Tax ಪಾವತಿದಾರರೇ ನಿಮಗೊಂದು ಖುಷಿ ಸುದ್ದಿ, ಸಿಗಲಿದೆ ಈ 10 ರೀತಿಯಲ್ಲಿ ತೆರಿಗೆ ವಿನಾಯಿತಿ !
ಆದಾಯ ತೆರಿಗೆಯು ವ್ಯಕ್ತಿಯ ಆದಾಯದ ಮೇಲೆ ಅವರ ಗಳಿಕೆಯ ಪ್ರಕಾರ ವಿಧಿಸಲಾದ ಕಡ್ಡಾಯ ಕೊಡುಗೆಯನ್ನು ಸೂಚಿಸುತ್ತದೆ. ಸರ್ಕಾರಗಳು ಒಬ್ಬರ ವ್ಯಾಪ್ತಿಯಲ್ಲಿರುವ ವ್ಯವಹಾರಗಳು ಮತ್ತು ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ ವಿಧಿಸುವ ಒಂದು ರೀತಿಯ ತೆರಿಗೆ ಎನ್ನಬಹುದು.
ಈ ಬಾರಿ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ನಡುವೆ, ಹಣಕಾಸು ಸಚಿವೆ ನಿರ್ಮಲಾ ಸೀಮಾರಾಮನ್ ರವರು ತೆರಿಗೆ ವಿನಾಯಿತಿಯ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಸೀತಾರಾಮನ್ ಅವರ ಹೇಳಿಕೆಯಿಂದ ಪಾವತಿದಾರರ ಸಂತಸಕ್ಕೆ ಕಾರಣವಾಗಿದೆ. ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್) ತೆರಿಗೆ ಸಂಗ್ರಹದ ಉದ್ದೇಶ ಹೊಂದಿದ್ದು, ಹೆಸರೇ ಸೂಚಿಸುವಂತೆ ಇದು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವ ವ್ಯವಸ್ಥೆಯಾಗಿದೆ. ಉದ್ಯೋಗದಾತ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಪಾವತಿಸುವ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ.
ಇದು ಸರ್ಕಾರವು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತೆರಿಗೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವಂತೆ ತೆರಿಗೆ ಪಾವತಿದಾರರು ಬಹಳ ಸಮಯದಿಂದ ಸರ್ಕಾರಕ್ಕೆ ಬೇಡಿಕೆ ಇಡುತ್ತಿದ್ದು, ಇದರೊಂದಿಗೆ 80ಸಿ ಅಡಿಯಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕೆಂಬ ಒತ್ತಾಯ ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ.
2023ರ ಬಜೆಟ್ ಮಂಡನೆಗೆ ದಿನ ಸನ್ನಿಹಿತವಾಗಿದ್ದು ತೆರಿಗೆ ವಿನಾಯಿತಿಯ ಬೇಡಿಕೆಗಳು ಹೆಚ್ಚುತ್ತಿದ್ದು, ಉದ್ಯೋಗ ವೃತ್ತಿಯು ಈ ಬಾರಿ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀಮಾರಾಮನ್ ಅವರು ತೆರಿಗೆ ವಿನಾಯಿತಿ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಏಳು ತೆರಿಗೆ ಸ್ಲ್ಯಾಬ್‌ಗಳನ್ನು ಹೊಂದಿರುವ ಐಚ್ಛಿಕ ಆದಾಯ ತೆರಿಗೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದ್ದು ಕಡಿಮೆ ಆದಾಯದ ಗುಂಪಿನ ಜನರು ಕಡಿಮೆ ತೆರಿಗೆ ಪಾವತಿ ಮಾಡಲು ನೆರವಾಗುತ್ತದೆ.
ಇದರ ಜೊತೆಗೆ ಹಳೆಯ ತೆರಿಗೆ ಪದ್ಧತಿಯಲ್ಲಿ ಪ್ರತಿಯೊಬ್ಬ ತೆರಿಗೆದಾರರು ಸುಮಾರು 7-10 ವಿಧಗಳಲ್ಲಿ ವಿನಾಯಿತಿ ಪಡೆಯಲು ಸಾಧ್ಯವಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಉಪಾಧ್ಯಕ್ಷ ಗೌತಮ್ ಚಿಕ್ರಮನೆ ಅವರ ‘ರಿಫಾರ್ಮ್ ನೇಷನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸರ್ಕಾರವು 2020-21 ರ ಸಾಮಾನ್ಯ ಬಜೆಟ್‌ನಲ್ಲಿ ಪರ್ಯಾಯ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದರ ಬಗ್ಗೆ ಮೆಲುಕು ಹಾಕುತ್ತಾ, ಅದರ ಅಡಿಯಲ್ಲಿ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ (HUFs) ಕಡಿಮೆ ದರಗಳೊಂದಿಗೆ ತೆರಿಗೆ ವಿಧಿಸಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ನಡುವೆಯೂ ಬಾಡಿಗೆ ಭತ್ಯೆ, ವಸತಿ ಸಾಲದ ಬಡ್ಡಿ ಮತ್ತು 80C ಅಡಿಯಲ್ಲಿ ಹೂಡಿಕೆಯಂತಹ ಇತರ ತೆರಿಗೆ ವಿನಾಯಿತಿಗಳನ್ನು ಈ ವ್ಯವಸ್ಥೆಯಲ್ಲಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಹಳೆಯ ತೆರಿಗೆ ಪದ್ಧತಿಯಲ್ಲಿ, ಆದಾಯದ ಮಿತಿಯನ್ನು ಅವಲಂಬಿಸಿ ಆದಾಯ ತೆರಿಗೆ ದರಗಳು 10, 20 ಮತ್ತು 30 ಪ್ರತಿಶತದ ಆಸುಪಾಸಿನಲ್ಲಿತ್ತು. ಹಳೆ ತೆರಿಗೆ ಪದ್ಧತಿಯ ಜೊತೆಗೆ ಸರಕಾರ ಮತ್ತೊಂದು ವ್ಯವಸ್ಥೆ ತಂದಿದ್ದು, ಇದರಲ್ಲಿ ವಿನಾಯಿತಿ ಇಲ್ಲದೆ ಇದ್ದರೂ ಕೂಡ ತೆರಿಗೆ ಕಡಿಮೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.