Dark Chocolate Benefits : ಡಾರ್ಕ್ ಚಾಕೊಲೇಟ್ ತಿಂದರೆ ಈ ಆರೋಗ್ಯ ಲಾಭ ಖಂಡಿತ!

ಚಾಕಲೇಟ್ ಎಂದರೆ ಮಕ್ಕಳಿಗೆ ಪಂಚಪ್ರಾಣ. ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟಾನೇ!!.. ನಮಗೆಲ್ಲಾ ತಿಳಿದಿರುವಂತೆ, ಚಾಕೊಲೇಟ್ ನಲ್ಲಿ ವಿವಿಧ ಬಗೆಗಳಿವೆ. ಅವುಗಳಲ್ಲಿ ಬಿಳಿ ಚಾಕೊಲೇಟ್, ಮಿಲ್ಕ್ ಚಾಕೊಲೇಟ್ ಮತ್ತು ಡಾರ್ಕ್ ಚಾಕೊಲೇಟ್ ಗಳಿದ್ದು, ಇವೆಲ್ಲವೂ ವಿಭಿನ್ನ ಪದಾರ್ಥಗಳಿಂದ ಮಾಡಲ್ಪಟ್ಟಿರುತ್ತವೆ ಮತ್ತು ಇದರ ಪರಿಣಾಮವಾಗಿ, ಅವುಗಳ ಪೌಷ್ಠಿಕಾಂಶ ಪ್ರೊಫೈಲ್ ಗಳು ವಿಭಿನ್ನವಾಗಿರುತ್ತದೆ. ಚಾಕಲೇಟ್ ತಿನ್ನುವುದು ಒಳ್ಳೆಯದಲ್ಲ, ಇದರಿಂದ ಅನೇಕ ಅಡ್ಡ ಪರಿಣಾಮಗಳಿವೆ ಎಂಬುದನ್ನು ಬಾಲ್ಯದಿಂದಲೇ ನಾವು ಕೇಳಿರಬಹುದು. ಆದರೆ ನಾವಿಂದು ನಿಮಗೆ ನಿಯಮಿತ ಸೇವನೆಯಿಂದ ಡಾರ್ಕ್ ಚಾಕಲೇಟ್’ನಿಂದಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಸಲಿದ್ದೇವೆ.

 

ವಾಸ್ತವವಾಗಿ ಡಾರ್ಕ್ ಚಾಕೊಲೇಟ್ ಅನ್ನು ಆರೋಗ್ಯಕರ ವಿಧದ ಚಾಕೊಲೇಟ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವುಗಳು ನೈಸರ್ಗಿಕವಾಗಿರುತ್ತವೆ ಹಾಗೂ ಇದರಲ್ಲಿ ಯಾವುದೇ ಸಕ್ಕರೆಯನ್ನು ಹೊಂದಿರುವುದಿಲ್ಲ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯಕವಾಗಿದೆ. ಸತು ಕಬ್ಬಿಣ, ತಾಮ್ರ, ಫ್ಲಾವನಾಲ್​ಗಳು, ರಂಜಕ ಮತ್ತು ಇತರ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ.

ಚರ್ಮ:- ಸಿಹಿ ಸಿಹಿಯಾದ ಚಾಕೊಲೇಟ್ ನಿಮ್ಮ ದೇಹದ ಆರೋಗ್ಯವನ್ನು ಮಾತ್ರವಲ್ಲ ಬದಲಾಗಿ ನಿಮ್ಮ ಚರ್ಮಕ್ಕೂ ಕೂಡ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹೌದು, ಇದರಲ್ಲಿರುವ ಆಹಾರದ ಫ್ಲಾವನಾಲ್​ಗಳು ಚರ್ಮದ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ಮೂಲಗಳಿಂದ ತಿಳಿದಿದೆ. ಇದು ಮುಖ್ಯವಾಗಿ ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ಹಾನಿಗೊಳಗಾದ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ. ಚರ್ಮಕ್ಕೆ ರಕ್ತದ ಪರಿಚಲನೆಯನ್ನು ಕೂಡ ಸುಧಾರಿಸುತ್ತದೆ. ಇದರ ಪರಿಣಾಮದಿಂದ ಚರ್ಮವು ತೇವಾಂಶದಿಂದ ಕೂಡಿ, ಕಾಂತಿಯುತವಾಗುತ್ತದೆ.

ಒತ್ತಡ:- ಚಾಕೊಲೇಟ್ ಒಳ್ಳೆಯ ಭಾವನೆ, ಒಳ್ಳೆಯ ಯೋಚನೆ, ಒಳ್ಳೆಯ ಮನಃಸ್ಥಿತಿಯನ್ನು ಸೃಷ್ಟಿ ಮಾಡುತ್ತದೆ. ಮುಖ್ಯವಾಗಿ ಸಿರೋಟೋನಿನ್ ಮತ್ತು ಡೊಪಮೈನ್ ಎಂಬ ಹಾರ್ಮೋನ್ ಗಳನ್ನು ನಿಯಂತ್ರಿಸುವ ಕಾರಣ ಸದಾ ಚೈತನ್ಯದಿಂದ ಇರುವಂತೆ ಮಾಡುತ್ತದೆ. ಚಾಕೊಲೇಟ್‌ನಲ್ಲಿರುವ ಕೆಫೀನ್ ಒತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಅಂಶಗಳು ಒತ್ತಡವನ್ನು ಉಂಟುಮಾಡುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಇದನ್ನು ತಿನ್ನುವುದರಿಂದ ನಿಮ್ಮ ಮನಸ್ಥಿತಿಯನ್ನು ಸುಧಾರಿಸಬಹುದು. ಅಲ್ಲದೇ , ಯಾರೆಲ್ಲಾ ಖಿನ್ನತೆಯಿಂದ ಬಳಲುತ್ತಿರುತ್ತಾರೆಯೋ ಅವರಿಗೆ ಚಾಕೊಲೇಟ್ ಅತ್ಯುತ್ತಮವಾದ ಔಷಧಿಯಾಗಬಹುದು.

