SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ನಿಮ್ಮ ಖಾತೆ ಇದೆಯೇ ? ಹಾಗಾದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ
ಸದ್ಯ ನೀವು ಎಸ್ ಬಿ ಐ , ಪಿ ಎನ್ ಬಿ , ಬ್ಯಾಂಕ್ ಆಫ್ ಬರೋಡ,HDFC ಮತ್ತು ICICI ಬ್ಯಾಂಕ್ ಸೇರಿದಂತೆ ಯಾವುದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿದ್ದರೆ ನಿಮಗೊಂದು ಹೊಸ ಸುದ್ದಿ ಇದೆ . ಪ್ರಸ್ತುತ, ದೇಶದ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳು ಗ್ರಾಹಕರಿಗೆ ಸ್ಥಿರ ಠೇವಣಿ ಸೌಲಭ್ಯವನ್ನು ಒದಗಿಸುತ್ತಿದ್ದು ನಿಮ್ಮ ಹಣದಿಂದ ನೀವು ಕೇವಲ 6 ತಿಂಗಳಲ್ಲಿ ಉತ್ತಮ ಆದಾಯವನ್ನು ಪಡೆಯಬಹುದು ಎಂದು ಮಾಹಿತಿ ಇದೆ.
ನಿಮ್ಮ ಹಣದ ಸುರಕ್ಷತೆಗಾಗಿ ಎಸ್‌ಬಿಐ, PNB, HDFC ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ICICI ನಂತಹ ದೊಡ್ಡ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ಬ್ಯಾಂಕ್‌ಗಳಲ್ಲಿ ಎಫ್‌ಡಿ ಮೇಲೆ ಯಾವ ಬ್ಯಾಂಕ್ ಎಂದು ಬಡ್ಡಿ ನೀಡುತ್ತದೆ ಎಂಬ ಮಾಹಿತಿ ಇಲ್ಲಿದೆ.
ಎಸ್‌ಬಿಐ ಎಫ್‌ಡಿ ದರಗಳು:
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವು ಸ್ಥಿರ ಠೇವಣಿ ಹೊಂದಿದ್ದರೆ, ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಆರು ತಿಂಗಳ ಎಫ್‌ಡಿ ಮೇಲೆ 4.5% ಬಡ್ಡಿಯನ್ನು ನೀಡುತ್ತದೆ. ಅದೇ ಸಮಯದಲ್ಲಿ ಹಿರಿಯ ನಾಗರಿಕರಿಗೆ 5% ಬಡ್ಡಿಯನ್ನು ಒದಗಿಸುತ್ತದೆ.
ಪಿ ಎನ್ ಬಿ ಎಫ್‌ಡಿ ದರಗಳು:
ಪಿಎನ್ಬಿ ಬ್ಯಾಂಕ್‌ನಲ್ಲಿ ಆರು ತಿಂಗಳ ಎಫ್‌ಡಿ ಮೇಲೆ ಸಾಮಾನ್ಯ ನಾಗರಿಕರಿಗೆ 4.5% ಬಡ್ಡಿ ಲಭ್ಯವಿದ್ದರೆ, ಹಿರಿಯ ನಾಗರಿಕರಿಗೆ 5% ಬಡ್ಡಿ ನೀಡಲಾಗುತ್ತದೆ.
ಬ್ಯಾಂಕ್ ಆಫ್ ಬರೋಡ ಸ್ಥಿರ ಠೇವಣಿ ದರಗಳು:
ಎಸ್‌ಬಿಐ, ಪಿಎನ್ಬಿ ಮಾತ್ರವಲ್ಲದೆ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಲ್ಲಿಯೂ ಸಹ ಆರು ತಿಂಗಳ ಸ್ಥಿರ ಠೇವಣಿಯಲ್ಲಿ ಸಾಮಾನ್ಯ ನಾಗರಿಕರಿಗೆ 4.5% ಬಡ್ಡಿ ಲಭ್ಯವಿದ್ದರೆ, ಹಿರಿಯ ನಾಗರಿಕರಿಗೆ 5% ಬಡ್ಡಿ ನೀಡಲಾಗುತ್ತದೆ.
HDFC ಮತ್ತು ICICI ಬ್ಯಾಂಕ್ ಎಫ್‌ಡಿ ದರಗಳು:
ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲದೆ ಖಾಸಗಿ ವಲಯದ ಬ್ಯಾಂಕ್‌ಗಳು ಕೂಡ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಮೇಲೆ ಉತ್ತಮ ಬಡ್ಡಿಯನ್ನು ನೀಡುತ್ತವೆ. HDFC ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 6 ತಿಂಗಳವರೆಗೆ 4.5% ಬಡ್ಡಿ ಸೌಲಭ್ಯವನ್ನು ನೀಡುತ್ತದೆ. ಇದೇ ಸಮಯದಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಆರು ತಿಂಗಳ ಸ್ಥಿರ ಠೇವಣಿ ಮೇಲೆ 4.75% ಬಡ್ಡಿಯನ್ನು ನೀಡುತ್ತದೆ.
ಈ ಮೇಲಿನ ಬ್ಯಾಂಕ್ ಗಳಲ್ಲಿ ಸದ್ಯ ನಿಮ್ಮ ಹಣ ಉಳಿತಾಯ, ಹೂಡಿಕೆ ಮತ್ತು ಗ್ಯಾರೆಂಟಿ ಲಾಭ ಪಡೆಯಲು ಸ್ಥಿರ ಠೇವಣಿ ಗೆ ಉತ್ತಮ ಮಾರ್ಗವಾಗಿದ್ದು ಇದರಲ್ಲಿ ಗ್ರಾಹಕರ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ ಗ್ಯಾರಂಟಿ ರಿಟರ್ನ್ಸ್ ಕೂಡ ಲಭ್ಯವಿರುತ್ತವೆ.