ಸಂಕ್ರಾಂತಿ ಹಬ್ಬಕ್ಕೆ ಅಮೆಜಾನ್‌ ನೀಡುತ್ತಿದೆ ಭರ್ಜರಿ ಆಫರ್‌ | ಆಫರ್‌ಗಳ ಕಂಪ್ಲೀಟ್‌ ವಿವರ ಇಲ್ಲಿದೆ

ನೀವೂ ಕೂಡ ಆನ್ ಲೈನ್ ಶಾಪಿಂಗ್ ಇಷ್ಟ ಪಡುತ್ತೀರಾ ಹಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್. ಇದೀಗ ಪ್ರಸಿದ್ಧ ಇಕಾಮರ್ಸ್​ ಕಂಪೆನಿಯಾಗಿರುವ ಅಮೆಜಾನ್​ ’ಪೊಂಗಲ್​ ಮತ್ತು ಸಂಕ್ರಾಂತಿ ಶಾಪಿಂಗ್​ ಸ್ಟೋರ್​’ ಎಂಬ ಆಫರ್​​ ಸೇಲ್ ಅನ್ನು ಪ್ರಾರಂಭಿಸಿದೆ . ಹೌದು ಈ ಸೇಲ್​ನಲ್ಲಿ ಗ್ರಾಹಕರು ಗ್ಯಾಜೆಟ್ಸ್​ಗಳನ್ನು ಅಗ್ಗದ ಬೆಲೆಯಲ್ಲಿ ಹೊಂದಬಹುದಾಗಿದೆ. ಅದಲ್ಲದೆ ಈ ಆಫರ್ ​ ಜನವರಿ 18, 2023ರವರೆಗೆ ಮಾತ್ರ ಲಭ್ಯವಿರುತ್ತದೆ.

 

ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಬರಲಿದೆ. ಆ ಪ್ರಯುಕ್ತ ಜನರು ಏನಾದರೂ ಕೊಂಡುಕೊಳ್ಳಲು ಹತೊರೆಯುತ್ತಿರುತ್ತಾರೆ. ಇದೀಗ ನಿಮಗೆ ಅಮೆಜಾನ್ ಒಂದು ಒಳ್ಳೆಯ ಅವಕಾಶ ನೀಡಿದೆ. ಹಲವು ಕಂಪೆನಿಗಳ ಗ್ಯಾಜೆಟ್​ಗಳ ಮೇಲೆ ಆಫರ್​ ನೀಡಲಾಗಿದೆ. ಬನ್ನಿ ಯಾವೆಲ್ಲಾ ಕಂಪನಿಗಳೆಂದು ತಿಳಿದುಕೊಳ್ಳೋಣ.

ಈ ಸೇಲ್​ನಲ್ಲಿ ಫಿಲಿಪ್ಸ್​, ಸ್ಕೈಬ್ಯಾಗ್ಸ್​, ಸಫಾರಿ, ಕ್ಯಾಡ್ಬರಿ, ಒನ್​ಪ್ಲಸ್​, ಅಸುಸ್​ ಹಾಗೂ ಇನ್ನೂ ಹಲವಾರು ಬ್ರಾಂಡ್​ಗಳ ಮೇಲೆ ಆಫರ್​​ ಅನ್ನು ಘೋಷಿಸಿದೆ. ಅವುಗಳ ಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