ಪೌಷ್ಟಿಕಾಂಶ ಹೆಚ್ಚಿಸಲು:-
ಚಾಕೊಲೇಟ್’ನಲ್ಲಿ ಯಥೇಚ್ಚವಾದ ಪೌಷ್ಟಿಕಾಂಶಗಳಿದ್ದು, ಕೋ ಕೋ ಎಂಬ ಬೀಜಗಳಿಂದ ತಯಾರಾಗುವ ಈ ಡಾರ್ಕ್ ಚಾಕೊಲೇಟ್ ಖನಿಜಗಳಿಂದ ತುಂಬಿದೆ. ಅಲ್ಲದೇ, ಸಾಕಷ್ಟು ಪ್ರಮಾಣದ ಫೈಬರ್ ಅನ್ನು ಹೊಂದಿದೆ. ಡಾರ್ಕ್ ಚಾಕೊಲೇಟ್ ಅನ್ನು ಕೋಕೋ ಬೀನ್ಸ್‌ನಿಂದ ತಯಾರಿಸಲಾಗುತ್ತದೆ, ಇದನ್ನು ಕೋಕೋ ಎಂದೂ ಕರೆಯುತ್ತಾರೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಇದು ದೇಹದಲ್ಲಿ ಸಮಾರು ೩೦೦ ಕಿಣ್ವಗಳನ್ನು ಸಕ್ರಿಯಗೊಳಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಬೇಕಾಗುವ ಪೋಷಕಾಂಶಗಳನ್ನು ಒದಗಿಸುತ್ತದೆ.

ಶೀತ ಮತ್ತು ಕೆಮ್ಮು:- ಡಾರ್ಕ್ ಚಾಕೊಲೇಟ್‌ನಲ್ಲಿರುವ ವಿಟಮಿನ್-ಸಿ ಮತ್ತು ಕೊಬ್ಬಿನಾಮ್ಲಗಳು ಶೀತ ಮತ್ತು ಕೆಮ್ಮನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರ ಬಳಕೆಯಿಂದ ಗಂಟಲು ನೋವು ಕೂಡ ಕಡಿಮೆಯಾಗುತ್ತದೆ.

ನರಮಂಡಲಕ್ಕೆ ಪ್ರಯೋಜನಕಾರಿ:- ಚಾಕೊಲೇಟ್ ತಿನ್ನುವುದರಿಂದ ನಿಮ್ಮ ಮೆದುಳು ಹಾಗು ಸ್ಮರಣಾಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಚಾಕೊಲೇಟ್ ನಲ್ಲಿರುವ ಫ್ಲಾನಾಲ್ ಅಂಶವು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಟಮಿನ್-ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಇದರಲ್ಲಿದ್ದು, ಇದು ನರಮಂಡಲದ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ. ಒಂದು ಮಹತ್ವದ ಅಧ್ಯಯನದ ಪ್ರಕಾರ, ಸತತವಾಗಿ ೫ ದಿನಗಳ ಕಾಲ ನಿಯಮಿತವಾಗಿ ಚಾಕೊಲೇಟ್ ಸೇವಿಸುವುದರಿಂದ ಮೆದುಳಿಗೆ ರಕ್ತದ ಹರಿವು ಸುಧಾರಣೆ ಉಂಟಾಗುವುದು. ಅಲ್ಲದೇ, ಇದು ಮಾನಸಿಕ ಸಮಸ್ಯೆ ಹೊಂದಿರುವವರಿಗೂ ರಿಫ್ರೆಶ್ ಮಾಡುತ್ತದೆ.

ಕ್ಯಾನ್ಸರ್:- ತಜ್ಞರ ಪ್ರಕಾರ, ಡಾರ್ಕ್ ಚಾಕೊಲೇಟ್‌ನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕಂಡುಬರುತ್ತವೆ. ಇದರಲ್ಲಿರುವ ಫ್ಲೇವನಾಯ್ಡ್ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ.

ಕೊಲೆಸ್ಟ್ರಾಲ್‌:- ಸಂಶೋಧನೆಯೊಂದರ ಪ್ರಕಾರ, ಚಾಕೊಲೇಟ್‌ನಲ್ಲಿರುವ ಕೋಕೋ ಫ್ಲಾವನಾಲ್‌ಗಳಿಂದ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ. ಕೆಲವು ಅಧ್ಯಯನಗಳಿಂದ ಈ ವಿಷಯ ಸಾಬೀತಾಗಿದೆ. ಅಲ್ಲದೇ, ಚಾಕೊಲೇಟ್ ಗಳು ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯುವನ್ನು ಕೂಡ ಗುಣ ಪಡಿಸುತ್ತದೆ. ಆದರೆ ಹೆಚ್ಚಿನ ಮಟ್ಟದ ಚಾಕೊಲೇಟ್ ಸೇವನೆಯು ಬೇರೆ ರೀತಿಯ ಸಮಸ್ಯೆಗಳು ಹೆಚ್ಚಿಸಬಹುದು ಎಚ್ಚರ.

Leave A Reply

Your email address will not be published.