ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್ ಪ್ರಕರಣ : ಪಿ.ಎ ಇಂಜಿನಿಯರಿಂಗ್‌ ಕಾಲೇಜಿಗೆ NIA ದಾಳಿ, ಓರ್ವ ವಿದ್ಯಾರ್ಥಿ ವಶಕ್ಕೆ

ಬೆಂಗಳೂರು : ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಸಂಬಂಧಿಸಿ ಬೆಂಗಳೂರಿನ 7 ಮಂದಿ ಎನ್‌ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ದಾಳಿ ನಡೆದಿದ್ದು ಅಂತಿಮ ವರ್ಷ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ.

 

ಎನ್‌ಐಎ ದಾಳಿ ಮಾಡಿ, ವಿದ್ಯಾರ್ಥಿ ರಿಹಾನ್‌ ಶೇಖ್‌  ಪಿ.ಎ ಇಂಜಿನಿಯರಿಂಗ್‌ ಕಾಲೇಜಿನ  ವಿದ್ಯಾರ್ಥಿಯಾಗಿದ್ದು,  ಉಡುಪಿ ನಿವಾಸಿ ಎಂದು ಗುರುತಿಸಲಾಗಿದೆ. ಈತ  ಭಯೊತ್ಪಾದನ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.   

ಕುಕ್ಕರ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ  ಶಾರೀಕ್ ಇದೇ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದನು. ಶಿವಮೊಗ್ಗದಲ್ಲಿ ಟ್ರಯಲ್‌ ಬ್ಲಾಸ್ಟ್ ಮಾಡಿದ ಮಾಸ್‌ ಮುನೀರ್‌ನನ್ನು ಶಿವಮೊಗ್ಗದಲ್ಲಿ ವಶಕ್ಕೆ ಪಡೆಯಲಾಗಿದೆ.

ಮಾಸ್‌ ಮುನೀರ್‌ ಮತ್ತು  ಶಾರೀಕ್  ಇವರಿಬ್ಬರು ಮಂಗಳೂರಿನ ಪಿ.ಎ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದರು. ಕಾಲೇಜಿನ ಪಕ್ಕದಲ್ಲೇ ವಾಸವಾಗಿದ್ದರು. ಆಗ ಕೆಲ ವಿದ್ಯಾರ್ಥಿಗಳು ಆತನ ಬಳಿಕೆ ಹೋಗುತ್ತಿದ್ದರು. ಆಗ ವಿದ್ಯಾರ್ಥಿ ರಿಹಾನ್‌ ಶೇಖ್‌ ಕೂಡಾ ತೆರಳುತ್ತಿದ್ದ ಎಂಬ ಮಾಹಿತಿ ಮೆರೆಗೆ ಇಂದು ಬೆಂಗಳೂರಿನ 7 ಮಂದಿ ಎನ್‌ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ದಾಳಿ ನಡೆದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.