KSDA Recruitment 2023: ಕೃಷಿ ಇಲಾಖೆಯಲ್ಲಿ 300 ಹುದ್ದೆಗಳು, ನೇರ ನೇಮಕಾತಿ | ಮಾಸಿಕ ವೇತನ 78ಸಾವಿರ

ಕರ್ನಾಟಕ ರಾಜ್ಯ ಕೃಷಿ ಇಲಾಖೆಯು(Karnataka State Department of Agriculture -KSDA) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ. ಅಂದಹಾಗೆ, ಒಟ್ಟು 300 ಸಹಾಯಕ ಕೃಷಿ ಅಧಿಕಾರಿ(Assistant Agriculture Officer) ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ರಾಜ್ಯ ಸರ್ಕಾರದ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶ ಎಂದೇ ಹೇಳಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ಆಯ್ಕೆ ವಿಧಾನ ಅನುಸರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಹಾಯಕ ಕೃಷಿ ಅಧಿಕಾರಿಗಳ ವೃಂದದಲ್ಲಿ ಬ್ಯಾಕ್​ಲಾಗ್​ ಹುದ್ದೆಗಳೂ ಸಹ ಇದ್ದು, ಅವುಗಳನ್ನೂ ಭರ್ತಿ ಮಾಡಲಾಗುತ್ತದೆ.

 

ಸಂಸ್ಥೆ : ಕರ್ನಾಟಕ ರಾಜ್ಯ ಕೃಷಿ ಇಲಾಖೆ
ಹುದ್ದೆ : ಸಹಾಯಕ ಕೃಷಿ ಅಧಿಕಾರಿ
ಒಟ್ಟು ಹುದ್ದೆ : 300
ವೇತನ : ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹ 40,900-78,200 ರೂ. ವರೆಗೆ ಸಂಬಳ ಕೊಡಲಾಗುತ್ತದೆ.
ಉದ್ಯೋಗದ ಸ್ಥಳ : ಕರ್ನಾಟಕ

ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟೇ ಅಪ್ಡೇಟ್‌ ಆಗಲಿದೆ.

ವಿದ್ಯಾರ್ಹತೆ : ಕೃಷಿ ಪದವೀಧರರು ಮತ್ತು ಬಿ.ಟೆಕ್​ ಕೃಷಿ ಎಂಜಿನಿಯರಿಂಗ್/ ಬಯೋಟೆಕ್ನಾಲಜಿ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​​ raitamitra.karnataka.gov.inಗೆ ಭೇಟಿ ನೀಡಿ. ಅಥವಾ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.