ನೀವು ಮ್ಯಾಗಿ, ನೂಡಲ್ಸ್ ಪ್ರಿಯರೇ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಖಂಡಿತ!!

ಇತ್ತೀಚೆಗೆ ಫಾಸ್ಟ್ ಫುಡ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಜನತೆ ಹೆಚ್ಚಾಗಿ ಬೇಗ ತಯಾರಾಗುವ, ಅನಾರೋಗ್ಯ ತರುವ ಫಾಸ್ಟ್ ಫುಡ್ ಅನ್ನೇ ಬಯಸುತ್ತಾರೆ. ಅದರಲ್ಲೂ ಮ್ಯಾಗಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವವರೇ. ಅಡುಗೆ ಬಾರದವರಿಗಂತು ಇದು ಬಹಳ ಪ್ರಿಯವಾದದ್ದು ಎಂದೇ ಹೇಳಬಹುದು. 2 ನಿಮಿಷಗಳಲ್ಲಿ ತಯಾರಾಗುವಾಗ ಎಲ್ಲರೂ ಇದನ್ನೇ ಆಯ್ಕೆ ಮಾಡುತ್ತಾರೆ. ಆದರೆ
2 ನಿಮಿಷಗಳಲ್ಲಿ ಬೇಯಿಸಿದ ಇನ್‌ಸ್ಟಂಟ್ ನೂಡಲ್ಸ್ ಜೀರ್ಣವಾಗಲು ಎಷ್ಟು ಸಮಯ ಬೇಕು ಗೊತ್ತಾ?.

ಅತಿ ಬೇಗನೆ ತಯಾರಾಗುವ ನೂಡಲ್ಸ್ ಹಸಿವು ಮತ್ತು ಕ್ರೇವಿಂಗ್ ಅನ್ನು ಕಡಿಮೆ ಮಾಡುತ್ತದೆ. ಆದರೆ ಇದರಿಂದ ದೇಹಕ್ಕೆ ಹಲವು ತೊಂದರೆಗಳಿವೆ. ಇದು ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಒಂದು ಪ್ಯಾಕೆಟ್ ನಲ್ಲಿರುವ ಮ್ಯಾಗಿ ಸುಮಾರು 385 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ. ನೀವು ಸೇವಿಸಿದ 350ಕ್ಕೂ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸುಮಾರು ಅರ್ಧ ಘಂಟೆಯವರೆಗೆ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

ಇದರಲ್ಲಿ ಕ್ಯಾಲೋರಿಗಳು ಅಲ್ಲದೆ ಶೇ. 14.6ರಷ್ಟು ಕೊಬ್ಬು ಮತ್ತು ಶೇ.3.4ರಷ್ಟು ಸಕ್ಕರೆಯ ಅಂಶವನ್ನು ಹೊಂದಿರುತ್ತದೆ. ಮ್ಯಾಗಿಯನ್ನು ಜೀರ್ಣಿಸಿಕೊಳ್ಳಲು ಸುಲಭವಲ್ಲ, ಯಾಕಂಂದ್ರೆ ಇದನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಾಗಾಗಿ ಇದು ಬೇಗನೆ ಜೀರ್ಣವಾಗೋದಿಲ್ಲ. ಮ್ಯಾಗಿ ಅಥವಾ ನೂಡಲ್ಸ್ ಕರುಳಿನಲ್ಲಿ ಸಿಲುಕಿಕೊಳ್ಳುತ್ತದೆ ಮತ್ತು ಯಕೃತ್ತು ಮತ್ತು ಮೂತ್ರಪಿಂಡಕ್ಕೆ ಹಾನಿಯುಂಟು ಮಾಡುತ್ತದೆ. ಇದಿಷ್ಟೇ ಅಲ್ಲದೆ, ಪ್ರತಿದಿನ ನೂಡಲ್ಸ್ ತಿಂದರೆ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.

ಈ ಮ್ಯಾಗಿ ಆರೋಗ್ಯವನ್ನು ನಾಶ ಮಾಡುತ್ತದೆ. ಅಧಿಕ ಮ್ಯಾಗಿ ಸೇವನೆಯಿಂದ ಕೀಲು ನೋವು, ಜ್ಞಾಪಕಶಕ್ತಿಯ ಸಮಸ್ಯೆಗಳು ಮತ್ತು ಬುದ್ಧಿಶಕ್ತಿ ಕೂಡ ಕಡಿಮೆ ಆಗುವ ಸಾಧ್ಯತೆ ಹೆಚ್ಚಿವೆ. ಅಲ್ಲದೆ, ಆಘಾತಕಾರಿ ಸಂಗತಿ ಎಂದರೆ, ಈ ಇನ್‌ಸ್ಟಂಟ್ ನೂಡಲ್ಸ್‌ನಲ್ಲಿ ಸೀಸ ಅಥವಾ ಗಾಜಿನ ಅಂಶವಿದೆ ಎಂಬುದು ಈಗಾಗಲೇ ಅನೇಕ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ.

ಇದರಲ್ಲಿನ ಸೀಸವು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಅಸ್ವಸ್ಥಗೊಳಿಸುತ್ತದೆ. ಹಾಗಾಗಿ ಈ ನೂಡಲ್ಸ್ ಸೇವನೆಯಿಂದ ನರಗಳಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು. ಹಲವು ರೀತಿಯಲ್ಲಿ ಇದು ಆರೋಗ್ಯಕ್ಕೆ ಮಾರಕವಾಗಿದೆ. ಎರಡು ನಿಮಿಷಗಳಲ್ಲಿ ತಯಾರಾಗುವುದು ಅಷ್ಟೇ ಬೇಗನೆ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಮ್ಯಾಗಿ ಅಥವಾ ಇನ್‌ಸ್ಟಂಟ್ ನೂಡಲ್ಸ್‌ಗಳನ್ನು ಸೇವಿಸದೇ ಇರುವುದು ಒಳ್ಳೆಯದು. ಇದರಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಿ.

Leave A Reply

Your email address will not be published.