Good News : PM Kisan ಹಣ ದ್ವಿಗುಣ, ಅನ್ನದಾತರಿಗೆ ಭರ್ಜರಿ ಗುಡ್‌ನ್ಯೂಸ್
ಸರ್ಕಾರ ರೈತರಿಗೆ ನೆರವಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ಸಂಕಷ್ಟ ಎದುರಿಸಲು ಸಾಲ ಸೌಲಭ್ಯ, ಉಳಿತಾಯ ಯೋಜನೆ , ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡು ನೆರವಾಗುತ್ತಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದ ಹಲವಾರು ಯೋಜನೆಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಒಂದಾಗಿದ್ದು, ರೈತರಿಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಉದ್ದೇಶದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಾರಂಭಿಸಿದೆ. ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳು ಇಂತಹ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ.
ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಆಶ್ವಾಸನೆ ನೀಡಿದ್ದ ಸರ್ಕಾರ ಅದರಂತೆ, 2016ರಲ್ಲಿ ಸಮಿತಿಯನ್ನು ರೂಪಿಸಿ ಅದರ ನೆರವಿನಿಂದ ಅನೇಕ ಕಾರ್ಯತಂತ್ರಗಳನ್ನು ಶಿಫಾರಸು ಮಾಡಲಾಗಿದೆ. 2015-16ನೇ ಸಾಲಿನಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಸರಕಾರ ಕೇವಲ 25460.51 ಕೋಟಿ ರೂ.ಗಳ ಬಜೆಟ್ ನೀಡಿದ್ದು, 5.44 ಪಟ್ಟು ಏರಿಕೆ ಮಾಡಲಾಗಿದೆ.
2022-23ನೇ ಸಾಲಿನಲ್ಲಿ ಈ ಬಜೆಟ್’ ಅನ್ನು 1,38,550.93 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಪಿಎಂ ಕಿಸಾನ್ ಜೊತೆಗೆ ಸರ್ಕಾರವು ಅನೇಕ ಯೋಜನೆಗಳ ಮೂಲಕ ರೈತರ ಆದಾಯವು ನೇರವಾಗಿ ದ್ವಿಗುಣಗೊಂಡಿದೆ.
PMFBY ಅನ್ನು 2016ರಲ್ಲಿ ಪ್ರಾರಂಭ ಮಾಡಲಾಗಿದೆ. ಕಳೆದ 6 ವರ್ಷಗಳ ಹಿನ್ನೆಲೆ ಗಮನಿಸಿದರೆ, 38 ಕೋಟಿ ರೈತರು ಇದರಲ್ಲಿ ನೋಂದಾವಣಿ ಮಾಡಿಕೊಂಡಿದ್ದಾರೆ. ಇದೇ ವೇಳೆ, 11.73 ಕೋಟಿ ರೈತರು ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮೂಲಕ ಅನ್ನದಾತರು ಹೆಚ್ಚಿನ ಅನುಕೂಲ ಪಡೆದುಕೊಂಡಿದ್ದಾರೆ.
ಈ ಅವಧಿಯಲ್ಲಿ ರೂ.1,24,223 ಕೋಟಿ ಪಾವತಿ ಮಾಡಲಾಗಿದ್ದು, ರೈತರು ತಮ್ಮ ಪಾಲಿನ ಪ್ರೀಮಿಯಂ ರೂ.25,185 ಕೋಟಿ ಪಾವತಿಸಿದ್ದಾರೆ. ಇದರ ಸಲುವಾಗಿ ರೂ.1,24,223 ಕೋಟಿಗೂ ಹೆಚ್ಚು ಹಣವನ್ನು ವ್ಯಯಿಸಲಾಗಿದೆ. ಇದರಿಂದ ರೈತರು ಪಾವತಿಸಿದ ಪ್ರತಿ 100 ರೂ.ಗೆ ಸುಮಾರು 493 ರೂ.ಗಳನ್ನು ಕ್ಲೈಮ್’ಗಳಾಗಿ ಪಾವತಿಸಲಾಗಿದೆ.
ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಸಲುವಾಗಿ ಸರ್ಕಾರವು ಕೆಲ ವಿಷಯಗಳ ಮೇಲೆ ಗಮನಹರಿಸಿ ಆ ಮುಖೇನ ಆದಾಯ ಹೆಚ್ಚಿಸುವ ಯೋಜನೆ ಹಾಕಿಕೊಂಡಿದೆ.
ಸಂಪನ್ಮೂಲಗಳ ಬಳಕೆಯಲ್ಲಿ ದಕ್ಷತೆ – ಕಡಿತ ಉತ್ಪಾದನಾ ವೆಚ್ಚ ನಿರ್ವಹಣೆ. ಬೆಳೆಗಳ ಉತ್ಪಾದಕತೆಯಲ್ಲಿ ಹೆಚ್ಚಳ ಮಾಡುವತ್ತ ಗಮನ ಹರಿಸಿದೆ. ಜಾನುವಾರುಗಳ ಉತ್ಪಾದಕತೆಯಲ್ಲಿ ಹೆಚ್ಚಳ ಮಾಡುವತ್ತ ನಿಗಾ ವಹಿಸಿದೆ.
ಹೆಚ್ಚುವರಿ ಕಾರ್ಮಿಕ ಶಕ್ತಿಯನ್ನು ಕೃಷಿಯಿಂದ ಕೃಷಿಯೇತರ ಉದ್ಯೋಗಗಳಿಗೆ ವರ್ಗಾವಣೆ ಮಾಡಿ ಕ್ರಮ ಕೈಗೊಂಡಿದೆ. ಬೆಳೆ ತೀವ್ರತೆಯ ಹೆಚ್ಚಳದ ಕಡೆ ಗಮನ ವಹಿಸಲಾಗಿದೆ. ಹೆಚ್ಚಿನ ಮೌಲ್ಯದ ಕೃಷಿಯತ್ತ ವೈವಿಧ್ಯೀಕರಣ ಮಾಡುವತ್ತ ಗಮನ ಹರಿಸಿದೆ. ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಒದಗಿಸಲು ಕ್ರಮ ಕೈಗೊಂಡಿದೆ.
ಇದರ ಜೊತೆಗೆ ರೈತರ ಆದಾಯವನ್ನು ಇಮ್ಮಡಿ ಮಾಡುವ ನಿಟ್ಟಿನಲ್ಲಿ 2019ರ ಬಜೆಟ್ನಲ್ಲಿ ಹಣಕಾಸು ಸಚಿವರು ಪಿಎಂ ಕಿಸಾನ್ ಯೋಜನೆ ಆರಂಭಿಸಲಾಗಿದೆ.ಈ ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂಪಾಯಿ ಸಿಗಲಿದೆ. ಸದ್ಯ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತಿಗಾಗಿ ಜನರು ಎದುರು ನೋಡುತ್ತಿದ್ದು, ಇಲ್ಲಿಯವರೆಗೆ 8.42 ಕೋಟಿಗೂ ಹೆಚ್ಚು ರೈತರು 12 ಕಂತುಗಳ ಲಾಭವನ್ನು ಪಡೆದುಕೊಂಡಿದ್ದಾರೆ.
ಸದ್ಯ, ದೇಶದಾದ್ಯಂತ 12 ಕೋಟಿಗೂ ಹೆಚ್ಚು ರೈತರು ಸರ್ಕಾರದ ಈ ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ. ಪ್ರಧಾನಿ ಮೋದಿ, 13ನೇ ಕಂತಿನ ಹಣ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದು ಹೊಸ ವರ್ಷದ ಸಂಭ್ರಮ ದ ನಡುವೆ ಜನವರಿ ತಿಂಗಳಿನಲ್ಲಿಯೇ 13 ನೇ ಕಂತಿನ 2000 ರೂ.ಗಳನ್ನು ಕೋಟ್ಯಾಂತರ ರೈತರ ಖಾತೆಗಳಿಗೆ ವರ್ಗಾಯಿಸಲಾಗುವ ಕುರಿತು ಮಾಹಿತಿ ನೀಡಿದ್ದಾರೆ.