HRA : ರೂಲ್ಸ್ ಚೇಂಜ್ ಮಾಡಿದ ಕೇಂದ್ರ ಸರಕಾರ | ಹೆಚ್ ಆರ್ ಎ ಹೊಸ ರೂಲ್ಸ್ ಇಂತಿದೆ

ಕೇಂದ್ರ ನೌಕರರಿಗೆ ಹೊಸ ವರ್ಷದ ಹೊಸ್ತಿಲಲ್ಲಿ ದೊಡ್ದ ಶಾಕ್ ಎದುರಾಗುವ ಲಕ್ಷಣಗಳು ಕಂಡುಬರುತ್ತಿವೆ. ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ (HRA)ಗೆ ಸಂಬಂಧಿಸಿದ ನಿಯಮಗಳನ್ನ ಹಣಕಾಸು ಸಚಿವಾಲಯ ಬದಲಾಯಿಸಿದೆ. ಹೊಸ ನಿಯಮಗಳ ಅನುಸಾರ, ಸರ್ಕಾರಿ ನೌಕರರು ಕೆಲವು ಸಂದರ್ಭಗಳಲ್ಲಿ HRA ಗೆ ಅರ್ಹರಾಗಿರುವುದಿಲ್ಲ ಎನ್ನಲಾಗಿದೆ.

 

ಮನೆ ಬಾಡಿಗೆ ಭತ್ಯೆ ಎಂದು ಕರೆಯಲ್ಪಡುವ HRA, ನೌಕರರ ಸಂಬಳದ ಮುಖ್ಯ ಭಾಗವಾಗಿ ಪರಿಣಮಿಸುತ್ತದೆ. ಸಂಬಳ ಪಡೆಯುವ ವ್ಯಕ್ತಿಯು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಲ್ಲಿ ಆ ಸಂದರ್ಭ ಅದರ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.

ನೀವು ಎಷ್ಟು HRA ಪಡೆಯುತ್ತಿರಿ ಎಂಬುದನ್ನು ನಿಮ್ಮ ಉದ್ಯೋಗದಾತರು ನಿರ್ಧರಿಸುತ್ತಾರೆ. ಆದರೆ ಆಪ್ಟಿಮೈಸೇಶನ್ಗೆ ಅವಕಾಶ ಕೂಡ ಕಲ್ಪಿಸಲಾಗಿದೆ.HRA ಕ್ಲೈಮ್ ಸಂಬಳ ಪಡೆಯುವ ವ್ಯಕ್ತಿಯಿಂದ ಮಾತ್ರ ಮಾಡಬಹುದಾಗಿದ್ದು, ಸ್ವಯಂ ಉದ್ಯೋಗಿಗಳು HRA ಪಡೆಯಲು ಅವಕಾಶವಿಲ್ಲ. ಸಂಬಳ ಪಡೆಯುವ ವ್ಯಕ್ತಿಯು ವಾಸಿಸುವ ಮನೆ ಬಾಡಿಗೆಗೆ ಇರಬೇಕಾಗಿದ್ದು, ನಿಮ್ಮ ಸ್ವಂತ ಮನೆಯಲ್ಲಿ ವಾಸಿಸುವ ಅನುಕೂಲ ಪಡೆಯಲು ಸಾಧ್ಯವಿಲ್ಲ.

ಬಾಡಿಗೆ ನಿಮ್ಮ ಸಂಬಳದ 10% ಕ್ಕಿಂತ ಹೆಚ್ಚಿರಬೇಕಾಗುತ್ತದೆ ಹೀಗಿದ್ದಾಗ ಮಾತ್ರವೆ ಪಡೆಯಲು ಅವಕಾಶವಿದ್ದು, ಇದರೊಂದಿಗೆ ಪತಿ ಅಥವಾ ಪತ್ನಿಗೆ ಬಾಡಿಗೆ ನೀಡಲು ಅವಕಾಶವಿಲ್ಲ.

HRA ಎಷ್ಟು ಕ್ಲೈಮ್ ಮಾಡಬಹುದು ಎಂಬುದರ ಬಗ್ಗೆ ಮೂರು ಮುಖ್ಯ ಷರತ್ತುಗಳಿವೆ.

ಮೊದಲ ಷರತ್ತು : ಪಡೆದ HRA ಮೊತ್ತಕ್ಕಿಂತ ಹೆಚ್ಚಿನ ಕಡಿತವನ್ನು ಪಡೆಯಲು ಆಗುವುದಿಲ್ಲ. ಮೆಟ್ರೋ ನಗರಗಳಿಗೆ, ಇದು ಗರಿಷ್ಠ ಮೂಲ ಮತ್ತು ತುಟ್ಟಿ ಭತ್ಯೆಯ ಶೇಕಡಾ 50 ಆಗಿರುವ ಸಾಧ್ಯತೆ ಇದೆ. ಮೂರನೇ ಷರತ್ತಿನ ಅನುಸಾರ, ಮೂಲ ವೇತನ ಮತ್ತು ತುಟ್ಟಿಭತ್ಯೆಯನ್ನು ಕಳೆದು ನೀವು ಪಾವತಿಸಿದ ಬಾಡಿಗೆ ಮೊತ್ತವನ್ನು ಶೇಕಡಾ 10ಕ್ಕಿಂತ ಹೆಚ್ಚು ಕ್ಲೈಮ್ ಮಾಡಲಾಗುವುದಿಲ್ಲ ಎಂಬುದು ನಿಮಗೆ ತಿಳಿದಿರಬೇಕು.

ಮನೆ ಬಾಡಿಗೆ ಭತ್ಯೆಗೆ (HRA) ಸಂಬಂಧಿಸಿದ ಹೊಸ ಷರತ್ತುಗಳು ಹೀಗಿವೆ:

ಉದ್ಯೋಗಿಯು ಇನ್ನೊಬ್ಬ ಸರ್ಕಾರಿ ನೌಕರನಿಗೆ ನಿಗದಿಪಡಿಸಿದ ಸರ್ಕಾರಿ ವಸತಿ ಸೌಕರ್ಯವನ್ನು ಹಂಚಿಕೊಂಡಲ್ಲಿ ಅವನು ಅದಕ್ಕೆ ಅರ್ಹನಾಗಿರುವುದಿಲ್ಲ.

ಇದಲ್ಲದೆ, ಉದ್ಯೋಗಿಯ ಪೋಷಕರು, ಮಗ ಅಥವಾ ಮಗಳು ಅವರಲ್ಲಿ ಯಾರಿಗಾದರೂ ಮನೆ ಮಂಜೂರು ಮಾಡಿದ್ದರೆ ಹಾಗೂ ಅವರು ಅದರಲ್ಲಿ ವಾಸಿಸುತ್ತಿದ್ದರೆ ಇವುಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಮುನ್ಸಿಪಲ್ ಕಾರ್ಪೊರೇಷನ್, ಪೋರ್ಟ್ ಟ್ರಸ್ಟ್, ರಾಷ್ಟ್ರೀಕೃತ ಬ್ಯಾಂಕ್, ಎಲ್‌ಐಸಿ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳು ಸೇರಿವೆ.

ಮೇಲೆ ತಿಳಿಸಿದ ಯಾವುದೇ ಘಟಕದಿಂದ ಸರ್ಕಾರಿ ನೌಕರನ ಸಂಗಾತಿಗೆ ಮನೆ ನೀಡಿದ್ದಲ್ಲಿ ಹಾಗೂ ಅವನು ಆ ಮನೆಯಲ್ಲಿ ವಾಸಿಸುತ್ತಿದ್ದರೂ ಅಥವಾ ಪ್ರತ್ಯೇಕ ಬಾಡಿಗೆಯಲ್ಲಿ ವಾಸಿಸುತ್ತಿದ್ದರೂ, ಅವನು ಅರ್ಹತೆ ಪಡೆಯಲು ಆಗುವುದಿಲ್ಲ ಎಂಬುದನ್ನು ಗಮನಿಸಬೇಕು.

Leave A Reply

Your email address will not be published.