ಗೂಗಲ್ ಪೇ, ಫೋನ್ ಪೇ ಬಳಸುತ್ತಿರುವವರಿಗೆ ಅಗತ್ಯ ಮಾಹಿತಿ!

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೇ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಈಗಿಲ್ಲ. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ.

 

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಮುಂಚಿನ ಹಾಗೆ ವ್ಯಾಲೆಟ್ ನಲ್ಲಿ ನಗದಿನ ಜಾಗವನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಭದ್ರ ಪಡಿಸಿಕೊಂಡು ಬಿಟ್ಟಿದ್ದು, ಮೊಬೈಲ್ ಎಂಬ ಮಾಯಾವಿಯ ಬಳಕೆಯ ಬಳಿಕ ಎಲ್ಲ ಆನ್‌ಲೈನ್ ಬ್ಯಾಂಕ್​ ವಹಿವಾಟುಗಳನ್ನು ಮಾಡುವವರ ಪ್ರಮಾಣವೂ ಕೂಡ ಏರಿಕೆ ಕಂಡಿದೆ.

ವಿಶೇಷವಾಗಿ ಗೂಗಲ್​ ಪೇ, ಅಮೆಜಾನ್ ಪೇ, ಪೇಟಿಯಂ ಮತ್ತು ಫೋನ್ ಪೇ ನಂತಹ ಯುಪಿಐ ಆಧಾರಿತ ಅಪ್ಲಿಕೇಶನ್‌ಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.
ಬ್ಯಾಂಕ್​ ಖಾತೆಯನ್ನು ಹೊಂದಿರುವ ಹೆಚ್ಚಿನ ಮಂದಿ ಈಗ ಯುಪಿಐ ವಿಧಾನವನ್ನು ಅನುಸರಿಸುತ್ತಾರೆ. ವಿಶೇಷವಾಗಿ ಈಗ ಆನ್​ಲೈನ್​ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಕೆ ಜೊತೆಗೆ ಆನ್​ಲೈನ್​ ಮೂಲಕವೇ ಹಣವನ್ನು ಪಡೆಯಲು ಅವಕಾಶವಿದ್ದು ಇದಕ್ಕೆ ಕೆಲವು ನೀತಿನಿಯಮಗಳನ್ನೂ ಅನುಸರಿಸಬೇಕಾಗುತ್ತದೆ.

ಈ ಆ್ಯಪ್ ಮೂಲಕ ನೀವು ದಿನಕ್ಕೆ ಒಂದು ನಿರ್ದಿಷ್ಟ ಮೊತ್ತವನ್ನು ಮಾತ್ರ ವಹಿವಾಟು ನಡೆಸಬಹುದಾಗಿದೆ. ಪಾವತಿಗೆ ಎನ್​​ಪಿಸಿಐ ಮಿತಿ ಹೇರಿದ್ದು, ಎನ್​ಪಿಸಿಐ ಯುಪಿಐ ಪಾವತಿಗಳಿಗೆ ಮಿತಿಗಳನ್ನು ಇದೀಗ ಕಂಪನಿ ನಿಗದಿ ಮಾಡಿದೆ. ನೀವು ಯಯುಪಿಐ ಆ್ಯಪ್ ಮುಖಾಂತರ ದಿನಕ್ಕೆ ರೂ. 1 ಲಕ್ಷದವರೆಗೆ ಮಾತ್ರ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಅಮೆಜಾನ್​ ಪೇ ಮೂಲಕವೂ ಬಳಕೆದಾರರು ಕೇವಲ 1 ಲಕ್ಷವನ್ನು ಮಾತ್ರ ವರ್ಗಾವಣೆ ಮಾಡಬಹುದು. ಪ್ರತಿಯೊಂದು ಬ್ಯಾಂಕ್​ಗಳು ಬೇರೆ ಬೇರೆ ಪಾವತಿ ವಿಧಾನವನ್ನು ಹೊಂದಿರುತ್ತದೆ. ಇದರ ಹೊರತಾಗಿ ನೀವು ವರ್ಗಾಯಿಸಬಹುದಾದ ಮೊತ್ತವು ನೀವು ಹೊಂದಿರುವ ಬ್ಯಾಂಕ್​ಗೆ ಅನುಗುಣವಾಗಿರುತ್ತದೆ.

ಹೆಚ್ಚಿನ ಬಳಕೆದಾರರು ಆನ್‌ಲೈನ್ ಪಾವತಿಗಳಿಗಾಗಿ ಗೂಗಲ್ ಪೇ ಅನ್ನು ಬಳಕೆ ಮಾಡೋದು ಕಾಮನ್. ಈ ಆ್ಯಪ್ ಮೂಲಕ ಇತರರಿಗೆ ದಿನಕ್ಕೆ 1 ಲಕ್ಷ ರೂಪಾಯಿಯಷ್ಟು ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಎಷ್ಟು ಬಾರಿ ಬೇಕಾದರು ಇಷ್ಟು ಹಣವನ್ನು ಪಾವತಿ ಮಾಡುವ ಅವಕಾಶ ಕೂಡ ನೀಡಲಾಗಿದೆ.

ಮೊಬೈಲ್ ಬಳಕೆದಾರರು ಹೆಚ್ಚಾಗಿ ಪೇಟಿಯಂ ಮೂಲಕ ಕೂಡ ರೂ. 1 ಲಕ್ಷದವರೆಗೆ ಹಣಕಾಸಿನ ವಹಿವಾಟು ಮಾಡಬಹುದು. ಆದರೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಕಳುಹಿಸಲು ಸಾಧ್ಯವಿಲ್ಲ ಎಂಬುದನ್ನು ಗಮನಿಸಬೇಕು. ಬ್ಯಾಂಕ್​ ಖಾತೆಯಲ್ಲಿರುವ ಹಣದ ಮೇಲೆ ಕಂಪನಿ ನಿಗಾ ವಹಿಸಿ ವಹಿವಾಟಿನ ಬಗ್ಗೆ ಗಮನ ಹರಿಸುತ್ತದೆ.

ಎನ್​​ಪಿಸಿಐ ಅನುಸಾರ, ಪೇಟಿಯಂನಲ್ಲೂ ಇತರರಿಗೆ 1 ಲಕ್ಷ ರೂಪಾಯಿ ರವಾನೆ ಮಾಡಬಹುದು. ಆದರೆ ಇದರಲ್ಲಿ ಗಂಟೆಗೆ 20,000 ರೂಪಾಯಿಗಳನ್ನು ಮಾತ್ರ ಕಳುಹಿಸಬಹುದು. ಈ ರೀತಿಯಾಗಿ ಗಂಟೆಗೆ ಕನಿಷ್ಠ 5 ವಹಿವಾಟುಗಳು ಮತ್ತು ಗರಿಷ್ಠ 20 ವಹಿವಾಟುಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಮಾಡುವ ಪ್ರತಿಯೊಬ್ಬರು ಕೂಡ ಆನ್ಲೈನ್ ವಹಿವಾಟು ಮಾಡುವತ್ತ ಮುಖ ಮಾಡುತ್ತಿದ್ದಾರೆ.

Leave A Reply

Your email address will not be published.