Tech Tips: ಇಂಟರ್ನೆಟ್ ಸ್ಪೀಡ್ ಕಡಿಮೆ ಆಗಿದ್ರೆ ಬೇಸರ ಬಿಡಿ, ಈ ಈಜಿ ಟ್ರಿಕ್ ಯೂಸ್ ಮಾಡಿ ನೋಡಿ
ಇಂದಿನ ಕಾಲದಲ್ಲಿ ಮೊಬೈಲ್ ಬಳಕೆ ಮಾಡದೇ ಇರುವವರೆ ವಿರಳ. ಅದರಲ್ಲಿಯೂ ಮೊಬೈಲ್ ಎಂಬ ಮಾಯಾವಿ ಹೆಚ್ಚಿನವರ ಪಾಲಿನ ಅವಿಭಾಜ್ಯ ಭಾಗವಾಗಿ ಬಿಟ್ಟಿದೆ. ಆದರೆ , ಹೆಚ್ಚಿನವರಿಗೆ ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಇಂಟರ್ನೆಟ್ ಸಮಸ್ಯೆ ತಲೆದೋರುತ್ತದೆ. ಇಂಟರ್ನೆಟ್ ಸ್ಪೀಡ್ ಮಾಡುವ ಸಲುವಾಗಿ ಏನೇನೋ ಪ್ರಯತ್ನ ನಡೆಸಿ ವಿಫಲರಾಗಿದ್ದರೆ ನಿಮಗಾಗಿ ಸಿಂಪಲ್ ಟಿಪ್ಸ್ ನಾವು ಹೇಳ್ತೀವಿ ಕೇಳಿ!!
ನಾವು ಹೇಳುವ ಸಿಂಪಲ್ ಟ್ರಿಕ್ಸ್ ಸರಿಯಾಗಿ ಫಾಲೋ ಮಾಡಿದ್ರೆ ನಿಮ್ಮ ಇಂಟರ್ನೆಟ್ ಸ್ಪೀಡ್ ಆಗೋದು ಗ್ಯಾರಂಟಿ!!.ಹೇಳಿ ಕೇಳಿ ಇದು ಡಿಜಿಟಲ್ ಯುಗ… ಮೊಬೈಲ್ ಎಂಬ ಮಾಯಾವಿಯ ಅನ್ವೇಷಣೆಯ ಬಳಿಕ ಎಲ್ಲೆಡೆ ಬಳಕೆಯ ವಿಚಾರದಲ್ಲಿ ಮಹತ್ತರ ಬದಲಾವಣೆಯಾಗಿ, ಈಗ ಮೊಬೈಲ್ ಫೋನ್ ಬಳಕೆ ಹೆಚ್ಚಾಗಿರುದರಿಂದ ಇಂಟರ್ನೆಟ್ ಬಳಕೆ ಕೂಡ ವೇಗವಾಗಿ ಏರಿಕೆ ಕಾಣುತ್ತಿದೆ.
ಕೆಲ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಬಳಕೆ ಮಾಡುವಾಗ ಇಂಟರ್ನೆಟ್ (Internet) ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಸ್ಮಾರ್ಟ್ಫೋನ್ ಬಳಕೆದಾರರಲ್ಲಿ ಹೆಚ್ಚಾಗಿ ನೆಟ್ವರ್ಕ್ ಸಮಸ್ಯೆ (network Problem) ಉಂಟಾಗುತ್ತದೆ. ಎಷ್ಟೇ ಡೇಟಾ ಪ್ಯಾಕ್ ಇದ್ದರೂ ಕೆಲವೊಂದಿ ಬಾರಿ ಇಂಟರ್ನೆಟ್ ಸರಿ ವರ್ಕ್ ಆಗೋಲ್ಲ ಎನ್ನುವ ಮಾತು ಹೆಚ್ಚಾಗಿ ನಾವು ಕೇಳಿರುತ್ತೇವೆ. ಹೆಚ್ಚಾಗಿ ಏನಾದರೂ ತುರ್ತು ಕೆಲಸದಲ್ಲಿದ್ದಾಗ, ಇಲ್ಲವೇ ಏನಾದ್ರೂ ಬ್ರೌಸ್ ಮಾಡುತ್ತಿರುವ ಸಂದರ್ಭ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ .ಆದರೆ ಇದಕ್ಕೆ ಕೆಲವೊಂದು ಕಾರಣಗಳಿವೆ. ಕೆಲವೊಮ್ಮೆ ಮೊಬೈಲ್ನ ಸೆಟ್ಟಿಂಗ್ಸ್ನಿಂದ ನಿಮ್ಮ ಇಂಟರ್ನೆಟ್ ಅನ್ನು ಸ್ಪೀಡ್ ಮಾಡಬಹುದು.
