PGCIL Recruitment 2023: Jobs: ಪವರ್ ಗ್ರಿಡ್ ಕಾರ್ಪೊರೇಷನ್ನಲ್ಲಿ ಉದ್ಯೋಗವಕಾಶ | ತಿಂಗಳಿಗೆ 1.77 ಲಕ್ಷ ಸಂಬಳ
PGCIL Recruitment 2023: ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Power Grid Corporation of India Limited -PGCIL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ. ಮಾರ್ಚ್ 5, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು.
ಸಂಸ್ಥೆ : ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಹುದ್ದೆ : ಅಸಿಸ್ಟೆಂಟ್ ಆಫೀಸರ್ ಟ್ರೈನಿ, ಮ್ಯಾನೇಜ್ಮೆಂಟ್ ಟ್ರೈನಿ
ಒಟ್ಟು ಹುದ್ದೆ : 35
ವೇತನ ಮಾಸಿಕ : 56,100-1,77,500 ರೂ.
ಉದ್ಯೋಗದ ಸ್ಥಳ :ಭಾರತ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11/02/2023
ಅರ್ಜಿ ಸಲ್ಲಿಸಲು ಕೊನೆ ದಿನ: ಮಾರ್ಚ್ 5, 2023
UGC-NET ಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ (2022): ಡಿಸೆಂಬರ್ 29, 2022
UGC-NET ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (2022): ಜನವರಿ 17, 2023
UGC-NET ಪರೀಕ್ಷೆಯ ದಿನಾಂಕ: ಫೆಬ್ರವರಿ 21 ರಿಂದ ಮಾರ್ಚ್ 10, 2023
ಹುದ್ದೆಗಳ ವಿವರ : ಅಸಿಸ್ಟೆಂಟ್ ಆಫೀಸರ್ ಟ್ರೈನಿ (ಪವರ್ಗ್ರಿಡ್)- 27
ಅಸಿಸ್ಟೆಂಟ್ ಆಫೀಸರ್ ಟ್ರೈನಿ (CTUIL)-3
ಮ್ಯಾನೇಜ್ಮೆಂಟ್ ಟ್ರೈನಿ (DVC)- 5
ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ, HR/ಪರ್ಸನಲ್ ಮ್ಯಾನೇಜ್‌ಮೆಂಟ್ ಮತ್ತು ಕೈಗಾರಿಕಾ ಸಂಬಂಧಗಳು/ಸೋಷಿಯಲ್ ವರ್ಕ್ನಲ್ಲಿ MBA ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು ಡಿಸೆಂಬರ್ 31, 2022ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ಮೀರಿರಬಾರದು.
ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ, SC/ST ಅಭ್ಯರ್ಥಿಗಳು- 5 ವರ್ಷ,PWD ಅಭ್ಯರ್ಥಿಗಳು- 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: SC/ST/PWD/ ಮಾಜಿ ಸೈನಿಕ/ ಡಿಪಾರ್ಟ್ಮೆಂಟ್ ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 500 ರೂ.
ಪಾವತಿಸುವ ಬಗೆ- ಆನ್ಲೈನ್
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಗುಂಪು ಚರ್ಚೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