ಈ ಅಣಬೆಯ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ! ಜೇನುಗೂಡು ಆಕಾರದ ಈ ಮಶ್ರೂಮ್ ಪ್ರಧಾನಿ ಮೋದಿಯವರ ಫೇವರೇಟ್ ಅಂತೆ!
ಅಣಬೆ ಅಥವಾ ಮಶ್ರೂಮ್ ಎಂದರೆ ಹಲವರಿಗೆ ಬಲು ಇಷ್ಟ. ಇದರಿಂದ ನಾನಾ ವಿಧವಾದ ರುಚಿಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ. ಈ ಅಣಬೆಗಳಲ್ಲಿ ಹಲವಾರು ಬಗೆಗಳಿವೆ. ಇವು ಮಾರುಕಟ್ಟೆಯಲ್ಲಿಯೂ ಹೆಚ್ಚು ಬೇಡಿಕೆ ಪಡೆದಿವೆ. ಆದರೆ ಇಲ್ಲೊಂದು ಅಣಬೆಯ ಬೆಲೆಯನ್ನು ನೀವು ಕೇಳಿದರೆ ದಂಗಾಗಿ ಹೋಗುತ್ತೀರಿ!! ಅಲ್ಲದೆ ಪ್ರಧಾನಿ ಮೋದಿಯವರಿಗೆ ಇದು ತುಂಬಾ ಫೇವರೇಟ್ ಅಂತೆ.
ಅಣಬೆ ಎಷ್ಟೇ ದುಬಾರಿಯಾದ್ರು ಕೆ.ಜಿ.ಗೆ 200-500 ರೂಪಾಯಿ ಇರಬಹುದು. ಅದಕ್ಕಿಂತಲೂ ದುಬಾರಿಯೆಂದ್ರೆ ಸಾವಿರದ ಗಡಿ ದಾಟೋದಿಲ್ಲ ಎಂಬುದು ಎಲ್ಲರ ಲೆಕ್ಕಾಚಾರ. ಆದ್ರೆ ಹಿಮಾಲಯದ ತಪ್ಪಲಲ್ಲಿ ಬೆಳೆಯೋ ವಿಶಿಷ್ಟ ಪ್ರಭೇದದ ಅಣಬೆಯ ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ. ಗುಚ್ಚಿ ಎಂದು ಕರೆಯಲ್ಪಡೋ ಈ ಕಾಡು ಅಣಬೆ ಬೆಲೆ ಎಷ್ಟು ಗೊತ್ತಾ? ಒಂದು ಕೆ.ಜಿಗೆ 30ಸಾವಿರ ರೂ.! ಈ ಅಣಬೆ ಬೆಲೆಯಲ್ಲಿ ಕೇಸರಿ ಹಾಗೂ ಡಾರ್ಜಲಿಂಗ್ ಕಾಫಿಯನ್ನೂ ಮೀರಿಸುತ್ತದೆ!
ಅನೇಕ ಜನರು ಜೇನುಗೂಡಿನ ಆಕಾರದಲ್ಲಿರುವ ಈ ಗುಚ್ಚಿ ಅಣಬೆಯನ್ನು ಪರ್ವತದಲ್ಲಿ ಬೆಳೆಯುವ ಮಶ್ರೂಮ್ ಎಂದು ಕರೆಯುತ್ತಾರೆ. ಹಾಗಾದರೆ ಈ ಅಣಬೆ ಬೆಳೆಯೋದು ಹೇಗೆ? ಎಂಥ ವಾತಾವರಣ ಬೇಕು? ಬಹುಶಃ ಇದರ ವ್ಯವಸಾಯದ ವೆಚ್ಚ ಹೆಚ್ಚಿರಬೇಕು ಅದಕ್ಕೇ ಇಷ್ಟು ದುಬಾರಿ ಬೆಲೆ ಎಂಬೆಲ್ಲ ಯೋಚನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರಬಹುದು. ಆದರೆ ಈ ಅಣಬೆಗಳನ್ನು ಬೆಳೆಸಲಾಗುವುದಿಲ್ಲ, ಇದು ಸ್ವತಃ ಪ್ರಕೃತಿಯಲ್ಲಿ ಅದಾಗಿಯೇ ಹುಟ್ಟುತ್ತದೆ. ಈ ಪೌಷ್ಟಿಕ ಮಶ್ರೂಮ್ ಅನ್ನು ಅನೇಕ ಪ್ರಾಚೀನ ಆಯುರ್ವೇದ ಪುಸ್ತಕಗಳಲ್ಲೂ ಉಲ್ಲೇಖಿಸಲಾಗಿದೆ.
