HPCLನಿಂದ ಉದ್ಯೋಗಾವಕಾಶ. : ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ
ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ವಿಶಾಖಪಟ್ಟಣದ ವಿಶಾಖ ರಿಫೈನರಿನಲ್ಲಿ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಹುದ್ದೆಗಳ ಕುರಿತು ಹೆಚ್ಚಿನ ವಿವರಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-01-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 14-01-2023
ನೇಮಕಾತಿ ಸಂಸ್ಥೆ : ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್
ಹುದ್ದೆ ಹೆಸರು : ಗ್ರಾಜುಯೇಟ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ : 100. ಹೆಚ್‌ಪಿಸಿಎಲ್ 100 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಮೆಕಾನಿಕಲ್ ಇಂಜಿನಿಯರಿಂಗ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಕೆಮಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಇನ್‌ಸ್ಟ್ರುಮೆಂಟೇಶನ್ / ಪೆಟ್ರೋಕೆಮಿಕಲ್ / ಸೇಫ್ಟಿ / ಕಂಪ್ಯೂಟರ್ ಸೈನ್ಸ್ / ಇನ್ಫಾರ್ಮೇಷನ್ ಟೆಕ್ನಾಲಜಿ / ಇಲೆಕ್ಟ್ರಾನಿಕ್ಸ್ ಮತ್ತು ಕಂಮ್ಯುನಿಕೇಷನ್ ಇಂಜಿನಿಯರಿಂಗ್/ ಆಯಿಲ್ ಟೆಕ್ನಾಲಜಿ/ ಫುಡ್ ಟೆಕ್ನಾಲಜಿ/ ಇಂಡಸ್ಟ್ರಿಯಲ್ / ಪೆಟ್ರೋಲಿಯಂ ಇಂಜಿನಿಯರಿಂಗ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.
ಮಾಸಿಕ ಸ್ಟೈಫಂಡ್ : ರೂ.25,000.
ಆಯ್ಕೆ ಪ್ರಕ್ರಿಯೆ : ನೇರ ಸಂದರ್ಶನಕ್ಕೆ ಆಹ್ವಾನ
ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ವಿದ್ಯಾರ್ಹತೆ : ಹೆಚ್‌ಪಿಸಿಎಲ್ ಭರ್ತಿ ಮಾಡುವ ಇಂಜಿನಿಯರಿಂಗ್ ಫೀಲ್ಡ್‌ಗೆ ಸಂಬಂಧಿಸಿದ ವಿಷಯದಲ್ಲಿ ಕನಿಷ್ಠ ಶೇಕಡ.60 ಅಂಕಗಳೊಂದಿಗೆ ಬಿಇ ಪಾಸ್ ಮಾಡಿರಬೇಕು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಾಗಿದ್ದಲ್ಲಿ ಶೇಕಡ.50 ಅಂಕಗಳನ್ನು ಗಳಿಸಬೇಕು. ಯಾವೆಲ್ಲಾ ಇಂಜಿನಿಯರಿಂಗ್ ಫೀಲ್ಡ್‌ನಲ್ಲಿ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದು ಕೆಳಗಿನಂತೆ ತಿಳಿಸಲಾಗಿದೆ.
ಅಪ್ರೆಂಟಿಸ್ ಹುದ್ದೆ ಅವಧಿ : 01 ವರ್ಷ, 2020 ನೇ ಸಾಲಿನಿಂದ ಬಿಇ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