Jacket Rate: ಈ ಜಾಕೆಟ್ ಕ್ಯಾಬೇಜ್​ನಂತೆ ಇದೆ | ನಿಮ್ಮಲ್ಲಿ 60 ಸಾವಿರ ಇದ್ದರೆ ತಗ್ಗೊಳ್ಳಿ| ಇದರ ವೈಶಿಷ್ಟ್ಯತೆ ಏನು ?

ನೀವು ಜ್ಯಾಕೆಟ್ ಕೊಂಡುಕೊಳ್ಳುವ ಯೋಜನೆ ಹಾಕಿದ್ದರೆ, ಈ ಕುತೂಹಲಕಾರಿ ಮಾಹಿತಿ ನೀವು ತಿಳಿದುಕೊಳ್ಳುವುದು ಉತ್ತಮ. ಹೌದು!!! ಕ್ಯಾಬೇಜ್​ನಂತೆ ಇರುವ ಜಾಕೆಟ್​ ನಿಮಗೆ ಬೇಕಾದಲ್ಲಿ 60 ಸಾವಿರ ರೂಪಾಯಿ ರೆಡಿಮಾಡಿಕೊಳ್ಳಿ!ಚುಮು ಚುಮು ಚಳಿಯಲ್ಲಿ ಬೆಚ್ಚಗಿನ ಜ್ಯಾಕೇಟ್ ಇಲ್ಲವೇ ಕಾಫಿ, ಟೀ ಮೊರೆ ಹೋಗೋದು ಸಾಮಾನ್ಯ.

 

ದಿನದಿಂದ ದಿನಕ್ಕೆ ಚಳಿಗಾಲದಲ್ಲಿ (Winter Seson) ಚಳಿ ಹೆಚ್ಚಾಗುತ್ತಿದೆ. ಈ ವೇಳೆ, ಬೆಚ್ಚಗೆ ಇರಲು ಜೊತೆಗೆ ಚಳಿಯಿಂದ ರಕ್ಷಣೆ ಪಡೆಯಲು ಸ್ವೆಟರ್​, ಸಾಕ್ಸ್​ಗಳನ್ನು ಧರಿಸುವುದು ಸಹಜ. ಮೊದಲೆಲ್ಲಾ ಕಂಬಳಿ, ರಗ್ಗು, ಶಾಲುಗಳನ್ನು ಹೊದ್ದುಕೊಳ್ಳುತ್ತಾ ಇದ್ದರು. ಆದರೆ, ಈಗ ಜರ್ಕಿನ್​, ಸಾಕ್ಸ್​, ಗ್ಲೌಸ್​ ಮತ್ತು ನಾನಾ ರೀತಿಯ ಉಣ್ಣೆ ಬಟ್ಟೆಗಳು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದೆ. ಇನ್ನೂ ಕೆಲವೊಬ್ಬರಿಗೆ ಬ್ರ್ಯಾಂಡೆಡ್​ಸ್ವೆಟರ್​, ಜಾಕೆಟ್​ಗಳನ್ನು ಹಾಕಬೇಕು ಅಂದುಕೊಳ್ಳುವವರು ಕೂಡ ನಮ್ಮ ನಡುವೆ ಇದ್ದಾರೆ.

ಅದರಲ್ಲೂ ಕೂಡ ಬ್ಯಾಂಡೆಡ್​ ಜಾಕೆಟ್​ ಎಂದರೆ ಒಂದು 2 ಸಾವಿರ, ಅದಕ್ಕೂ ಜಾಸ್ತಿ ಅಂದರೆ ಒಂದು 10,000 ದ ಒಳಗೆ ಇರಬಹುದು. ಆದರೆ ನಾವು ಹೇಳಿಕ್ಕೆ ಹೊರಟಿರೋ ಜ್ಯಾಕೆಟ್ ಬೆಲೆ ಕೇಳಿದರೆ ನೀವು ಮೂಗಿನ ಮೇಲೆ ಬೆರಳಿಟ್ಟು ಅಷ್ಟೊಂದು ದುಬಾರಿ ನಾ??? ಅಂತ ಶಾಕ್ ಆಗೋದು ಗ್ಯಾರಂಟಿ!!?? ಡೆಕಾತ್ಲಾನ್​, ಪೂಮಾ, ಲಿವೀಸ್​, ವುಡ್​ಲ್ಯಾಂಡ್​ ಈ ರೀತಿಯ ಹಲವಾರು ಬ್ರ್ಯಾಂಡ್​ಗಳಿದ್ದು, ಅದರಲ್ಲಿ ಡೀಸಲ್​ ಕಂಪನಿ ಕೂಡ ತನ್ನ ಸ್ಥಾನ ಪಡೆದುಕೊಂಡಿದೆ. ನಾನಾ ರೀತಿಯ ವಸ್ತ್ರವಿನ್ಯಾಸಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತಂದು ಕೊಡುವಲ್ಲಿ ಈ ಡೀಸಲ್​ ಕಂಪನಿ ತನ್ನದೇ ಟ್ರೆಂಡ್ ರೂಪಿಸಿ ಫೇಮಸ್ ಆಗಿದೆ.

ಸದ್ಯ, ಈ ಕಂಪನಿ ಬಿಡುಗಡೆಮಾಡಿದ ಒಂದ ಜಾಕೆಟ್​ ಜೋರಾಗಿ ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ಅಸಲಿ ಕಾರಣವೇನು?? ಅಂತಹ ವಿಶೇಷ ಈ ಜ್ಯಾಕೆಟ್ ನಲ್ಲಿ ಏನಿದೆ?? ಎಂಬ ಪ್ರಶ್ನೆ ನಿಮ್ಮನ್ನು ಕಾಡದಿರದು. ಹೌದು!!! ಈ ಜ್ಯಾಕೆಟ್ ಬೇರೆ ನಾರ್ಮಲ್ ಹಾಗೆ ಇರದೆ, ಹೂಕೋಸು/ ಕ್ಯಾಬೇಜಿನ ಹಾಗೆ ಇರುವ ಜಾಕೆಟ್​ ಆಆಗಿದ್ದು ಇದು ನೋಡಲು ಥೇಟ್ ಕ್ಯಾಬೇಜಿನ ಹಾಗೆಯೇ ಇರುವ ವಿನ್ಯಾಸದ ಜಾಕೆಟ್ನನ್ನು ಡೀಸಲ್​ ಕಂಪೆನಿ ಬಿಡುಗಡೆ ಮಾಡಿದೆ. ಇದನ್ನು ಧರಿಸಿದರೆ ನೋಡಿದವರ ಪಾಲಿಗೆ ಕ್ಯಾಬೇಜ್​ ಬಂದಿದೆಯೇನೋ ಎಂಬ ಭಾವನೆ ಮೂಡಿಸಿದರು ಅಚ್ಚರಿಯಿಲ್ಲ.

ಆದರೆ, ಬರೀ ಡಿಸೈನ್ ಚೇಂಜ್ ಆಗಿದ್ದರೆ ಹೆಚ್ಚು ಸುದ್ದಿಯಾಗುತ್ತಿತ್ತೋ ಗೊತ್ತಿಲ್ಲ. ಆದರೆ, ಜ್ಯಾಕೆಟ್ ಬೆಲೆ ಕೇಳಿದರೆ ಈ ಜ್ಯಾಕೆಟ್ ಖರೀದಿ ಮಾಡುವ ಅವಶ್ಯಕತೆ ಇದೆಯಾ ಅಂತ ಅನ್ನಿಸೋದು ಪಕ್ಕಾ!!! ಆದ್ರೆ, ಬ್ರಾಂಡ್ ಹಾಗೂ ಡಿಸೈನ್ ಮೇಲೆ ಹೆಚ್ಚು ಒಲವು ಇದ್ದು ಏಷ್ಟು ದುಬಾರಿ ಇದ್ದರೂ ಪರವಾಗಿಲ್ಲ ಅನ್ನೋರು ಖಂಡಿತ ಇದನ್ನು ಕೊಂಡುಕೊಳ್ಳಬಹುದು. ಕ್ಯಾಬೆಜ್​ ನ ರೀತಿ ಕಾಣುವ ಜಾಕೆಟ್​ನ ಬೆಲೆ ಬರೋಬ್ಬರಿ 60, ಸಾವಿರ ರೂಪಾಯಿಯೆಂದರೆ ಈ ಸುದ್ಧಿ ಕೇಳಿ ಉಫ್​! ಒಂದು ದೇಹವನ್ನು ಮುಚ್ಚಲು, ಚಳಿಯಿಂದ ಪಾರಾಗಲು 60 ಸಾವಿರ ರುಪಾಯಿಗಳನ್ನು ಕೊಡಬೇಕಾ ಎನ್ನುವ ಪ್ರಶ್ನೆ ಮನದಲ್ಲಿ ಸಹಜವಾಗಿ ಮೂಡುತ್ತದೆ.

ಜಾಕೆಟ್​ ಕ್ಯಾಬೇಜ್​ನಂತೆ ಕಾಣಲು ರೂ. 60,000 ಕಟ್ಟಬೇಕಾ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋ ಟ್ವೀಟ್ ಮಾಡಲಾಗಿದ್ದು, ಮೂರು ದಿನಗಳ ಹಿಂದೆ ಅಪ್​ಲೋಡ್ ಮಾಡಲಾದ ಈ ಪೋಸ್ಟ್​ ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದು, ರೂ. 2,000 ಬೆಲೆಯ ಜಾಕೆಟ್​ ಆಗಿದ್ದು ಉಳಿದದ್ದು ರೂ. 58,000 ಬ್ರ್ಯಾಂಡಿಂಗ್​ ಮಾಡಲು ಎಂದು ನೆಟ್ಟಿಗರೊಬ್ಬರು ಹೇಳಿದ್ದು, ನೋಡಿ ಬ್ರಾಂಡಿಂಗ್ ಹೇಗೆ ಕೆಲ್ಸ ಮಾಡುತ್ತೆ? ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬರು ಈ ಬೆಲೆಯಲ್ಲಿ ಆ್ಯಕ್ಟಿವಾ ಗಾಡಿ ಖರೀದಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರು ಇಷ್ಟು ದುಬಾರಿ ಜಾಕೆಟ್​ ಖರೀದಿಸುತ್ತಾರೆ? ಎಂದು ನೆಟ್ಟಿಗರು ತಮ್ಮಲ್ಲೇ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

Leave A Reply

Your email address will not be published.