆಳಗಿನಂತಿವೆ :
- ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 60 ರಷ್ಟು ಅಂಕಗಳಿಸಿರಬೇಕು.
- ವಿದ್ಯಾರ್ಥಿಗಳ ಕುಟುಂಬದ ಆದಾಯ ಎಲ್ಲಾ ಮೂಲಗಳಿಂದ ವಾರ್ಷಿಕ 15 ಲಕ್ಷಗಳಿಗಿಂತ ಹೆಚ್ಚಿರಬಾರದು.
- ಯಾವುದೇ ವಿಷಯದಲ್ಲಿ ಪದವಿಪೂರ್ವ ಕೋರ್ಸ್ ಅನ್ನು ಓದುತ್ತಿರಬೇಕು.
- ಪದವಿ ಮೊದಲನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
- ಈ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ದಿನಾಂಕ 14-02-2023ರ ಒಳಗಾಗಿ ಅರ್ಜಿ ಸಲ್ಲಿಸಿ.
- ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 2 ಲಕ್ಷದ ವರೆಗೂ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- 12ನೇ ತರಗತಿಯ ಅಂಕಪಟ್ಟಿ.
- ಆಧಾರ್ ಕಾರ್ಡ್ ಪ್ರತಿ.
- ಪ್ರಸ್ತುತ ವರ್ಷದ ಪ್ರವೇಶ ಪ್ರತಿ ( ಶುಲ್ಕ ರಶೀದಿ, ಪ್ರವೇಶ ಪತ್ರ, ವಿದ್ಯಾರ್ಥಿಯ ಶಾಲಾ ಗುರುತಿನ ಪತ್ರ, ಇತ್ಯಾದಿ).
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಡಿಟೆಲ್ಸ್. ಅಥವಾ ಪೋಷಕರ ಬ್ಯಾಂಕ್ ಡಿಟೆಲ್ಸ್.
- ವಿದ್ಯಾರ್ಥಿಯ ಫೋಟೋ.
- ಅರ್ಜಿ ಸಲ್ಲಿಕೆಗೆ ಕೊನೆ ದಿನ : 14-02-2023.
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು.
ಸದ್ಯ 2022-23ನೇ ಸಾಲಿನ ರಿಲಯನ್ಸ್ ಫೌಂಡೇಶನ್ ಪದವಿಪೂರ್ವ ವಿದ್ಯಾರ್ಥಿವೇತನಕ್ಕೆ ಯಾವುದೇ ವಿಷಯದಲ್ಲಿ ಪದವಿಪೂರ್ವ ಕೋರ್ಸ್ನಲ್ಲಿ, ಮೊದಲ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಮೇಲಿನ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ.