ಮಂಗಳೂರು : ಆಟೋ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣ : ಹೊನ್ನಾಳಿಯಲ್ಲಿ ಓರ್ವ ಯುವಕನ್ನು ವಶಕ್ಕೆ ಪಡೆದ ಎನ್‌ಐಎ

Share the Article

ಮಂಗಳೂರು : ನಗರದಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣ ಭಾರೀ ಕೋಲಾಹಲ ಸೃಷ್ಟಿಸಿದ್ದು ಇಲ್ಲಿಯವರೆಗೂ ಈ ಘಟನೆ ತಣ್ಣಗಾಗಿಲ್ಲ ಎಂದೇ ಹೇಳಬಹುದು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿಯಲ್ಲಿ ಓರ್ವ ಯುವಕನನ್ನು ಎನ್ಐಎ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನಿವಾಸಿ ನದೀಮ್‌ ಎಂಬಾತನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಶಿವಮೊಗ್ಗ ಮೂಲದ ಶಂಕಿತ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.  ನಿನ್ನೆ ಸಂಜೆಯಿಂದಲೂ ಎನ್‌ಐಎ  ಅಧಿಕಾರಿಗಳು ವಿಚಾರ ನಡೆಸಲಾಗುತ್ತಿದೆ.

Leave A Reply