ಮನೆಯಿಂದ ವಾಸ್ತು ದೋಷ ತೆಗೆದುಹಾಕುವ ಈ 5 ಪವರ್ ಫುಲ್ ಟಿಪ್ಸ್‌ಗಳನ್ನು ಪಾಲಿಸಿ, ನೆಮ್ಮದಿಯಾಗಿರಿ

ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಬೇಕು ಮತ್ತು ಯಾವ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಎಂಬುದರ ಬಗ್ಗೆ ವಾಸ್ತುಶಾಸ್ತ್ರ ಹೇಳುತ್ತದೆ. ಅದಾಗ್ಯೂ ಸಹ ಅನೇಕ ಅಡಚಣೆಗಳಿಂದ ಕೆಲವೊಂದು ನಿಯಮಗಳನ್ನು ಪಾಲಿಸಲು ಸಾಧ್ಯವಾಗುವುದಿಲ್ಲ. ಆಗ ಉಂಟಾಗುವಂತಹ ವಾಸ್ತು ದೋಷವನ್ನು ಪರಿಹಾರ ಮಾಡುವುದೂ ಸಹ ಮುಖ್ಯವಾಗುತ್ತದೆ. ನಿಮ್ಮ ಮನೆಯಲ್ಲಿನ ವಾಸ್ತುದೋಷವನ್ನು ಹೇಗೆ ತೆಗೆದು ಹಾಕಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ನೀವು ಹೊಸ ಮನೆಗೆ ಹೊಸ ಸ್ಥಳಕ್ಕೆ ಹೋದಾಗ ಅಲ್ಲಿ ಕೆಲವು ನಕಾರಾತ್ಮಕ ಶಕ್ತಿಯನ್ನು ಅನುಭವಿಸಬಹುದು. ಇದಕ್ಕೆ ಕಾರಣ ಆ ಸ್ಥಳದಲ್ಲಿನ ವಾಸ್ತು ದೋಷವೂ ಇರಬಹುದು. ನಾವು ಜೀವಿಸುವ ಪ್ರಕೃತಿಯೊಂದಿಗೆ ಪ್ರತಿಯೊಬ್ಬ ವ್ಯಕ್ತಿಯೂ ಸಂಪರ್ಕ ಹೊಂದಿರುತ್ತಾನೆ. ಸುಲಭವಾಗಿ ಇದನ್ನೇ ವಾಸ್ತು ಶಾಸ್ತ್ರ ಎಂದೂ ಸಹ ಹೇಳಬಹುದು. ಅದಾಗ್ಯೂ, ಜೀವನದಲ್ಲಿನ ಕೆಲವು ವ್ಯತ್ಯಾಸಗಳು ಮತ್ತು ಅನಿಶ್ಚಿತತೆಗಳು ಇದ್ದಾಗ ಅದನ್ನು ವಾಸ್ತು ದೋಷ ಎಂದು ಕರೆಯಲಾಗತ್ತದೆ.

ತಮ್ಮ ಮನೆಗಳ ವಾಸ್ತು ದೋಷವನ್ನು ಸರಿಪಡಿಸಲು ಮತ್ತು ಬಾಹ್ಯವಾಗಿ ಬರುವಂತಹ ನಕಾರಾತ್ಮಕ ಶಕ್ತಿಗಳನ್ನು ತೊಡೆದುಹಾಕಲು ಹಲವು ಮಾರ್ಗಗಳಿವೆ. ಅಂತಹ ಕೆಲವು ಮಾರ್ಗಗಳನ್ನು ನೀವಿಲ್ಲಿ ನೋಡಬಹುದು.

ಸಮುದ್ರದ ಉಪ್ಪನ್ನು ಬಳಸುವುದು:
ಸಮುದ್ರದ ಉಪ್ಪು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಮುದ್ರದ ಉಪ್ಪನ್ನು ನಿಮ್ಮ ಮನೆಯ ಮೂಲೆಗಳಲ್ಲಿ ಇಟ್ಟು ನೋಡಿ. ಅದು ನಿಮ್ಮ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಸಾಮಾನ್ಯವಾಗಿ ಕಸ ಹೊಡೆದು ನೆಲವನ್ನು ಒರೆಸುವಾಗ ನೀವು ಸಮುದ್ರದ ಉಪ್ಪನ್ನು ನೀರಿನೊಂದಿಗೆ ಬೆರೆಸಬಹುದು.