ನಿಮ್ಮ ಸ್ಮಾರ್ಟ್ಫೋನ್ನ ಇಂಟರ್ನೆಟ್ ಸ್ಪೀಡ್ ಮಾಡಲು ಹೀಗೆ ಮಾಡಿ:
ಮೊಬೈಲ್ ಅನ್ನು ರೀಸ್ಟಾರ್ಟ್ ಮಾಡಿ:
ನಿಮ್ಮ ಮೊಬೈಲ್ನಲ್ಲಿ ಡೇಟಾ ಇದ್ದರೂ ಇಂಟರ್ನೆಟ್ ಸರಿಯಾಗಿ ಕೆಲಸಮಾಡುತ್ತಿಲ್ಲ ಎನ್ನುವ ಸಂದರ್ಭದಲ್ಲಿ ಮೊದಲು ನಿಮ್ಮ ಸ್ಮಾರ್ಟ್ಫೋನ್ ಅನ್ನು ರೀಸ್ಟಾರ್ಟ್ ಮಾಡಬೇಕು. ಇದರಿಂದ ನಿಮ್ಮ ಸ್ಮಾರ್ಟ್ಫೋನ್ ಫ್ರೀ ಆಗುತ್ತದೆ. ಕೆಲವೊಮ್ಮೆ ಮೊಬೈಲ್ ಬಳಕೆ ಹೆಚ್ಚಾದಾಗ ಈ ರೀತಿಯ ತೊಂದರೆಗಳು ಎದುರಾಗುತ್ತದೆ. ಹಾಗಿದ್ದಾಗ ರೀಸ್ಟಾರ್ಟ್ ಮಾಡುವುದು ಒಳ್ಳೆಯದು.
ಮೊಬೈಲ್ನ ನೆಟ್ವರ್ಕ್ ಆಯ್ಕೆಯನ್ನು ಬದಲಾಯಿಸಿ:
ಪ್ರತಿಯೊಂದು ಮೊಬೈಲ್ನಲ್ಲಿ ನೆಟ್ವರ್ಕ್ ಆಯ್ಕೆಗಳು ಇರುತ್ತವೆ. ಆದರೆ ಬಳಕೆದಾರರ ಸ್ಥಳಗಳಿಗೆ ಅನುಸಾರ ಅದು ಕಾರ್ಯನಿರ್ವಹಿಸುತ್ತದೆ. ಕೆಲವರು ತಮ್ಮ ಮೊಬೈಲ್ಗಳಲ್ಲಿ 2 ಸಿಮ್ಗಳನ್ನು ಹೊಂದಿರುತ್ತಾರೆ. ನೆಟ್ವರ್ಕ್ ಸಮಸ್ಯೆ ಎದುರಾದಾಗ ಬಳಕೆದಾರರಿಗೆ ಸೂಕ್ತ ಎನಿಸುವ ನೆಟ್ವರ್ಕ್ ಅನ್ನು ಸೆಲೆಕ್ಟ್ ಮಾಡುವುದು ಒಳ್ಳೆಯದು.
ಮೊಬೈಲ್ನಲ್ಲಿರುವ ಸಿಮ್ ಅನ್ನು ಒಮ್ಮೆ ಪರಿಶೀಲಿಸಿ:
ಕೆಲವೊಮ್ಮೆ ನಮ್ಮ ಮೊಬೈಲ್ಗಳು ಕೆಳಗೆ ಬೀಳುತ್ತವೆ. ಆಗ ಸಿಮ್ನ ಜಾಗ ಬದಲಾವಣೆಯಾಗುವ ಸಾಧ್ಯತೆ ಇದ್ದು, ಕೆಲವೊಂದು ಸಂದರ್ಭದಲ್ಲಿ ನೆಟ್ವರ್ಕ್ ಇಲ್ಲದೇ ಇರುವಾಗ ಸಿಮ್ ಅನ್ನು ಒಮ್ಮೆ ತೆಗೆದು ಮತ್ತೆ ಸೇರಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ನೆಟ್ವರ್ಕ್ ಸರಿಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.
ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿ:
ನಿಮ್ಮ ಮೊಬೈಲ್ನಲ್ಲಿ ನೆಟ್ವರ್ಕ್ ಸಮಸ್ಯೆ ಎದುರಾದಾಗ ಏರೋಪ್ಲೇನ್ ಮೋಡ್ ಅನ್ನು ಆನ್ ಮಾಡಿಕೊಂಡು ಆದರೆ ಸ್ವಲ್ಪ ಸಮಯದ ಬಳಿಕ ಆಫ್ ಮಾಡಿ. ಹೀಗೆ ಮಾಡಿದ ಮೇಲೆ ನಿಮ್ಮ ಮೊಬೈಲ್ ನೆಟ್ವರ್ಕ್ ಸೆಟ್ಟಿಂಗ್ಗಳು ಒಮ್ಮೆ ಸರಿಯಾಗುವ ಸಾಧ್ಯತೆ ಇದೆ.
ಸೆಟ್ಟಿಂಗ್ಸ್ನಲ್ಲಿ ನೆಟ್ವರ್ಕ್ ಲಿಮಿಟ್ ಅನ್ನು ಚೆಕ್ ಮಾಡಬೇಕು:
ಪ್ರತಿಯೊಂದು ಸ್ಮಾರ್ಟ್ಫೋನ್ಗಳಲ್ಲಿ ಅದರದೇ ಆದಂತಹ ನೆಟ್ವರ್ಕ್ ಲಿಮಿಟ್ಗಳ ಸೆಟ್ಟಿಂಗ್ಗಳಿರುತ್ತದೆ. 4ಜಿ, 3ಜಿ ಈ ರೀತಿಯ ನೆಟ್ವರ್ಕ್ ಅನ್ನು ಆಯ್ಕೆ ಮಾಡಿದ್ದಾಗ ಅದರ ವೇಗ ಕೂಡ ಅಷ್ಟೇ ಮಿತಿಯಲ್ಲಿರುತ್ತದೆ. ಅದಕ್ಕಾಗಿ ಅದರ ಮಿತಿ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಅವಶ್ಯಕ.
ಮೊಬೈಲ್ ಅಪ್ಡೇಟ್ ಮಾಡಿದ್ದೀರಾ ಎಂದು ಪರೀಕ್ಷಿಸಿ:
ಸ್ಮಾರ್ಟ್ಫೋನ್ ಹೊಂದಿರುವವರು ಸಾಫ್ಟ್ವೇರ್ ಅಪ್ಡೇಟ್ ಮಾಡುವುದು ಅವಶ್ಯಕ. ಇದರಿಂದ ಸ್ಮಾರ್ಟ್ಫೋನ್ನಲ್ಲಿರುವಂತ ಫೀಚರ್ಸ್ ಇನ್ನೂ ಗುಣಮಟ್ಟದಲ್ಲಿ ಕೆಲಸ ಮಾಡಲು ಸಹಕಾರಿಯಾಗುತ್ತದೆ. ಹಾಗೇ ಈ ಸ್ಮಾರ್ಟ್ಫೋನ್ಗಳಲ್ಲಿ ಕೆಲವೊಮ್ಮೆ ಇಂಟರ್ನೆಟ್ ಸಮಸ್ಯೆಗಳು ಸಾಫ್ಟ್ವೇರ್ ಅಪ್ಡೇಟ್ ಆಗದೇ ಇರುವ ಸಂದರ್ಭಗಳಲ್ಲಿ ಎದುರಾಗುತ್ತದೆ. ಇದಕ್ಕೆ ಮೊದಲು ಬಳಕೆದಾರರು ಸಾಫ್ಟ್ವೇರ್ ಅಪ್ಡೇಟ್ ಆಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಹೀಗೆ ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿ, ಇಂಟರ್ನೆಟ್ ಸ್ಪೀಡ್ ವರ್ಕ್ ಮಾಡೋದನ್ನು ಗಮನಿಸ ಬಹುದು.