BCB Recruitment 2023 : ಭಾರತ್ ಸಹಕಾರಿ ಬ್ಯಾಂಕ್ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಜಯನಗರ, ಬೆಂಗಳೂರು ಇದರಲ್ಲಿ ಖಾಲಿ ಇರುವ ಈ ಕೆಳಕಂಡ 22 ಹುದ್ದೆಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ದಿನಾಂಕ : 11.01.2023 ರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ :
ಮುಖ್ಯ ಕಾರ್ಯನಿರ್ವಹಣಾಧಿಕಾರಿ- 1
ಹಿರಿಯ ವ್ಯವಸ್ಥಾಪಕರು – 1
ಕಂಪ್ಯೂಟರ್ ಮ್ಯಾನೇಜರ್ (ಸಿಸ್ಟಂ ಅಡ್ಮಿನಿಸ್ಟ್ರೇಟರ್ ಮುಖ್ಯಸ್ಥ)- 1
ವ್ಯವಸ್ಥಾಪಕರು- 3
ಅಕೌಂಟೆಂಟ್- 2
ಅಸಿಸ್ಟೆಂಟ್ ಅಕೌಂಟೆಂಟ್ – 2
ದ್ವಿತೀಯ ದರ್ಜೆ ಸಹಾಯಕರು- 2
ಅಟೆಂಡರ್ -10
ಒಟ್ಟು ಹುದ್ದೆಗಳ ಸಂಖ್ಯೆ : 22
ಅರ್ಜಿ ನಮೂನೆ/ಮೀಸಲಾತಿ/ವಿದ್ಯಾರ್ಹತೆ/ವಯೋಮಿತಿ/ಅರ್ಜಿ ಶುಲ್ಕ/ ಆಯ್ಕೆ ವಿಧಾನ/ ಲಗತ್ತಿಸಬೇಕಾದ ಪ್ರಮಾಣ ಪತ್ರಗಳು, ನಿಬಂಧನೆಗಳು ಮತ್ತು ಸೂಚನೆಗಳು ಇತ್ಯಾದಿ ವಿವರಗಳು ಬ್ಯಾಂಕಿನ Website : www.bcbbank.co ರಲ್ಲಿ ಲಭ್ಯವಿರುತ್ತದೆ.
ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 27-01-2023 ಸಂಜೆ 5.00 ಘಂಟೆಯೊಳಗೆ ಖುದ್ದಾಗಿ/ ಅಂಚೆ/ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ದಿನಾಂಕ 25.05.2022ರ ನೇಮಕಾತಿ ಪ್ರಕಟಣೆಯನುಸಾರ ಮೇಲ್ಕಂಡ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.