ಮಧುಮೇಹಿಗಳಿಗೆ ಸಂತಸದ ಸುದ್ದಿ! ಪನ್ನೀರ್ ಸೇವನೆಯಿಂದ ನಿಯಂತ್ರಣಕ್ಕೆ ಬರಲಿದೆ ಡಯಾಬಿಟಿಸ್!

ಮಧುಮೇಹ ಅಥವಾ ಡಯಾಬಿಟಿಸ್ ಕಾಯಿಲೆ ಒಮ್ಮೆ ಬಂತೆಂದರೆ ಅದನ್ನು ಗುಣಪಡಿಸಲು ತುಂಬಾ ಹರಸಾಹಸ ಪಡಬೇಕು. ಅದನ್ನು ಗುಣಪಡಿಸುತ್ತೇವೆ ಎಂಬುದು ಕಷ್ಟಕರವಾದರೂ ನಿಯಂತ್ರಣದಲ್ಲಿ ಇಡಬಹುದು. ಇದರಲ್ಲಿ ನಾವು ಸೇವಿಸುವ ಆಹಾರ ಪದಾರ್ಥಗಳು ತುಂಬಾ ಪಾತ್ರವಹಿಸುವುದರಿಂದ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಕಡಿಮೆ ಇರುವಂತಹ ಆಹಾರವನ್ನು ಸೇರಿಸುವುದು ಮುಖ್ಯ. ಇಂತಹ ಆಹಾರಗಳಲ್ಲಿ ಪನ್ನೀರ್ ಕೂಡ ಒಂದಾಗಿದೆ.

ಪನ್ನೀರಿನಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳು ಇರುವ ಕಾರಣ ಇದರ ಸೇವನೆಯು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಪನೀರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಲ್ಲದೆ ಇತ್ತೀಚಿನ ಅಧ್ಯಯನವು ಪನ್ನೀರ್ ಸೇವನೆಯು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.

ಟೋನ್ಡ್ ಹಾಲಿನಿಂದ ತಯಾರಿಸಿದ ಪನೀರ್ ಮಧುಮೇಹಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಅವರು ದಿನಕ್ಕೆ 80 ರಿಂದ 100 ಗ್ರಾಂ ಪನೀರ್ ತಿನ್ನಬಹುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ಸುಮಾರು 100 ಗ್ರಾಂ ಪನ್ನೀರ್ ನಲ್ಲಿ ಬರೋಬ್ಬರಿ 18 ಗ್ರಾಂ ಪ್ರೋಟೀನ್ ಅಂಶ ಸಿಗುತ್ತದೆಯಂತೆ. ಹಗಲು ಅಥವಾ ರಾತ್ರಿಯ ಊಟದ ಸಮಯದಲ್ಲಿ ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು. ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ಈ ಡೈರಿ ಉತ್ಪನ್ನ ಆರೋಗ್ಯಕ್ಕೆ ಬಹಳ ಒಳ್ಳೆಯದು.

ಪನ್ನೀರನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ಹಸಿಯಾಗಿ ತಿಂದರೆ ಇನ್ನೂ ಒಳಿತು. ಯಾಕೆಂದರೆ ಹಸಿ ಪನೀರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿ ಎಂದು ಅಧ್ಯಯನದ ವರದಿಗಳು ತಿಳಿಸುತ್ತವೆ.

ಪನೀರ್ ಮೂಳೆ ಮತ್ತು ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ದೇಹದ ತೂಕವನ್ನು ನಿಯಂತ್ರಣ ಮಾಡುವ ಜೊತೆಗೆ ದೇಹದಲ್ಲಿ ಹೆಚ್ಚಾಗಿರುವ ಕೆಟ್ಟ ಕೊಬ್ಬಿನ ಅಂಶವನ್ನು ಇದು ಕರಗಿಸುತ್ತದೆ. ಹಾಗೂ ನಾರಿನಂಶ ಕೂಡ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಕಾರಣ ಹೊಟ್ಟೆ ಹಸಿವಿನ ನಿಯಂತ್ರಣ ಮಾಡಿ ದೇಹದ ತೂಕ ಇಳಸಲು ನೆರವಾಗುತ್ತದೆ.

Leave A Reply

Your email address will not be published.