ಹಿಮಾಲಯದ ತಪ್ಪಲಿನಲ್ಲಿರೋ ಹಿಮಾಚಲ ಪ್ರದೇಶ,ಉತ್ತರಾಂಚಲ ಹಾಗೂ ಜಮ್ಮು ಮತ್ತು ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ, ಎತ್ತರ ಪರ್ವತ ಪ್ರದೇಶದ ಶೀತ ವಾತಾವರಣದ ಕಾಡುಗಳಲ್ಲಿ ಮಾತ್ರ ಈ ಅಣಬೆ ಬೆಳೆಯುತ್ತದೆ. ಸರಾಸರಿ 2-10ಸೆಂ.ಮೀ. ಅಗಲವಾಗಿರೋ ಈ ಅಣಬೆ ಫೆಬ್ರವರಿಯಿಂದ ಏಪ್ರಿಲ್ ತನಕ ಹಿಮಾಲಯದ ಎಲ್ಲ ಕಾಡುಗಳಲ್ಲಿ ಕಾಣಸಿಗುತ್ತದೆ. ಮಳೆಗಾಲದಲ್ಲಂತೂ ಉತ್ತಮವಾಗಿ ಬೆಳೆಯುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸೋ ಸಾಮರ್ಥ್ಯ ಗುಚ್ಚಿಗಿದೆ ಎಂದು ಹೇಳಲಾಗುತ್ತೆ. ಫ್ರಾನ್ಸ್, ಅಮೆರಿಕ, ಸ್ವಿಜರ್ಲೆಂಡ್, ಇಟಲಿ ಹಾಗೂ ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ಬಹು ಬೇಡಿಕೆಯಿದೆ. ಗುಚ್ಚಿಯಲ್ಲಿ ಪೊಟ್ಯಾಸಿಯಂ, ವಿಟಮಿನ್ಸ್ ಹಾಗೂ ಕಾಪರ್ ಅಧಿಕ ಪ್ರಮಾಣದಲ್ಲಿದೆ. ಕಬ್ಬಿಣಾಂಶ ಹಾಗೂ ವಿಟಮಿನ್ ಡಿ ಹೇರಳವಾಗಿದ್ದು, ವಿಟಮಿನ್ ಬಿ ಕೂಡ ಇದರಲ್ಲಿದೆ. ಕೊಬ್ಬು ಕಡಿಮೆ ಪ್ರಮಾಣದಲ್ಲಿದ್ದು, ನಾರಿನಂಶ ಹೆಚ್ಚಿದ್ದು, ದೇಹದಲ್ಲಿನ ಬೈಲ್ ಆಸಿಡ್‌ಗಳನ್ನು ಹೀರಿಕೊಂಡು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡುತ್ತೆ.
ಕಾರ್ಬೋಹೈಡ್ರೇಟ್ಸ್ ಹಾಗೂ ಕೊಬ್ಬಿನಂಶ ಕಡಿಮೆ ಪ್ರಮಾಣದಲ್ಲಿರೋ ಕಾರಣ ತೂಕ ಇಳಿಕೆಗೆ ಪ್ರಯತ್ನಿಸುತ್ತಿರೋರಿಗೆ ಇದು ಅತ್ಯುತ್ತಮ ಆಹಾರ. ಆಂಟಿ ಆಕ್ಸಿಡೆಂಟ್ ಇರುವ ಕಾರಣ ಗುಚ್ಚಿ ಚರ್ಮದ ಆರೋಗ್ಯಕ್ಕೂ ಉತ್ತಮ.ಗುಚ್ಚಿವಿಶೇಷವಾದ ಸುವಾಸನೆ ಹೊಂದಿದ್ದು, ಇದ್ರಿಂದ ಪಲಾವ್ ಸೇರಿದಂತೆ ಅನೇಕ ಖಾದ್ಯಗಳನ್ನು ಸಿದ್ಧಪಡಿಸುತ್ತಾರೆ. ಆದಾಗ್ಯೂ ಇದು ನಮ್ಮ ಪ್ರಧಾನಿ ಮೋದಿಯವರ ಫೇವರೇಟ್ ಫುಡ್ ಆಗಿದೆ.