ಗಾಳಿ ಗಂಟೆಗಳು:
ಗಾಳಿ ಗಂಟೆಗಳು (ವಿಂಡ್ ಚೈಮ್‌) ನಿಮ್ಮ ಮನೆಯನ್ನು ಆಕರ್ಷಕ ಮಾಡುತ್ತವೆ. ಅದರ ಜೊತೆಗೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದಕ್ಕೆ ಸಹ ಅವು ಪ್ರಯೋಜನಕಾರಿಯಾಗಿವೆ. ನಿಮ್ಮ ಪ್ರವೇಶ ದ್ವಾರ ಅಥವಾ ಉದ್ಯಾನದಲ್ಲಿ ಆರು ಅಥವಾ ಎಂಟು ರಾಡ್‌ಗಳನ್ನು ಹೊಂದಿರುವ ವಿಂಡ್ ಚೈಮ್ ಅಳವಡಿಸಿ.

ಕನ್ನಡಿಗಳನ್ನು ಬಳಸುವುದು
ಕನ್ನಡಿಗಳು ನಿಮ್ಮ ಮನೆಗೆ ಅಲಂಕಾರವಾಗಿ ಕಾಣಿಸುವುದಿಲ್ಲ. ಆದರೆ, ಕನ್ನಡಿಗಳು ಮನೆಗೆ ಧನಾತ್ಮಕ ಶಕ್ತಿಯನ್ನು ತರಲು ಸಹಕಾರಿ ಆಗುತ್ತವೆ ಎನ್ನುತ್ತದೆ ವಾಸ್ತುಶಾಸ್ತ್ರ. ಕನ್ನಡಿಗಳ ಸರಿಯಾದ ಆಕಾರವನ್ನು ಬಳಸುವುದು ಮತ್ತು ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸುವುದು ನಿಮ್ಮ ಜಾಗಕ್ಕೆ ಪಾಸಿಟಿವ್ ಎನರ್ಜಿ ತುಂಬುತ್ತದೆ. ಆದರೆ, ಕನ್ನಡಿಯನ್ನು ಮುಖ್ಯ ದ್ವಾರದ ಎದುರಾಗಿ ಇಡದಂತೆ ನೋಡಿಕೊಳ್ಳಿ.

ಸೀಳಿದ ಕನ್ನಡಿ, ಗಡಿಯಾರ ತೆಗೆದುಹಾಕಿ:
ಮನೆಯಲ್ಲಿ ಸೀಳಿದ ಅಥವಾ ಮುರಿದ ಹೋದ ಕನ್ನಡಿಗಳು ಇದ್ದರೆ ಅವು ಕೆಟ್ಟ ವಸ್ತುಗಳು ಎಂದು ಪರಿಗಣಿಸಬೇಕಾಗುತ್ತದೆ. ಕನ್ನಡಿಗಳು ತಮ್ಮ ಮುಂದೆ ಇರುವುದನ್ನು ಪ್ರತಿಬಿಂಬಿಸುತ್ತವೆ. ಆದೇ ರೀತಿ ಸೀಳಿದ ಅಥವಾ ಮುರಿದ ಕನ್ನಡಿಗಳು ಮುಂದೆ ಒಡೆಯಬೇಕಾದ ವಸ್ತುಗಳನ್ನು ಪ್ರತಿಬಿಂಬಿಸುತ್ತವೆ ಎಂದು ಭಾವಿಸಲಾಗುತ್ತದೆ. ಆದ್ದರಿಂದ, ನಿಮ್ಮ ಮನೆಯಿಂದ ಒಡೆದ ಕನ್ನಡಿಗಳನ್ನು ತೆಗೆದುಹಾಕಿ. ಅಲ್ಲದೆ, ಮುರಿದುಹೋಗಿರುವ ಮತ್ತು ಕೆಲಸ ಮಾಡದ ಗಡಿಯಾರಗಳನ್ನು ಸಹ ಮನೆಯಿಂದ ಹೊರಹಾಕಿ. ಇವು ನಕಾರಾತ್ಮಕ ಶಕ್ತಿಯನ್ನು ತರುತ್ತವೆ.

ಸ್ಫಟಿಕ ಚೆಂಡುಗಳನ್ನು ಬಳಸುವುದು:
ಹೊಳೆಯುವ ಸ್ಫಟಿಕದ ಚೆಂಡುಗಳನ್ನು ಮನೆ ಅಥವಾ ಕಚೇರಿ ಸ್ಥಳದಲ್ಲಿ ಇರಿಸಿದಾಗ ಅವುಗಳನ್ನು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಚೆಂಡುಗಳು ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಮನೆಯೊಳಗಡೆ ಧನಾತ್ಮಕ ಶಕ್ತಿ ಇರಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ.

Leave A Reply

Your email address will not be published.