ಸೆಕ್ಯುರಿಟಿಯಿಂದಲೇ ಭಾರೀ ದೊಡ್ಡ ಕಳ್ಳತನ | ದಂಪತಿ ನಡೆಸಿದ್ರು ಮಾಸ್ಟರ್‌ ಪ್ಲ್ಯಾನ್‌, ವಿಶ್ವಾಸ ದ್ರೋಹ ಮಾಡಿ ನೇಪಾಳಕ್ಕೆ ಪರಾರಿ

ಮನೆಮಂದಿ ಮೂರು ದಿನದ ಮಟ್ಟಿಗೆ ಹೊರ ಹೋದ ಸಂದರ್ಭದಲ್ಲಿ ಅದೇ ಬಿಲ್ಡಿಂಗ್‌ನ ಸೆಕ್ಯುರಿಟಿ ದಂಪತಿಗಳು ಮನೆ ಪೂರ್ತಿ ದೋಚಿ ಪರಾರಿಯಾಗಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಹೌದು ರಾಜಧಾನಿ ಬೆಂಗಳೂರಿನಲ್ಲಿ ನೇಪಾಳಿ ಮೂಲದ ಸೆಕ್ಯುರಿಟಿ ಸಿಬ್ಬಂದಿ ತಮ್ಮ ಕೈಚಳಕ ತೋರಿಸಿ ಜೂಟ್‌ ಆಗಿದ್ದಾರೆ. ಒಂಭತ್ತು ವರ್ಷಗಳಿಂದ ಗೋಲ್ಡನ್‌ ಬೆಲ್‌ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಶಿವರಾಜ್‌ ಮತ್ತು ಜಯಂತಿ ದಂಪತಿ ಆ ಬಿಲ್ಡಿಂಗ್‌ನ ಎಲ್ಲರ ವಿಶ್ವಾಸ ಗಳಿಸಿದ್ದರು. ಇಲ್ಲೇ ನೋಡಿ ಅಲ್ಲಿನ ಮಂದಿ ಎಡವಿಬಿದ್ದಿದ್ದು. ಏಕೆಂದರೆ ಈ ಬಿಲ್ಡಿಂಗ್‌ನವ ವಿಶ್ವಾಸ ಗಳಿಸಿದ್ದ ಈ ಕಳ್ಳ ದಂಪತಿ, ಇದನ್ನೇ ಬಂಡವಾಳ ಮಾಡಿಕೊಂಡು ನಂಬಿಕೆ ದ್ರೋಹದ ಕೆಲಸ ಮಾಡಿದ್ದಾರೆ.

 

ಈ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲ್ಡನ್ ಬೆಲ್ ಅಪಾರ್ಟ್​​ಮೆಂಟ್​​ನಲ್ಲಿ ಕಳ್ಳತನ ನಡೆದಿದೆ. ಫ್ಲ್ಯಾಟ್​​ವೊಂದರ ನಿವಾಸಿಗಳು ಮೂರು ದಿನಕ್ಕಾಗಿ ಕೊಡಗಿಗೆ ತೆರಳಿದ್ದರು. ಈ ವಿಷಯ ಅರಿತ ಶಿವರಾಜ್ ಮತ್ತು ಜಯಂತಿ ಮನೆಗೆ ಕನ್ನ ಹಾಕಿದ್ದಾರೆ. ಹಣ, 230 ಗ್ರಾಂ ಚಿನ್ನಾಭರಣ 2 ಲ್ಯಾಪ್ ಟಾಪ್ ಕದ್ದು ಎಸ್ಕೇಪ್ ಶಿವರಾಜ್ ದಂಪತಿ ಜೂಟ್ ಆಗಿದ್ದಾರೆ. ದಂಪತಿ ಹಣ ಮತ್ತು ನಗದು ಜೊತೆ ನೇಪಾಳಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿವೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.