ಬೌಲ್ಟ್​ ಡೈವ್​+ ಸ್ಮಾರ್ಟ್​​ವಾಚ್:
ಬೌಲ್ಟ್ ಡೈವ್+ ಸ್ಮಾರ್ಟ್​ವಾಚ್ ವಿಶೇಷವಾಗಿ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇನ್ನು ಬೌಲ್ಟ್​ ಕಂಪನಿಯ ಈ ಸ್ಮಾರ್ಟ್​​ವಾಚ್ ಅನ್ನು ಅಮೆಜಾನ್​ನಲ್ಲಿ 1,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಇದರ ಫೀಚರ್ಸ್​ ಬಗ್ಗೆ ಹೇಳುವುದಾದರೆ ಇದು 1.85 ಇಂಚಿನ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಜೊತೆಗೆ 500 ನಿಟ್ಸ್ ಬ್ರೈಟ್‌ನೆಸ್‌ ಆಯ್ಕೆಯೊಂದಿಗೆ ಈ ಡಿಸ್​ಪ್ಲೇಯು ಬರುತ್ತದೆ. ಇನ್ನು ಈ ಸ್ಮಾರ್ಟ್​ವಾಚ್​ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಒಳಗೊಂಡಿದೆ.

ರೆಡ್​ಮಿ ಸ್ಮಾರ್ಟ್​​ಟಿವಿ :
32 ಇಂಚಿನ ರೆಡ್​ಮಿ ಸ್ಮಾರ್ಟ್​​ಟಿವಿಯನ್ನು ಈ ಸೇಲ್​ನಲ್ಲಿ ಕೇವಲ 13,999 ರೂಪಾಯಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್​ಟಿವಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು ಕ್ವಾಡ್​​ಕೋರ್​ ಪ್ರೊಸೆಸರ್​ನೊಂದಿಗೆ , ಆಂಡ್ರಾಯ್ಡ್​ 11 ರಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಈ ಟಿವಿಯು ಡ್ಯುಯಲ್ ಬ್ಯಾಂಡ್​ ವೈಫೈ ಅನ್ನು ಸಹ ಬೆಂಬಲಿಸುತ್ತದೆ.

ಅಸುಸ್​ ವಿವೋ ಬುಕ್​ ಪ್ರೋ 16 :
ಅಸುಸ್‌ ವಿವೋಬುಕ್‌ ಪ್ರೋ 16 ಅನ್ನು 99,990 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ i9-11900H 11 ಜನ್ ಪ್ರೊಸೆಸರ್​ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದ ಲ್ಯಾಪ್​ಟಾಪ್​ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಒನ್​​ಪ್ಲಸ್​ ನಾರ್ಡ್​ ಸಿಇ 2 ಲೈಟ್​ 5ಜಿ ಸ್ಮಾರ್ಟ್​​ಫೋನ್:
ಒನ್‌ಪ್ಲಸ್‌ ನಾರ್ಡ್‌ ಸಿಇ 2 ಲೈಟ್‌ ಸ್ಮಾರ್ಟ್​ಫೋನ್​ 5ಜಿ ನೆಟ್​ವರ್ಕ್​ ಅನ್ನು ಬೆಂಬಲಿಸುತ್ತದೆ. ಇನ್ನು 6 ಜಿಬಿ ರ್‍ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದ ಸ್ಮಾರ್ಟ್‌ಫೋನ್‌ ಅನ್ನು ಇದೀಗ ಅಮೆಜಾನ್‌ನಲ್ಲಿ ಆಫರ್​ನಲ್ಲಿ ಕೇವಲ 18,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್​ ಆಕ್ಸಿಜನ್‌ ಓಎಸ್ 12.1 ನ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್​​ಫೋನ್​ ಬಹಳಷ್ಟು ವೇಗದ ಕಾರ್ಯಕ್ಷಮತೆಯನ್ನು ಸಹ ಒಳಗೊಂಡಿದೆ.

ಈ ಮೇಲಿನಂತೆ ಹಲವಾರು ವಸ್ತುಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಅಮೆಜಾನ್​ ಗ್ಯಾಜೆಟ್​ಗಳ ಮೇಲೆ ನೀಡುವ ವಿಶೇಷ ರಿಯಾಯಿತಿಗಳಲ್ಲಿ ಕೊಂಡುಕೊಳ್ಳಬಹುದಾಗಿದೆ.

Leave A Reply

Your email address will not be published.